ಉತ್ತರ ಕೊರಿಯಾ ಅಣ್ವಸ್ತ್ರ ಸಾಮರ್ಥ್ಯದ ರಾಕೆಟ್ ಲಾಂಚರ್ ಪರೀಕ್ಷೆ

ಉತ್ತರ ಕೊರಿಯಾ ಅಣ್ವಸ್ತ್ರ ಸಾಮರ್ಥ್ಯದ ರಾಕೆಟ್ ಲಾಂಚರ್ ಪರೀಕ್ಷೆ ನಡೆಸಿದೆ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಅವರ ಮಗಳು ಕಿಮ್ ಜು ಏ ಸಮ್ಮುಖದಲ್ಲಿ ಈ ಪರೀಕ್ಷೆ ನಡೆದಿದೆ. ಪರೀಕ್ಷೆ ಬಳಿಕ ಇದು, ೪೨೦ ಕಿಮೀ ವ್ಯಾಪ್ತಿಯೊಳಗಿನ ಶತ್ರುಗಳನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಕಿಮ್ ಜಾಂಗ್ ಉನ್ ತಿಳಿಸಿದ್ದಾರೆ.

ಅಮೆರಿಕ ಮತ್ತು ದಕ್ಷಿಣ ಕೊರಿಯಾ ಈ ವಾರ ಜಂಟಿ ಸಮರಾಭ್ಯಾಸ ಪ್ರಾರಂಭಿಸಿದ ನಂತರ, ಉತ್ತರ ಕೊರಿಯಾ ೧೨ ೬೦೦ಎಂ.ಎಂ. ಕ್ಯಾಲಿಬರ್ ಮಲ್ಟಿಪಲ್ ರಾಕೆಟ್ ಲಾಂಚರ್‌ಗಳ ಪರೀಕ್ಷೆ ನಡೆಸಿದೆ. ಈ ಪರೀಕ್ಷೆಯು ಪರಮಾಣು ಶಸ್ತ್ರಾಸ್ತ್ರಗಳ ವಿನಾಶಕಾರಿ ಶಕ್ತಿಯ ಬಗ್ಗೆ ಶತ್ರುಗಳಿಗೆ ಅರಿವು ಮೂಡಿಸುತ್ತದೆ ಎಂದು ಉನ್ ಎಚ್ಚರಿಕೆ ನೀಡಿದ್ದಾರೆ.

ಉಡಾಯಿಸಲಾದ ರಾಕೆಟ್‌ಗಳು ಸುಮಾರು ೩೬೪.೪ ಕಿಮೀ ದೂರದಲ್ಲಿರುವ ಕೊರಿಯಾದ ಪೂರ್ವ ಸಮುದ್ರದಲ್ಲಿರುವ ದ್ವೀಪದಲ್ಲಿದ್ದ ಗುರಿಗೆ ನಿಖರವಾಗಿ ಹೊಡೆದಿವೆ ಎಂದು ವರದಿಯಾಗಿದೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ (south korea) ಸಮರಾಭ್ಯಾಸದ ಬಗ್ಗೆ ಮಾತನಾಡಿದ್ದ ಕಿಮ್ ಜಾಂಗ್ ಉನ್ ಅವರ ಸಹೋದರಿ, ಕಿಮ್ ಯೋ ಜಾಂಗ್, ಯುಎಸ್-ದಕ್ಷಿಣ ಕೊರಿಯಾ ಮಿಲಿಟರಿ ಸಮರಾಭ್ಯಾಸಗಳು ಪ್ರಚೋದನಕಾರಿ ಮತ್ತು ಆಕ್ರಮಣಕಾರಿಯಾಗಿದೆ. ಅದು ಪ್ರಾದೇಶಿಕ ಸ್ಥಿರತೆಗೆ ಹಾನಿ ಮಾಡುತ್ತದೆ. ದಕ್ಷಿಣ ಕೊರಿಯಾ ಮತ್ತು ವಾಷಿಂಗ್ಟನ್ ಈ ಕವಾಯತು ಉತ್ತರ ಕೊರಿಯಾದ ವಿರುದ್ಧ ಸಜ್ಜಾದಂತೆ ಇದೆ ಎಂದಿದ್ದರು. ಇದರ ಬೆನ್ನಲ್ಲೇ ಕಿಮ್ ಜಾಂಗ್ ಉನ್ ಈ ಪರೀಕ್ಷೆ ನಡೆಸಿದ್ದಾರೆ.

Leave a Reply

Your email address will not be published.