ಅಮೆರಿಕ ದೇಶ ರಚನೆಯಾಗಿ ಜು.೪ಕ್ಕೆ ೨೫೦ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ ಅಲ್ಲಿನ ಸರ್ಕಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರವುಳ್ಳ ಚಿನ್ನದ ನಾಣ್ಯವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.ಅಮೆರಿಕದ ಕಾನೂನು ಪ್ರಕಾರ ಅಧ್ಯಕ್ಷರು ಬದುಕಿರುವಾಗಲೇ ನಾಣ್ಯದಲ್ಲಿ ಅವರ ಫೋಟೋ ಬಳಸುವಂತಿಲ್ಲ. ಆದರೆ ಇದು ಸ್ಮರಣಾರ್ಥ ನಾಣ್ಯವಾಗಿರುವ ಕಾರಣ, ಚಲಾವಣೆಯಲ್ಲಿರುವ ಕರೆನ್ಸಿಗಿಂತ ಭಿನ್ನ. ಹೀಗಾಗಿ ಟ್ರಂಪ್ ಫೋಟೋ ಬಳಕೆಯಾಗಿದೆ.
೨೪ ಕ್ಯಾರೆಟ್ ಚಿನ್ನದ ನಾಣ್ಯದಲ್ಲಿ ಟ್ರಂಪ್ ಮುಷ್ಟಿ ಹಿಡಿದು ರೆಸಲ್ಯೂಟ್ ಮೇಜಿನ ಮೇಲೆ ಒರಗಿರುವುದನ್ನು ನೋಡಬಹುದು. ಅಮೆರಿಕದಲ್ಲಿ ಹಾಲಿ ಅಧ್ಯಕ್ಷರ ಫೋಟೋ ನಾಣ್ಯದ ಮೇಲೆ ಕಾಣಿಸಿಕೊಂಡಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು ಅಮೆರಿಕದ ೩೦ನೇ ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ಅವರ ಚಿತ್ರವು ಅಮೆರಿಕಕ್ಕೆ ಸ್ವಾತಂತ್ರ್ಯ ದೊರೆತ ೧೫೦ನೇ ವರ್ಷಾಚರಣೆಗಾಗಿ ೧೯೨೬ರಲ್ಲಿ ಬಿಡುಗಡೆಗೊಳಿಸಲಾಗಿತ್ತು.

Leave a Reply