ಇಂಗ್ಲೆಂಡ್
        
  • ಅಭಿರಾಮ್.ಕೆ


1. London Bridge

ಇಂಗ್ಲೆಂಡ್ ಎಂದ ತಕ್ಷಣ ನೆನಪಾಗುವುದು, ಶತಮಾನಗಳ ಕಾಲ ನಮ್ಮನಾಳಿದ ಕೆಂಪು ಮುಖಗಳು, ಒಳ ಜಗಳಗಳನ್ನು ಸೃಷ್ಟಿಸಿ ಅಖಂಡ ಭಾರತದವನ್ನು ಒಡೆದ ಕುತಂತ್ರಿಗಳು, ಸುಮಾರು ಮೂರರಲ್ಲಿ ಒಂದAಶದಷ್ಟು ವಿಶ್ವವನ್ನಾಳಿದವರು, ಇನ್ನೆನೋ,,, ಆದರೆ ಒಮ್ಮೆ ಅವರ ನಾಡಿನೆಡೆಗೆ ಕಣ್ಣಾಡಿದರೆ ಕಾಣುವ ಚಿತ್ರಣವೇ ಬೇರೇ..

ಸುಮಾರು ೫ ಕೋಟಿಯಷ್ಡು ಜನಸಂಖ್ಯೆ ಹೊಂದಿರುವ ದೇಶ ಇಂಗ್ಲೆAಡ್, ದೂಡ್ಡ ಬ್ರಿಟನ್ ದ್ವೀಪದ ಮೂರು ದೇಶಗಳಲ್ಲೇ ದೂಡ್ಡದು. ಉಳಿದ ಎರಡು ದೇಶಗಳಾದ scotland ಮತ್ತು ವೇಲ್ಸ್ ಗಳನ್ನು ಹೂರಗಿನ ಉತ್ತರ ಐರ್ಲಾಂಡ್ ಅನ್ನು ನಿಯಂತ್ರಿಸುವ ಕೇಂದ್ರವಾಗಿ, ಆಧುನಿಕ ಕೈಗಾರೀಕರಣದ ತವರುಮನೆಯಾಗಿ ತಮಸಾ ನದಿತೀರದಲ್ಲಿ ಲಂಡನ್ ನಗರ ನಿಂತಿದೆ. ಇದು ಇಂಗ್ಲೆoಡ್, ಬ್ರಿಟನ್ ಮತ್ತು ಅವಿಭಜಿತ ರಾಜ್ಯವಾದ ಯುನೈಟೆಡ್ ಕಿಂಗ್ ಡಮ್ ಮೂರರ ರಾಜಧಾನಿಯಾಗಿ ಕಾರ್ಯ ನಿರ್ವಾಯಿಸುತ್ತದೆ.

ಇಂಗ್ಲೆoಡ್ ನಲ್ಲಿ ರಾಜಸಾಮ್ಯದ ಪ್ರಜಾಪ್ರಭುತ್ವ ವ್ಯವಸ್ತೆ ಜಾರಿಯಲ್ಲಿದೆ, ಪ್ರಜೆಗಳು ತಮ್ಮ ಪ್ರತಿನಿದಿಯನ್ನು ಆಯ್ಕೆಮಾಡಿ ಸಂಸತ್ತಿನ ಮೇಲ್ಮಗೆಗೆ ಕಳುಯಿಸುತ್ತಾರೆ (ಹೌಸ್ ಆಪ್ ಕಾಮನ್), ಕೆಳಮನೆಯಲ್ಲಿ ಉದ್ಯಮಿಗಳು. ಶ್ರೀಮಂತ ವರ್ಗ ಮತ್ತು ವಿದ್ವಜ್ಜನರನ್ನು ಕೂರಿಸಲಾಗಿತ್ತದೆ (ಹೌಸ್ ಆಪ್ ಲಾರ್ಡ) ಇವೆರಡರ ನಿಯಂತ್ರಣವನ್ನು ಬ್ರಿಟನ್ನಿನ ರಾಜಮನೆತನವೆ ನಡೆಸುತ್ತದೆ. ಈಗೀನಾ ರಾಣಿ ಇಮ್ಮಡಿ ಎಲಿಜಬೆತ್ (ಏಋ೨) ಬ್ರಿಟನ್ ನ ಇತಿಹಾಸದಲ್ಲೇ ಅತ್ಯಂತ ದಿರ್ಘಕಾಲದ ಆಡಳಿತ ನಡಳಿತ ನಡೆಸಿದ ಕೀರ್ತಿಗೆ ಬಾಜನರಾದ್ದಾರೆ(೧೯೫೩ ರಿಂದ ಇಲ್ಲಿಯವರೆಗೆ). ರಾಜಕೀಯ ಆಡಳಿತ ಜತೆಗೆ, ಉದ್ಯಮಗಳ ಶಿಕ್ಷಣದ ಮತ್ತು ನ್ಯಾಯಾಂಗದ ಆಡಳಿತವೂ ರಾಜಮನೆತನದ್ದೆ.

ಶಿಕ್ಷಣಕ್ಕೆ ಮಹತ್ವದ ಕೂಡುಗೆಗಳನ್ನು ನೀಡಿದ ಕೆಮ್ ಬ್ರಿಜ್ಡ್, ಆಕ್ಸಪ್ರೋಡ್, ಇಂಪಿಯಲ್, ಲಂಡನ್, ಇನ್ನೂ ಹಲವು ವಿಶ್ವದರ್ಜೆಯ ವಿಶ್ವವಿದ್ಯಾನಿಲಯಗಳು ಇಲ್ಲಿವೆ, ಭಾರತದಲ್ಲಿ ಇರುವಂತೆ ಇಲ್ಲಿನ ಶಿಕ್ಷಣ ವ್ಯವಸ್ತೆ ಜಾರಿಯಲ್ಲಿದೆ, ಸುಮಾರು ೪೦೦-೫೦೦ ವರ್ಷಹಳೆಯದಾದ ಹಲವಾರು ಸಂಸ್ಥೆಗಳನ್ನು ನಿವಿಲ್ಲಿ ಕಾಣಬಹುದು, ಹಲವಾರು ಮಹತ್ವದ ಸಾದನೆಮಾಡಿದ ಜನರನ್ನು ಗೌರವಿಸುವ ಪದ್ದತಿಯನ್ನು ಒಳಗೊಂಡಿರುವುದರಿoದಲೋ ಏನೋ ಸುಮಾರು ೩೦-೪೦ ಪ್ರತಿಶತ ಭಾರತಿಯರು ಇಲ್ಲಿನ ಶಿಕ್ಷಣ ವ್ಯವಸ್ಥೆಯನ್ನು ಆಳುತಿದ್ದಾರೆ. ವಿಶ್ವದ ಎಲ್ಲೆಡೆಯಿಂದ ವಿದ್ಯಾಬ್ಯಾಸಕ್ಕಾಗಿ ವಿಧ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ, ಶಿಕ್ಷಣವು ಇಂಗ್ಲೆoಡ್ ನ ಆಧಾಯಕ್ಕೆ ಮಹತ್ವದ ಕೊಡುಗೆಯನ್ನು ನೀಡುತ್ತೆದೆ.


2.Royal Holloway university of London 

ಇಪ್ಪತ್ತೆನೆ ಶತಮಾನದ ಮೊದಲಿಗೆ ಕೈಗಾರಿಕಾ ಕ್ರಾಂತಿಯ ನಂತರ ಅಮೇರಿಕೆಯನ್ನು, ಜರ್ಮನಿ ಮತ್ತು ಪ್ರೆಂಚ್ಗಳನ್ನು ಹೊಂದ್ದಿಕ್ಕಿದ ಹೆಗ್ಗಳಿಕೆ ಇಂಗ್ಲೆAಡ್ ನದ್ದು. ಈಡೀ ದೇಶ ಕಲ್ಲಿದ್ದಲು ಮತ್ತು ಮರಗಳಿಂದ ಕುಡಿದೆ, ತಮಸಾ ನದಿ ಕೊಡ ಇಲ್ಲಿನ ಕೈಗಾರಿಕಾ ಪ್ರಪಂಚಕ್ಕೆ ಪ್ರಭಲವಾದ ಕೊಡುಗೆಯನ್ನೆ ನಿಡೀದೆ. ವಾಹನ, ಚರ್ಮ, ಮಾಂಸ, ಬಟ್ಟೆ ಮತ್ತು ಕರಕುಶಲ ವಸ್ತುಗಳ ಉದ್ಯಮ ಇಗ್ಲೆಂಡ್ ಮುಖ್ಯ ಉದ್ಯಮವಾಗಿದೆ. ರೋಲ್ಸರಾಯ್ಸ, ಜ್ವಾಗ್ವರ್, ಲ್ಯಾಂಡ ರೋವರ್, ಪ್ಯಾಪೆ, ಬಿ.ಪಿ. ಉನಿಲಿವರ್, ಹೆಚ್,ಎಸ್.ಬಿ.ಸಿ, ಪರ್ಡಿ ಮತ್ತು ಹೊಲೆಂಡ್ ಆಂಡ್ ಹೋಲೆಂಡ್ ಮುಂಚುಣಿಲ್ಲಿ ನಿಲ್ಲುತ್ತದೆ.

ಪ್ರವಾಸೋದ್ಯಮ ಇಲ್ಲಿನ ಆದಾಯದ ಮುಖ್ಯ ಸೆಲೆಗಳಲ್ಲಿ ಒಂದು. ವಿಶ್ವದ ಎಲ್ಲೆಡೆಯಿಂದ ಜನರು ಇಲ್ಲಿ ಸೌಂದರ್ಯವನ್ನು ಸವಿಯಲು ಬರುತ್ತಾರೆ, ಇಲ್ಲಿನ ರಾಜಮನೆತನದ ಅರಮನೆಗಳು ಸುಮಾರು ೨೦೦-೩೦೦ ವರ್ಷಳೆಯದ್ದಾದ ಕಟ್ಟಡಗಳು, ನದಿ ಇಲ್ಲಿನ ಸಾಪ್ರಾಯಿಕ ಅಡುಗೆಗಳು ಪ್ರವಾಸಿಗಳ ಮನ ತಣಿಸುತ್ತವೆ. ತಮಸಾ ನದಿಗೆ ಕಟ್ಟಲಾದ ಸೇತುವೆ ಮತ್ತು ಇಲ್ಲಿನ ಸಂಸತ್ತು ಭವನ ಪ್ರವಾಸಿಗರ ಮನ ಸೆಳೆಯುತ್ತವೆ (ಕಳೆದ ಮಾರ್ಚ೨೨ ರಂದು ಭಯೋತ್ಪಾದಕರು ಸೇತುವೆಯ ಮೂಲಕ ಸಂಸತ್ತ ಪ್ರವೇಶಿಸಲು ಪ್ರತ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು, ಸುಮಾರು ಜನರ ಪ್ರಾಣಕ್ಕೆ ಹಾನಿಯುಂಡು ಮಾಡಿದ್ದ ಆ ದಾಲಿಯನ್ನು ಇಲ್ಲಿನ ಪೋಲಿಸರು ಕೆಲವೆ ಕ್ಷಣಗಳಲ್ಲಿ ನಿಯಂತ್ರಿದ್ದು ವಿಶೇಷ). ಇವರ ಇತಿಹಾಸವನ್ನು ನೆನಪಿಸುವ ಹಲವಾರು ಕಟ್ಟಡಗಳು ನಮ್ಮನ್ನು ಆರ್ಶ್ಚಯಗೊಳ್ಳುವಂತೆ ಮಾಡುತ್ತವೆ.


3.Royal Holloway 

ಇಲ್ಲಿನ ಮುಖ್ಯ ಖಾದ್ಯ ಜಿಂಕೆ ಅಥವಾ ಹಂಸದ ಮಾಂಸ ಮತ್ತು ದ್ರಾಕ್ಷಿಯಿಂದ ಮಾಡಿದ ಮದ್ಯ, ಈಗಿನ ಜನರು ಬೇರೆ ದೇಶಗಳ ಅಡುಗೆಗಳೆಡೆಗೆ ಮಾರುಹೊಗಿತ್ತಿದ್ದರೂ, ಹಳ್ಳಿಗಳಲ್ಲಿ ಈಗಲೂ ಮೂಲ ಖಾದ್ಯವೆ ಹೆಚ್ಚು ಪ್ರಚಲಿತದಲ್ಲಿದೆ. ಇಲ್ಲಿ ಯಾವುದೆ ನೈಸರ್ಗಿಕ ಮಾಂಸಹಾರಿ ಪ್ರಾಣಿಗಳಿಲ್ಲದೆ ಇರುದರಿಂದ ಇಲ್ಲಿನ ಸರ್ಕಾರ ಕಾಡುಪ್ರಾಣಿಗಳನ್ನು ಬೇಟೆಯಾಡಲು ಅನುಮತಿ ನೀಡುತ್ತದೆ. ಬ್ರೆಡ್, ಮೊಟ್ಟೆ, ಹಾಲು ಮತ್ತು ಮಾಂಸ ಇಲ್ಲಿನವರ ಅಚ್ಚುಮೆಚ್ಚಿನ ಖಾದ್ಯ, ಸುತ್ತಲೂ ಸಮುದ್ರದಿಂದ ಮೀನು ಮತ್ತು ಸಮುದ್ರ ಖಾದ್ಯಗಳೂ ಇಲ್ಲಿನ ಪ್ರವಾಸಿಗರ ಮನ ಸೆಳೆಯುತ್ತದೆ.

ಇಲ್ಲಿನ ತಾಪಮಾನ ಸುಮಾರು ೫.೧೫’ಚ ಯಾವಾಗಲೂ ಚಳಿಯಗಾಳಿ ಮತ್ತು ಮಳೆಯೊಂದ ಕೂಡಿದೆ ಇಗ್ಲೆಂಡ್ ದೇಶ ವರ್ಷಕ್ಕೋಮ್ಮೆ ಅಥವಾ ಎರಡು ಬಾರಿ ಸುರ್ಯನ ಪ್ರಖರತೆಯನ್ನು ಕಾಣುತ್ತದೆ. ಇಲ್ಲಿ ಹಣದ ಚಲಾವಣೆ ಪೌಂಡ್ (ಸುಮಾರು ೮೨ ರುಪಾಯಿ)ನಲ್ಲಿಯೆ, ಯುರೋಪಿನ ಒಕ್ಕೂಟದಿಂದ ಹೂರಬಂದ ನಂತರ ಕೆಲವು ದಿನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಇಗ್ಲೆಂಡ್, ಅದರಿಂದ ಹೊರಬರಲು ಸಾಕಷ್ಟು ಪ್ರಯತ್ನ ಪಡುತ್ತಿದೆ. ಭಾರತದದಿಂದ ಹಲವಾರು ವಿಮಾನಗಳು ಇಲ್ಲಿಗೆ ಸಂಪರ್ಕ ಕಲ್ಪಿಸುತ್ತೆವೆ, ಬೆಂಗಳೂರಿನಿಂದ ನೇರ ವಿಮಾನದ ವ್ಯವಸ್ಥೆಯೂ ಇದ್ದೂ,(ಸುಮಾರು ೧೦ ಗಂಟೆಗಳು, ೩೫ ಸಾವಿರ ರೂಪಾಯಿಗಳು) ಇಲ್ಲಿ ತಂಗಲು ಸಾಕಷ್ಟು ವ್ಯವಸ್ಥೆ ಇದೆ. ಇಲ್ಲಿಗೆ ಬರುವುದಾದರೆ ಚಳಿ ಮತ್ತು ಮಳೆಗೆ ಸಿದ್ದರಾಗಿಯೆ ಬನ್ನಿ…

Leave a Reply

Your email address will not be published.