ಕಾರ್ಬೋಹೈಡ್ರೇಟ್ ಹೆಚ್ಚಿರುವ ಆಹಾರದಿಂದ ತೂಕ ಹೆಚ್ಚಾಗುತ್ತದೆ. ಮಧುಮೇಹ, ಹೃದಯ ಸಂಬಂಧಿತ ಸಮಸ್ಯೆಗಳಿಗೆ ಕಾರಣವಾಗಬಹುದು. ಕಾರ್ಬೋಹೈಡ್ರೇಟ್ ದೇಹಕ್ಕೆ ಗ್ಲೂಕೋಸ್ ಒದಗಿಸುತ್ತವೆ. ಗ್ಲೂಕೋಸ್ ಹೆಚ್ಚಿರುವುದು ಹಾನಿಕಾರಕವಾಗಿದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.
ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಅವಶ್ಯವಾಗಿದೆ. ಪ್ರತಿಯೊಬ್ಬರೂ ಸಾಕಷ್ಟು ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸುವುದು ಒಳ್ಳೆಯದು ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಸಾಮಾನ್ಯವಾಗಿ ಫಿಟ್‌ನೆಸ್‌ಗೆ ಹೆಚ್ಚು ಒತ್ತು ನೀಡುವವರು ತಮ್ಮ ಆಹಾರದಿಂದ ಕಾರ್ಬೋಹೈಡ್ರೇಟ್‌ಗಳನ್ನು ತೆಗೆದುಹಾಕುವುದನ್ನು ಹೆಚ್ಚಾಗಿ ಕಾಣಬಹುದು. ಆದರೆ, ಕಾರ್ಬೋಹೈಡ್ರೇಟ್‌ಗಳು ನಿಜವಾಗಿಯೂ ಹಾನಿಕಾರಕವೇ? ತೂಕ ಹೆಚ್ಚಾಗುವುದು, ಫಿಟ್‌ನೆಸ್ ಸಂಬಂಧಿತ ಸಮಸ್ಯೆಗಳಿಗೆ ಕಾರ್ಬೋಹೈಡ್ರೇಟ್‌ಗಳು ಮಾತ್ರ ಕಾರಣವೇ? ಪ್ರತಿಯೊಬ್ಬರೂ ತಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳ ಪ್ರಮಾಣವನ್ನು ಕಡಿಮೆ ಮಾಡಬೇಕೇ? ಆಹಾರದ ವಿಷಯಕ್ಕೆ ಬಂದರೆ ವಿವಿಧ ಪ್ರಕಾರದ ಗೊಂದಲಗಳು ಎದುರಾಗುತ್ತವೆ ಎಂದು ಪೌಷ್ಟಿಕ ತಜ್ಞರು ಗಮನಿಸುತ್ತಾರೆ.
ನಿಮ್ಮ ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳ ಸೇವನೆಗೂ ಕೂಡ ಅನ್ವಯಿಸುತ್ತದೆ. ಇತರ ಪೋಷಕಾಂಶಗಳಂತೆ ನಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್‌ಗಳು ಸಹ ಬೇಕಾಗುತ್ತವೆ. ಆಹಾರದಿಂದ ಅವುಗಳನ್ನು ಸಂಪೂರ್ಣವಾಗಿ ತೆಗೆದುಹಾಕುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. ಆಹಾರದಲ್ಲಿ ಕಾರ್ಬೋಹೈಡ್ರೇಟ್‌ಗಳ ಕೊರತೆಯು ಅಕಾಲಿಕ ಮರಣದ ಅಪಾಯ ಕೂಡ ಹೆಚ್ಚಿಸಬಹುದು ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
ಕಾರ್ಬೋಹೈಡ್ರೇಟ್‌ಗಳಲ್ಲಿ ಹೆಚ್ಚಿನ ಆಹಾರವನ್ನು ಹೆಚ್ಚಾಗಿ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಮಧುಮೇಹ, ಹೃದಯ ಸಂಬAಧಿತ ಸಮಸ್ಯೆಗಳಿಗೆ ಕಾರಣವಾಗುವ ಅಂಶ ಎಂದು ಪರಿಗಣಿಸಲಾಗುತ್ತದೆ. ವಾಸ್ತವದಲ್ಲಿ ಕಾರ್ಬೋಹೈಡ್ರೇಟ್‌ಗಳು ದೇಹಕ್ಕೆ ಗ್ಲೂಕೋಸ್ ಒದಗಿಸುತ್ತವೆ. ಗ್ಲೂಕೋಸ್‌ನ ಪ್ರಮಾಣ ಹೆಚ್ಚಾಗುವುದು ವಿವಿಧ ರೀತಿಯಲ್ಲಿ ಹಾನಿಕಾರಕವಾಗಿದೆ. ತೂಕ ನಷ್ಟ, ಹೃದಯ, ರಕ್ತನಾಳದ ಆರೋಗ್ಯ ಪ್ರಯೋಜನಗಳಿಗೆ ಕಡಿಮೆ ಕಾರ್ಬೋಹೈಡ್ರೇಟ್‌ಗಳ ಪರಿಣಾಮಕಾರಿತ್ವ ಹಾಗೂ ಕಡಿಮೆಕೊಬ್ಬಿನ ಆಹಾರಗಳ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ನಡೆಸಿದ ಅಧ್ಯಯನದಲ್ಲಿ ಸಂಶೋಧಕರು ಗಮನಾರ್ಹವಾದ ಅಂಶಗಳನ್ನು ಪತ್ತೆ ಮಾಡಿದ್ದಾರೆ.
ಜರ್ನಲ್ ಆಫ್ ಇಂಟರ್ನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಸಂಶೋಧನೆ ತಿಳಿಸುವ ಪ್ರಕಾರ, ಕಾರ್ಬೋಹೈಡ್ರೇಟ್‌ಗಳಲ್ಲಿ ಹೆಚ್ಚಿನ ಆಹಾರವನ್ನು ಸೇವಿಸುವ ವ್ಯಕ್ತಿಗಳು ಅಕಾಲಿಕ ಮರಣದ ಅಪಾಯ ಹೆಚ್ಚಿಸಬಹುದು. ಆದರೆ, ಕಡಿಮೆ ಕೊಬ್ಬಿನ ಆಹಾರವು ದೀರ್ಘಾವಧಿಯ ಜೀವಿತಾವಧಿಗೆ ಕಾರಣವಾಗಬಹುದು.
ಚೀನಾ ಹಾಗೂ ಅಮೆರಿಕದ ವಿಶ್ವವಿದ್ಯಾಲಯಗಳ ಸಂಶೋಧಕರ ತಂಡವು ಅಧ್ಯಯನದಲ್ಲಿ ೫೦ರಿಂದ ೭೧ ವರ್ಷ ವಯಸ್ಸಿನ ೩೭೧,೧೫೯ ಜನರ ಮಾದರಿ ಪರಿಗಣಿಸಲಾಗಿದೆ. ಈ ಜನರ ೨೩ ವರ್ಷಗಳಗವರೆಗೆ ಅವರ ಗಮನಹರಿಸಲಾಯಿತು. ಈ ಅವಧಿಯಲ್ಲಿ ೧೬೫,೬೯೮ ಜನರು ನಿಧನರಾದರು. ಕಡಿಮೆ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವ ಆಹಾರಕ್ರಮದಲ್ಲಿ ಭಾಗವಹಿಸುವವರು ಶೇ.೩೮ರಷ್ಟು ಮರಣ ದರವನ್ನು ಕಂಡುಬಂದಿದೆ. ಇನ್ನೂ ಕಡಿಮೆ ಕೊಬ್ಬಿನ ಆಹಾರವನ್ನು ಸೇವಿಸುವುದರಿಂದ ಅಕಾಲಿಕ ಮರಣದ ಅಪಾಯವನ್ನು ಶೇ.೩೪ರಷ್ಟು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯಿಂದ ಕಂಡುಬಂದಿದೆ. ಸಾಕಷ್ಟು ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸುವವರಿಗೆ ಹೋಲಿಸಿದರೆ, ಕೀಟೋ ತರಹದ ಆಹಾರವನ್ನು ಅನುಸರಿಸುವ ವ್ಯಕ್ತಿಗಳು ಯಾವುದೇ ಕಾರಣದಿಂದ ಸಾಯುವ ಸಾಧ್ಯತೆಯು ಶೇ.೨೮ರಷ್ಟು ಹೆಚ್ಚಿನದಾಗಿದೆ ಎಂದು ಸಂಶೋಧನೆ ಹೇಳಿದೆ.
ಕಡಿಮೆ ಕೊಬ್ಬಿನ ಆಹಾರವನ್ನು ಅನುಸರಿಸುವುದರಿಂದ ಒಟ್ಟಾರೆ ಮರಣ ಪ್ರಮಾಣ ಶೇ.೧೮ರಷ್ಟು ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಉಂಟಾಗುವ ಮರಣ ಪ್ರಮಾಣ ಶೇ.೧೬ರಷ್ಟು ಹಾಗೂ ಕ್ಯಾನ್ಸರ್ ಸಂಬಂಧಿತ ಮರಣ ಪ್ರಮಾಣ ಶೇ.೧೮ರಷ್ಟು ಕಡಿಮೆಯಾಗಬಹುದು ಎಂದು ಸಂಶೋಧನೆ ವಿವರಿಸುತ್ತದೆ. ಆಹಾರ ಕ್ರಮದಲ್ಲಿ ಕಾರ್ಬೋಹೈಡ್ರೇಟ್‌ಗಳ ಸಮತೋಲಿತ ಸೇವನೆಯನ್ನು ಕಾಪಾಡಿಕೊಳ್ಳುವುದು ಅವಶ್ಯವಾಗಿದೆ.
ಸೂಚನೆ: ಈ ವರದಿಯಲ್ಲಿ ನಿಮಗೆ ನೀಡಲಾದ ಎಲ್ಲ ಆರೋಗ್ಯ ಸಂಬAಧಿತ ಮಾಹಿತಿ ಹಾಗೂ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ತಜ್ಞ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Leave a Reply