ವಿಶ್ವದ ಯಾವುದೇ ಕ್ರಿಕೆಟಿಗರಿಗೂ ಸಾಧ್ಯವಾಗದ ದಾಖಲೆ ಬರೆದ ಅಮೆಲಿಯಾಕೆರ್!!

ನ್ಯೂಜಿಲೆಂಡ್ ಮಹಿಳಾ ತಂಡದ ನಾಯಕಿ ಅಮೆಲಿಯಾ ಕೆರ್ ಅವರು ಟಿ೨೦ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ ಯಾವುದೇ ಕ್ರಿಕೆಟರ್ಗೂ ಸಾಧ್ಯವಾಗದ ದಾಖಲೆಯನ್ನು ನಿರ್ಮಿಸಿದ್ದಾರೆ. ಅಮೆಲಿಯಾ ಈಗ ಟಿ೨೦ಐ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಒಟ್ಟಾರೆ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮಾರ್ಚ್ ೨೨, ೨೦೨೬ ರಂದು ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಖಿ೨೦I ನಲ್ಲಿ ಅಮೆಲಿಯಾ ಕೆರ್ ಈ ಗಮನಾರ್ಹ ಸಾಧನೆಯನ್ನು ಮಾಡಿದರು. ವೆಲ್ಲಿಂಗ್ಟನ್‌ನ ಸ್ಕೈ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಅವರು ೨೯ ಎಸೆತಗಳಲ್ಲಿ ೩೧ ರನ್ ಗಳಿಸಿದರು. ಇದು ಸಾಮಾನ್ಯ ಇನ್ನಿಂಗ್ಸ್ ಆಗಿದ್ದರೂ ಅವರ ಹೆಸರನ್ನೂ ದಾಖಲೆಯ ಪುಟಕ್ಕೆ ಸೇರಿಸಿತು. ಅಮೆಲಿಯಾ ಈಗ ಟಿ೨೦ಐ ಇತಿಹಾಸದಲ್ಲಿ ಸತತ ೧೦ ಇನ್ನಿಂಗ್ಸ್ಗಳಲ್ಲಿ ೩೦ ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ, ಸತತ ಒಂಬತ್ತು ಪಂದ್ಯಗಳಲ್ಲಿ ೩೦+ ಸ್ಕೋರ್‌ಗಳನ್ನು ಕಲೆಹಾಕಿದ ದಾಖಲೆಯನ್ನು ಶ್ರೀಲಂಕಾದ ಚಾಮರಿ ಅಟಪಟ್ಟು ಮತ್ತು ರೊಮೇನಿಯಾದ ರೆಬೆಕ್ಕಾ ಬ್ಲೇಕ್ ಹೊಂದಿದ್ದರು. ಅಮೆಲಿಯಾ ಈಗ ಇಬ್ಬರನ್ನೂ ಹಿಂದಿಕ್ಕಿದ್ದಾರೆ.

ಅಮೆಲಿಯಾ ಕೆರ್ ಅವರ ದಾಖಲೆಯ ಪ್ರಯಾಣವು ೨೦೨೪ರಲ್ಲಿ ಪ್ರಾರಂಭವಾಯಿತು ಮತ್ತು ೨೦೨೬ ರಲ್ಲಿ ಅವರ ಸತತ ೧೦ನೇ ೩೦ ಪ್ಲಸ್ ಇನ್ನಿಂಗ್ಸ್‌ನೊಂದಿಗೆ ಕೊನೆಗೊಂಡಿತು. ಈ ಅವಧಿಯಲ್ಲಿ, ಅವರು ಸತತ ೧೦ ಇನ್ನಿಂಗ್ಸ್ಗಳಲ್ಲಿ ೩೦ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ೪೩, ನಂತರ ಆಸ್ಟ್ರೇಲಿಯಾ ವಿರುದ್ಧ ಸರಣಿಯಲ್ಲಿ ೫೧*, ೪೦, ಮತ್ತು ೬೬. ನಂತರ ಜಿಂಬಾಬ್ವೆ ವಿರುದ್ಧ ೧೦೧* ಮತ್ತು ೮೨ ರನ್‌ಗಳ ಅದ್ಭುತ ಇನ್ನಿಂಗ್ಸ್ಗಳನ್ನು ಆಡಿದರು. ಇದೀಗ ೨೦೨೬ ರಲ್ಲಿ, ಅವರು ದಕ್ಷಿಣ ಆಫ್ರಿಕಾ ವಿರುದ್ಧ ೭೮, ೩೨, ೩೦, ಮತ್ತು ೩೧ ರನ್‌ಗಳನ್ನು ಗಳಿಸುವ ಮೂಲಕ ದಾಖಲೆಯನ್ನು ಪೂರ್ಣಗೊಳಿಸಿದರು.

ಈ ೧೦ ಇನ್ನಿಂಗ್ಸ್ಗಳಲ್ಲಿ ಅಮೆಲಿಯಾ ಕೆರ್ ಒಟ್ಟು ೫೫೪ ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸ್ಟ್ರೈಕ್ ರೇಟ್ ೧೪೨ ಆಗಿದ್ದು, ಅವರು ಸ್ಥಿರವಾಗಿ ರನ್ ಗಳಿಸಿದ್ದಲ್ಲದೆ, ವೇಗದಲ್ಲಿಯೂ ರನ್ ಕಲೆಹಾಕಿದ್ದಾರೆ.

ನ್ಯೂಜಿಲೆಂಡ್‌ಗೆ ಅದ್ಭುತ ಗೆಲುವು: ಈ ಪಂದ್ಯದಲ್ಲಿ, ದಕ್ಷಿಣ ಆಫ್ರಿಕಾ ಮಹಿಳಾ ತಂಡ ಮೊದಲು ಬ್ಯಾಟ್ ಮಾಡಿ ೨೦ ಓವರ್‌ಗಳಲ್ಲಿ ೧೫೯/೬ ರನ್‌ಗಳನ್ನು ಕಲೆಹಾಕಿತು. ಅನ್ನೆರಿ ಡಿರ್ಕ್ಸನ್ ೩೨ ಎಸೆತಗಳಲ್ಲಿ ಔಟಾಗದೆ ೫೫ ರನ್ ಗಳಿಸಿ ಅದ್ಭುತ ಇನ್ನಿಂಗ್ಸ್ ಆಡಿದರು ಮತ್ತು ತಮ್ಮ ತಂಡವನ್ನು ಸ್ಪರ್ಧಾತ್ಮಕ ಮೊತ್ತಕ್ಕೆ ಕೊಂಡೊಯ್ದರು. ಇದಕ್ಕೆ ಉತ್ತರವಾಗಿ, ನ್ಯೂಜಿಲೆಂಡ್ ೧೮.೩ ಓವರ್‌ಗಳಲ್ಲಿ ೧೬೦/೪ ಗಳಿಸಿ ಪಂದ್ಯವನ್ನು ೬ ವಿಕೆಟ್‌ಗಳಿಂದ ಗೆದ್ದುಕೊಂಡಿತು. ಸೋಫಿ ಡಿವೈನ್ ಕೇವಲ ೩೪ ಎಸೆತಗಳಲ್ಲಿ ೬೪ ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ಅತಿದೊಡ್ಡ ಕೊಡುಗೆ ನೀಡಿದರು. ಅವರ ಇನ್ನಿಂಗ್ಸ್ನಲ್ಲಿ ೬ ಬೌಂಡರಿಗಳು ಮತ್ತು ೪ ಸಿಕ್ಸರ್‌ಗಳು ಸೇರಿವೆ. ಉಳಿದಂತೆ ಅಮೆಲಿಯಾ ಕೆರ್ ೩೧ ರನ್‌ಗಳು ಇನ್ನಿಂಗ್ಸ್ ತಂಡದ ಗೆಲುವು ಖಚಿತ ಪಡಿಸಿತು. ಬೌಲಿಂಗ್‌ನಲ್ಲಿ ಜೆಸ್ ಕೆರ್ ಅದ್ಭುತ ಪ್ರದರ್ಶನ ನೀಡಿದರು, ಅವರು ೩ ವಿಕೆಟ್ ಪಡೆದರು.

ಈ ಗೆಲುವಿನೊಂದಿಗೆ, ನ್ಯೂಜಿಲೆಂಡ್ ಐದು ಪಂದ್ಯಗಳ ಖಿ೨೦I ಸರಣಿಯಲ್ಲಿ ೩-೧ ಅಂತರದಿಂದ ಮುನ್ನಡೆ ಸಾಧಿಸಿದೆ. ನಾಲ್ಕನೇ ಪಂದ್ಯದ ಗೆಲುವಿನೊಂದಿಗೆ ಕಿವೀಸ್ ಸರಣಿಯನ್ನು ವಶಪಡಿಸಿಕೊಂಡಿದೆ.

Leave a Reply

Your email address will not be published.