ಭಾರತೀಯಷೇರುಮಾರುಕಟ್ಟೆಗಳಲ್ಲಿತಲ್ಲಣ

 ಭಾರತೀಯ ಷೇರುಪೇಟೆಯಲ್ಲಿ ಇಂದು ತೀವ್ರ ಕುಸಿತ ಕಂಡುಬAದಿದೆ. ಸೆನ್ಸೆಕ್ಸ್ ೧,೭೦೦ ಪಾಯಿಂಟ್ ಹಾಗೂ ನಿಫ್ಟಿ ಫಿಫ್ಟಿ ೪೧೨ ಪಾಯಿಂಟ್‌ಗಳ ಕುಸಿತ ಅನುಭವಿಸಿವೆ.

ಎರಡು ದಿನಗಳ ರಜೆ ನಂತರ ಸೋಮವಾರ ಮಾರುಕಟ್ಟೆ ಓಪನ್ ಆಯಿತು. ಮಾರುಕಟ್ಟೆ ತೆರೆಯಲು ಬ್ಲಡ್ ಬಾತ್ ಮುಂದುವರಿದಿದೆ. ಸೆನ್ಸೆಕ್ಸ್ ೧,೭೮೬.೮೭ ಪಾಯಿಂಟ್ ಅಥವಾ ೨.೪೭% ಕುಸಿದು ೭೨,೭೨೨.೭೩ಕ್ಕೆ ತಲುಪಿದೆ. ನಿಫ್ಟಿ ೫೮೦.೫೫ ಪಾಯಿಂಟ್‌ಗಳು ಅಥವಾ ೨.೫೧% ಕುಸಿದು ೨೨,೫೩೦.೫೫ ಕ್ಕೆ ತಲುಪಿದೆ.

ಆರಂಭಿಕ ವಹಿವಾಟಿನಲ್ಲಿ ಯುಎಸ್‌ಡಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ೩೩ ಪೈಸೆ ಕುಸಿದು ೯೩.೮೬ ಕ್ಕೆ ತಲುಪಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಹೋಗಿದೆ. ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ನಿರ್ಗಮಿಸುತ್ತಿದ್ದಾರೆ.

ಇತ್ತ ಯುದ್ಧದ ಭೀತಿ, ಕಚ್ಚಾತೈಲ, ಗ್ಯಾಸ್ ಕೊರತೆ ಹಿನ್ನೆಲೆ ದೇಶಿಯ ಹೂಡಿಕೆದಾರರಿಗೂ ಆತಂಕ ಎದುರಾಗಿದೆ. ಪರಿಣಾಮ ಮಾರುಕಟ್ಟೆ ನಿರಂತರವಾಗಿ ಕುಸಿಯುತ್ತಿದೆ.

Leave a Reply

Your email address will not be published.