ಇದರಿಂದಾಗಿ ಕೇವಲ ಹಾರ್ಮುಜ್ ಜಲಸಂಧಿಗಳು ಮಾತ್ರ ಮುಚ್ಚಿಲ್ಲ. ಈ ಪ್ರದೇಶದ ಪ್ರಮುಖ ರಸಗೊಬ್ಬರ ಉತ್ಪಾದನಾ ಘಟಕಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ವಿಶೇಷವಾಗಿ ಉತ್ತರ ದೇಶಗಳಲ್ಲಿನ ರೈತರು ತಮ್ಮ ಬೆಳೆಗಳನ್ನು ಬಿತ್ತಲು ಸಿದ್ಧರಾಗುತ್ತಿರುವ ಸಮಯದಲ್ಲಿ ಈ ಅಡಚಣೆ ಉಂಟಾಗಿದೆ. ಕತಾರ್‌ನಲ್ಲಿ ’ಕತಾರ್ ಎನರ್ಜಿ’ ನಡೆಸುತ್ತಿರುವ ವಿಶ್ವದ ಅತಿದೊಡ್ಡ ಏಕತಾಣ ಯೂರಿಯಾ ಸ್ಥಾವರವು ನೈಸರ್ಗಿಕ ಅನಿಲದ ಕೊರತೆಯಿಂದಾಗಿ ಉತ್ಪಾದನೆ ಸ್ಥಗಿತಗೊಳಿಸಿದೆ. ಈ ಪ್ರದೇಶದಲ್ಲಿನ ಅನೇಕ ನೈಸರ್ಗಿಕ ಅನಿಲ ಅಥವಾ ಎಲ್‌ಎನ್‌ಜಿ ಸ್ಥಾವರಗಳು ಸಹ ಹಾನಿಗೊಂಡಿದ್ದು, ಇದು ತೈಲ ಮತ್ತು ಅನಿಲ ಆರ್ಥಿಕತೆಯ ಸಂಪೂರ್ಣ ಅಡ್ಡಿಗೆ ಕಾರಣವಾಗಿದೆ. ಸಾರಜನಕ ಗೊಬ್ಬರದ ಉತ್ಪಾದನಾ ವೆಚ್ಚ ಸುಮಾರು ಶೇ೬೦ರಿಂದ ೮೦ರಷ್ಟಿದೆ.
ಇದಲ್ಲದೇ, ಮಧ್ಯಪ್ರಾಚ್ಯದ ಅನೇಕ ಭಾಗಗಳಲ್ಲಿ ಗಂಧಕದAತಹ ಪ್ರಮುಖ ನಿರ್ಣಾಯಕ ಖನಿಕ ಪೂರೈಕೆಗಳು ಕಡಿತಗೊಂಡಿವೆ. ಇದು ಜಾಗತಿಕ ಗಂಧಕದ ವ್ಯಾಪಾರದ ಸರಿಸುಮಾರು ಶೇ೪೫ರಷ್ಟು ಪರಿಣಾಮ ಬೀರುತ್ತದೆ. ಜಾಗತಿಕವಾಗಿ ಫಾಸ್ಫೇಟ್ ಉತ್ಪಾದನೆಗೂ ಸಹ ತೊಂದರೆಯಾಗಬಹುದು.
ಇದರ ಉತ್ಪಾದನೆ ಹೊರತಾಗಿ, ಜಾಗತಿಕ ಹಡಗು ಮಾರ್ಗಗಳ ಮೇಲೆ ಪರಿಣಾಮ ಬೀರಿದೆ. ಅನೇಕ ಹಡಗುಗಳು ತಮ್ಮ ಸರಕುಗಳನ್ನು ಇಳಿಸಲು ಸಾಧ್ಯವಾಗುತ್ತಿಲ್ಲ. ಹಡಗುಗಳ ವಿಮಾ ಕಂತುಗಳು ಸಹ ಹೆಚ್ಚಿಸಿದೆ.
ಭಾರತವು ಯೂರಿಯಾ ಪೂರೈಕೆಯಲ್ಲಿ ಶೇ. ೪೦ರಷ್ಟು ಈ ಪ್ರದೇಶವನ್ನು ಅವಲಂಬಿಸಿದೆ. ಭಾರತ ಮಾತ್ರವಲ್ಲದೇ ಜಾಗತಿಕವಾಗಿ ಹಲವು ದೇಶದ ರೈತರು ಯೂರಿಯಾದಂತಹ ಸಾರಜನಕ ಗೊಬ್ಬರಗಳಿಗಾಗಿ ಈ ಪ್ರದೇಶವನ್ನು ಅವಲಂಬಿಸಿದ್ದಾರೆ. ಈಜಿಪ್ಟ್ನಿಂದ ಬ್ರೆಜಿಲ್‌ವರೆಗಿನ ಎಲ್ಲಾ ದೇಶಗಳು ಈಗಾಗಲೇ ಯೂರಿಯಾ ಬೆಲೆಯಲ್ಲಿ ಶೇ ೨೫ರಷ್ಟು ಹೆಚ್ಚು ಏರಿಕೆ ಕಂಡಿದೆ. ಇದು ಸಂಗ್ರಹಣೆ ಮತ್ತು ರಸಗೊಬ್ಬರಗಳ ಊಹಾಪೋಹಗಳಿಗೆ ಕಾರಣವಾಗಿದೆ. ರಷ್ಯಾ-ಉಕ್ರೇನ್ ಸಂಘರ್ಷದ ಪ್ರಾರಂಭದೊAದಿಗೆ ಜಾಗತಿಕ ರಸಗೊಬ್ಬರ ಪೂರೈಕೆಗಳು ಈಗಾಗಲೇ ನಕಾರಾತ್ಮಕ ಪರಿಣಾಮ ಬೀರಿದ್ದು, ಇದೀಗ ಮಧ್ಯ ಪ್ರಾಚ್ಯದ ದಾಳಿಯು ದರಗಳ ಮೇಲೆ ಪರಿಣಾಮ ಬೀರಿದೆ.

Leave a Reply