KGF ನಂತಹ ಅದ್ಭುತ ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದೇನೆ: ಕೊರಿಯನ್ ಸ್ಟಾರ್

ಇತ್ತೀಚೆಗೆ ಭಾರತೀಯ ಚಿತ್ರರಂಗವನ್ನು ಉದ್ದೇಶಿಸಿ ಮಾತನಾಡಿದ ಕೊರಿಯನ್ ಸ್ಟಾರ್ ನಟ ವೈ ಹಾ ಜೂನ್, ಯಶ್ ಮತ್ತು ಕೆಜಿಎಫ್ ಗುಣಗಾನ ಮಾಡಿದ್ದಾರೆ.

‘ಅಣ್ತಮ್ಮಾ, ಇಲ್ಲಿ ಯಾರೂ ಹೀರೋಗಳನ್ನು ಹುಟ್ಟಾಕಲ್ಲ, ನಮಗೆ ನಾವೇ ಹೀರೋ ಆಗಬೇಕು’ ಅಂತಾ ರಾಜಾಹುಲಿ ಸಿನಿಮಾದಲ್ಲಿ ಡೈಲಾಗ್ ಹೊಡೆದಿದ್ದ ಯಶ್ ಅವರೀಗ ಕೇವಲ ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಮಾತ್ರವಲ್ಲ, ಇಂಟರ್‌ನ್ಯಾಷನಲ್ ಸೂಪರ್ ಸ್ಟಾರ್. ಏಕೆಂದರೆ, ಯಶ್ ಮತ್ತು ಕೆಜಿಎಫ್ ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ಸದ್ದಾದ ಹೆಸರುಗಳು. ಪ್ರೇಕ್ಷಕರು ಮಾತ್ರವಲ್ಲದೇ ಈಗಾಗಲೇ ಭಾರತೀಯ ಸಿನಿಮಾ ದಿಗ್ಗಜರಿಂದಲೂ ಪ್ರಶಂಸೆ ಸ್ವೀಕರಿಸಿರುವ ಯಶ್ ಅವರನ್ನು ಇದೀಗ ಕೊರಿಯನ್ ಸೂಪರ್ ಸ್ಟಾರ್ ಹಾಡಿ ಹೊಗಳಿದ್ದಾರೆ.

ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡಿರುವ ವೆಬ್ ಸೀರಿಸ್ ‘ಸ್ಕ್ವಿಡ್ ಗೇಮ್’ನಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ದಕ್ಷಿಣ ಕೊರಿಯಾದ ಜನಪ್ರಿಯ ನಟ ವೈ ಹಾ ಜೂನ್, ಯಶ್ ಅವರ ಬ್ಲಾಕ್‌ಬಸ್ಟರ್ ಚಿತ್ರ ಕೆಜಿಎಫ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಹೈ ಆ್ಯಕ್ಟೇನ್ ಆ್ಯಕ್ಷನ್ ಮತ್ತು ಸಿನಿಮೀಯ ಪ್ರಮಾಣವನ್ನು ಎತ್ತಿ ಹಿಡಿದಿದ್ದಾರೆ.

  ಮಾಧ್ಯಮವೊಂದರೊAದಿಗೆ ಭಾರತೀಯ ಸಿನಿಮಾದ ಬಗ್ಗೆ ಮಾತನಾಡುತ್ತಾ ಅವರು ಕೆಜಿಎಫ್ ಹೆಸರನ್ನು ಉಲ್ಲೇಖಿಸಿದರು. ಚಿತ್ರವನ್ನು ಒಂದು ಅಸಾಧಾರಣ ಆ್ಯಕ್ಷನ್ ಪ್ರದರ್ಶನ ಎಂದು ಬಣ್ಣಿಸಿದರು. “ನಿಮಗೆ ಗೊತ್ತಾ, ನನಗೆ ಕೆಜಿಎಫ್ ಎಂಬ ಭಾರತೀಯ ಸಿನಿಮಾ ಬಗ್ಗೆ ತಿಳಿದಿದೆ, ಅದು ತುಂಬಾ ಉಗ್ರ ಆ್ಯಕ್ಷನ್ ಚಿತ್ರ – ಖಳನಾಯಕರನ್ನು ಬೇಟೆಯಾಡುವ ಒಂದು ನಿಜವಾದ ಇಂಟೆನ್ಸ್ ಸಿನಿಮಾ. ಇದು ನಂಬಲಾಗದಷ್ಟು ಆಕರ್ಷಕವಾಗಿದೆ, ನಂಬಲಾಗದಷ್ಟು ದೊಡ್ಡ ಪ್ರಮಾಣದಲ್ಲಿದೆ ಮತ್ತು ನಂಬಲಾಗದಷ್ಟು ಫನ್ ಆಗಿದೆ.

 ಹಾಗಾಗಿ ನನಗೆ ಆಫರ್ ಸಿಕ್ಕರೆ, ನಾನು ಅಷ್ಟೇ ಉಗ್ರ ಮತ್ತು ತೀವ್ರವಾದ ಸ್ಕ್ರಿಪ್ಟ್ಗಾಗಿ ಎದುರು ನೋಡುತ್ತಿದ್ದೇನೆ” ಎಂದು ಅವರು ತಿಳಿಸಿದರು. ಸೂಪರ್ ಸ್ಟಾರ್‌ನ ಈ ಹೇಳಿಕೆಗಳು ಭಾರತೀಯ ಚಲನಚಿತ್ರಗಳ, ವಿಶೇಷವಾಗಿ ಹೆಚ್ಚುತ್ತಿರುವ ಕೆಜಿಎಫ್‌ನ ಜಾಗತಿಕ ಮನ್ನಣೆಯನ್ನು ಮತ್ತೊಮ್ಮೆ ಎತ್ತಿಹಿಡಿದಿದೆ. ಚಿತ್ರದ ಕಥೆ ಹೇಳುವಿಕೆ, ಶಕ್ತಿಯುತ ಪ್ರದರ್ಶನ ಮತ್ತು ದೊಡ್ಡ ಪ್ರಮಾಣದಲ್ಲಿ ನಿರ್ಮಾಣಗೊಂಡಿದ್ದು ಈಗಾಗಲೇ ಭಾರಿ ಮೆಚ್ಚುಗೆ ಗಳಿಸಿದೆ.

ವೈ ಹಾ ಜೂನ್ ಅವರ ಮೆಚ್ಚುಗೆ ಕೆಜಿಎಫ್ ಗಡಿ ಮೀರಿ ಪ್ರಭಾವ ಬೀರಿರೋ ಅಂಶವನ್ನು ಮತ್ತಷ್ಟು ಬಲಪಡಿಸುತ್ತದೆ. ಏಕೆಂದರೆ ಈ ಬ್ಲಾಕ್‌ಬಸ್ಟರ್ ಚಿತ್ರದ ಬಗ್ಗೆ ಅಂತಾರಾಷ್ಟ್ರೀಯ ಪ್ರೇಕ್ಷಕರು ಮತ್ತು ಕಲಾವಿದರು ಹೇಳಿಕೆ ಕೊಡೋದನ್ನು ಈಗಲೂ ಮುಂದುವರಿಸಿದ್ದಾರೆ. ಈ ಮುಖೇನ ಕೆಜಿಎಎಫ್ ಕನ್ನಡದ ಕೀರ್ತಿಪತಾಕೆಯನ್ನು ಮತ್ತೊಮ್ಮೆ ಹಾರಿಸುವಲ್ಲಿ ಯಶಸ್ವಿಯಾಗಿದೆ.

ಕೆಜಿಎಫ್ ಚಾಪ್ಟರ್ ೧ ಚಿತ್ರವು ೨೦೧೮ರ ಡಿಸೆಂಬರ್ ೨೧ರಂದು ತೆರೆಕಂಡು ಸೂಪರ್ ಹಿಟ್ ಆಯಿತು. ೨೦೨೨ರ ಏಪ್ರಿಲ್ ೧೪ಕ್ಕೆ ಬಂದ ಕೆಜಿಎಫ್ ಚಾಪ್ಟರ್ ೨ ನಿರೀಕ್ಷೆಗೂ ಮೀರಿ ಅಭೂತಪೂರ್ವ ಯಶಸ್ಸು ಕಂಡಿದೆ. ಕಳೆದ ೯ ವರ್ಷಗಳಲ್ಲಿ ಬಂದಿದ್ದು ಎರಡೇ ಸಿನಿಮಾ. ಆದ್ರೆ ತಮ್ಮ ಅಮೋಘ ಅಭಿನಯದಿಂದ ೧೦೦ ಸಿನಿಮಾಗಳ ಮೂಲಕ ಗಳಿಸುವಷ್ಟು ಮನ್ನಣೆ ಗಳಿಸಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಅವರ ಮುಂದಿನ ಸಿನಿಮಾಗಳನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಸಾಕಷ್ಟು ಉತ್ಸುಕರಾಗಿದ್ದಾರೆ.

ಈ ನಿಟ್ಟಿನಲ್ಲಿ “ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್” ಚಿತ್ರವನ್ನು ಪ್ಯಾನ್‌ವರ್ಲ್ಡ್ ಲೆವೆಲ್‌ನಲ್ಲಿ ಬಿಡುಗಡೆಗೊಳಿಸಲು ಯಶ್ ಆ್ಯಂಡ್ ಟೀಮ್ ಸಜ್ಜಾಗಿದೆ. ಕನ್ನಡ, ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳಲ್ಲಿ ೨೦೨೬ರ ಜೂನ್ ೪ರಂದು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಕೆವಿಎನ್ ಪ್ರೊಡಕ್ಷನ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಮಾಡಿರುವ ಈ ಚಿತ್ರವನ್ನು ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

 ಕೃತಕ ಬುದ್ಧಿಮತ್ತೆಯಿಂದ ನೇಮಕಾತಿ ಪ್ರಕ್ರಿಯೆ ಕಷ್ಟವಾಗುತ್ತಿದೆ ಎಂದು ಎಕ್ಸ್ ಪೋಸ್ಟ್ ಮಾಡಿರುವ ಬೆಂಗಳೂರಿನ ಟೇಕ್ ಯು ಫಾರ್ವರ್ಡ್ ಸಂಸ್ಥಾಪಕ ರಾಜ್ ವಿಕ್ರಮಾದಿತ್ಯ, ಎಐ ತಯಾರಿಸಿದ ಅರ್ಜಿಗಳು ಗುಣಮಟ್ಟವನ್ನು ಕಡಿಮೆ ಮಾಡುತ್ತಿವೆ ಎಂದಿದ್ದಾರೆ. ಅಭ್ಯರ್ಥಿಗಳು ವೈಯಕ್ತಿಕ ಪರಿಶ್ರಮ, ಸಂಶೋಧನೆ ಮತ್ತು ಆಸಕ್ತಿ ತೋರಿಸದೆ ಕೇವಲ ಕಾಪಿ ಪೇಸ್ಟ್ ಮಾಡಿದ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಇದರಿಂದ ಆಯ್ಕೆ ಪ್ರಕ್ರಿಯೆಯೂ ತಲೆನೋವಾಗಿ ಪರಿಣಮಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published.