ಪುತ್ರಿ ಜೊತೆ ಯುದ್ಧ ಟ್ಯಾಂಕರ್‌ನಲ್ಲಿ ಸವಾರಿ ಮಾಡಿದ ಕಿಮ್

ಮಧ್ಯಪ್ರಾಚ್ಯ ಯುದ್ಧದ ನಡುವೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (kim jong un) ಇದೀಗ ಪುತ್ರಿ ಜೊತೆ ಯುದ್ಧ ಟ್ಯಾಂಕರ್‌ನಲ್ಲಿ ಸವಾರಿ ಮಾಡಿದ್ದಾರೆ.

ಹೌದು, ಇತ್ತೀಚಿಗಷ್ಟೇ ಪುತ್ರಿ ಜೊತೆ ಕ್ರೂಸ್ ಕ್ಷಿಪಣಿ ಪರೀಕ್ಷಿಸಿ, ಶೂಟಿಂಗ್ ಮಾಡಿದ್ದರು. ಇದೀಗ ಮತ್ತೆ ಹೊಸ ಪ್ರಯತ್ನ ಮಾಡಿದ್ದಾರೆ. ಪ್ಯೊಂಗ್ಯಾಂಗ್ ನಲ್ಲಿರುವ ೬೦ನೇ ತರಬೇತಿ ನೆಲೆಗೆ ಭೇಟಿ ನೀಡಿದಾಗ ಕಿಮ್ ಮತ್ತು ಜು ಏ ಸಮರಾಭ್ಯಾಸ ವೀಕ್ಷಿಸಿ, ಒಂದೇ ತರಹದ ಉಡುಗೆ ಧರಿಸಿ, ಯುದ್ಧ ಟ್ಯಾಂಕರ್‌ನಲ್ಲಿ ಸವಾರಿ ಮಾಡಿದ್ದಾರೆ. ಈ ಕುರಿತು ಉತ್ತರ ಕೊರಿಯಾದ ಅಧಿಕೃತ ಸುದ್ದಿಸಂಸ್ಥೆ `ಕೆಸಿಎನ್‌ಎ’ ಫೋಟೋಗಳನ್ನು ಬಿಡುಗಡೆ ಮಾಡಿದೆ.

`ಕೆಸಿಎನ್‌ಎ’ ಪ್ರಕಾರ, ಯುದ್ಧ ಟ್ಯಾಂಕರ್‌ಗಳು ಕ್ಷಿಪಣಿ ಮತ್ತು ಡ್ರೋನ್‌ಗಳ ವಿರುದ್ಧ ರಕ್ಷಣೆ ಮಾಡುವುದು, ಫೈರ್‌ಪವರ್ ಮತ್ತು ರಕ್ಷಣಾತ್ಮಕ ವ್ಯವಸ್ಥೆಗಳನ್ನು ಹೊಂದಿದೆ. ಟ್ಯಾಂಕರ್‌ಗಳ ಚಲನಶೀಲತೆ, ಅವುಗಳು ಅಬ್ಬರಿಸುವ ರೀತಿ ಎಲ್ಲವನ್ನು ನೋಡಿದ ಕಿಮ್ ಜಾಂಗ್ ಉನ್ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಟ್ಯಾಂಕರ್‌ಗಳ ಅದ್ಭುತ ಪ್ರದರ್ಶನವು ನಮ್ಮ ಸೈನ್ಯದ ಶೌರ್ಯವನ್ನು ಪ್ರತಿಬಿಂಬಿಸುತ್ತಿದೆ ಎಂದಿದ್ದಾರೆ ಎಂದು ತಿಳಿಸಿದೆ.

೧೩ ವರ್ಷದ ಕಿಮ್ ಜೂ ಏ, ಇತ್ತೀಚಿನ ದಿನಗಳಲ್ಲಿ ತನ್ನ ತಂದೆಯ ಜೊತೆ ಸೇನಾ ಪರೇಡ್ ಮತ್ತು ಶಸ್ತ್ರಾಸ್ತ್ರ ಪರೀಕ್ಷೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾಳೆ. ಹೀಗಾಗಿ ಮಗಳನ್ನೇ ಮುಂದಿನ ಉತ್ತರಾಧಿಕಾರಿಯಾಗಿ ಘೋಷಿಸುವ ಸಾಧ್ಯತೆಯಿದೆ ಎಂದು ದಕ್ಷಿಣ ಕೊರಿಯಾದ ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ.

Leave a Reply

Your email address will not be published.