ಕರಾವಳಿ ಮೂಲದ ಖ್ಯಾತ ನಟಿ ಅನುಷ್ಕಾ ಶೆಟ್ಟಿ(ಅನುಷ್ಕಾ ಶೆಟ್ಟಿ) ಮದುವೆ ಕುರಿತಾಗಿ ಹೊಸ ಸಮಾಚಾರವೊಂದು ಕೇಳಿ ಬರುತ್ತಿದೆ. ೪೪ ವಯಸ್ಸಿನ ಈ ಚೆಲುವೆ ಈವರೆಗೂ ಮದುವೆ ಆಗದೆ ಇರುವುದು ಅವರ ಕುಟುಂಬಕ್ಕೆ ಬೇಸರ ತಂದಿತ್ತು. ಆದರೆ ಕೊನೆಗೂ ಮದುವೆ ಆಗಲು ಅನುಷ್ಕಾ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ.
ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಈವರೆಗೂ ಯಾರೂ ಮದುವೆಯ ಬಗ್ಗೆ ಯಾವತ್ತೂ ಮಾತಾಡಿಲ್ಲ. ಮದುವೆ ವಿಚಾರ ಬಂದಾಗೆಲ್ಲ ತೇಲಿಸಿ ಮಾತಾಡಿದ್ದೇ ಹೆಚ್ಚು. ಇಬ್ಬರೂ ಮದುವೆ ಆಗದೇ ಇರುವ ಗಾಸಿಪ್ಗಳು ಹರಿದಾಡಿದ್ದವು. ಇದೀಗ ಗಾಸಿಪ್ಗಳಿಗೆ ಫುಲ್ಸ್ಟಾಪ್ ಇಡುವ ಕಾಲ ಬಂದಿದೆ.
ಕರಾವಳಿ ಮೂಲದ ಬೆಡಗಿ ಅನುಷ್ಕಾ ಶೆಟ್ಟಿಗೆ ಇದೀಗ ೪೪ರ ಹರೆಯ. ಆದರೂ ಅವರು ಮದುವೆ ಆಗಿಲ್ಲ. ಈಗ ಮದುವೆಗೆ ಒಪ್ಪಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದು ಸಹಜವಾಗಿಯೇ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಆಪ್ತ ಮೂಲಗಳ ಪ್ರಕಾರ ಬೆಂಗಳೂರು ಮೂಲದ ಉದ್ಯಮಿಯೊಬ್ಬರ ಜೊತೆ ಅನುಷ್ಕಾ ಮದುವೆಯ ಬಗ್ಗೆ ಹೇಳಲಾಗುತ್ತಿದೆ. ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದಿದೆ. ಈ ವರ್ಷ ವಾಲಗ ಊದುವುದು ಗ್ಯಾರಂಟಿ ಎನ್ನಲಾಗುತ್ತಿದೆ. ಅಧಿಕೃತವಾಗಿ ಸದ್ಯದಲ್ಲೇ ಅನುಷ್ಕಾ ಮಾಹಿತಿ ಕೊಡುವ ಸಾಧ್ಯತೆಯಿದೆ.

Leave a Reply