ಭಾರತದ ಬಾಹ್ಯಾಕಾಶ ಕನಸಿಗೆ ಬಲ: ಗಗನಯಾನ ಪ್ಯಾರಾಚೂಟ್ ವಿನ್ಯಾಸ ಯಶಸ್ವಿ ಪರೀಕ್ಷೆ
ಭಾರತದ ಮಾನವ ಬಾಹ್ಯಾಕಾಶ ಹಾರಾಟ ಯೋಜನೆ ಗಗನಯಾನ ಮತ್ತೊಂದು ಮಹತ್ವದ ಮೈಲಿಗಲ್ಲು ಸಾಧಿಸಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಚಂಡೀಗಢದಲ್ಲಿರುವ ಟರ್ಮಿನಲ್ ಬ್ಯಾಲಿಸ್ಟಿಕ್ಸ್ ರಿಸರ್ಚ್ ಲ್ಯಾಬೊರೇಟರಿ (TBRL) ಯಲ್ಲಿ ಡ್ರೋಗ್ (ಡ್ರ‍್ಯಾಗ್) ಪ್ಯಾರಾಚೂಟ್‌ಗಾಗಿ ಯಶಸ್ವಿ ಅರ್ಹತಾ ಮಟ್ಟದ ಲೋಡ್ ಪರೀಕ್ಷೆ ನಡೆಸಿದೆ.
ಈ ಪರೀಕ್ಷೆಯನ್ನು TBRL ನಲ್ಲಿರುವ ರೈಲ್ ಟ್ರ‍್ಯಾಕ್ ರಾಕೆಟ್ ಸ್ಲೆಡ್ (RTRS) ಸೌಲಭ್ಯದಲ್ಲಿ ಫೆಬ್ರವರಿ ೧೮, ೨೦೨೬ ರಂದು ಯಶಸ್ವಿಯಾಗಿ ನಡೆಸಲಾಯಿತು. ಖಖಿಖS ಒಂದು ವಿಶೇಷ ಡೈನಾಮಿಕ್ ಪರೀಕ್ಷಾ ವೇದಿಕೆಯಾಗಿ, ಹೈ-ಸ್ಪೀಡ್ ವಾಯುಬಲವೈಜ್ಞಾನಿಕ ಹಾಗೂ ಬ್ಯಾಲಿಸ್ಟಿಕ್ ಮೌಲ್ಯಮಾಪನಗಳಿಗಾಗಿ ಬಳಸಲಾಗುತ್ತದೆ.
ಈ ಮಹತ್ವದ ಪರೀಕ್ಷೆಯಲ್ಲಿ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ವೈಮಾನಿಕ ವಿತರಣಾ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ (ADRDE) ಹಾಗೂ TBRL ನ ಸಮರ್ಪಿತ ವಿಜ್ಞಾನಿಗಳು ಮತ್ತು ತಜ್ಞರು ಭಾಗವಹಿಸಿದ್ದರು.
ಹೆಚ್ಚುವರಿ ಸುರಕ್ಷತಾ ಅಂಚು ಸಾಬೀತು : ಖಖಿಖS ಡೈನಾಮಿಕ್ ಪರೀಕ್ಷೆಯು ಗರಿಷ್ಠ ಹಾರಾಟದ ಲೋಡ್‌ಗಿಂತ ಹೆಚ್ಚಿನ ಅರ್ಹತಾ ಮಟ್ಟದ ಲೋಡ್‌ಗಳನ್ನು ಅನುಕರಿಸಿತು. ಇದರಿಂದ ಪ್ಯಾರಾಚೂಟ್ ವಿನ್ಯಾಸದಲ್ಲಿ ಹೆಚ್ಚುವರಿ ಸುರಕ್ಷತಾ ಅಂಚು ಇರುವುದನ್ನು ದೃಢಪಡಿಸಲಾಗಿದೆ. ಡ್ರೋಗ್ ಪ್ಯಾರಾಚೂಟ್ ಮಾನವ ಬಾಹ್ಯಾಕಾಶ ಯಾನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಕ್ಯಾಪ್ಸ್ಯೂಲ್ ಮರುಪ್ರವೇಶದ ವೇಳೆ ವೇಗ ನಿಯಂತ್ರಣ ಮತ್ತು ಸ್ಥಿರತೆಯನ್ನು ಒದಗಿಸುವಲ್ಲಿ ಇದು ಪ್ರಮುಖ ವ್ಯವಸ್ಥೆಯಾಗಿದೆ.
ಸ್ವದೇಶಿ ತಂತ್ರಜ್ಞಾನದ ಮತ್ತೊಂದು ಸಾಧನೆ : ಈ ಯಶಸ್ವಿ ಪರೀಕ್ಷೆಯು ಹೆಚ್ಚಿನ ಸಾಮರ್ಥ್ಯದ ರಿಬ್ಬನ್ ಪ್ಯಾರಾಚೂಟ್‌ಗಳ ವಿನ್ಯಾಸ ಮತ್ತು ತಯಾರಿಕೆಯಲ್ಲಿ ಭಾರತದ ತಾಂತ್ರಿಕ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಗಗನಯಾನ ಕಾರ್ಯಕ್ರಮದ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ಹೆಚ್ಚಿಸುವಲ್ಲಿ ಈ ಸಾಧನೆ ಮಹತ್ವದ್ದಾಗಿದೆ.ಭಾರತ ತನ್ನ ಮಾನವ ಬಾಹ್ಯಾಕಾಶ ಹಾರಾಟ ಕನಸಿನತ್ತ ಸ್ಥಿರ ಹೆಜ್ಜೆ ಹಾಕುತ್ತಿರುವುದು ಈ ಪರೀಕ್ಷೆಯಿಂದ ಮತ್ತೊಮ್ಮೆ ಸ್ಪಷ್ಟವಾಗಿದೆ.

Leave a Reply