ಸಂಪತ್ತು, ಆರೋಗ್ಯ, ಶಾಂತಿಗೆ ಫೆಂಗ್‌ಶುಯಿ ಬಿದಿ

ವಾಸ್ತು ಪ್ರಕಾರ ಬಿದಿರು ಗಿಡವನ್ನು ಮನೆಯಲ್ಲಿ ಇಡುವುದು ಶುಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇದು ಕೇವಲ ಅಲಂಕಾರಿಕ ಸಸ್ಯವಷ್ಟೇ ಅಲ್ಲ, ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚಿಸಿ, ನಕಾರಾತ್ಮಕತೆಯನ್ನು ಕಡಿಮೆ ಮಾಡುತ್ತದೆ ಎಂಬ ನಂಬಿಕೆ ಇದೆ. ಬಿದಿರು ಗಿಡವು ದೌರ್ಭಾಗ್ಯವನ್ನು ದೂರ ಮಾಡಿ, ಯಶಸ್ಸು, ಕೀರ್ತಿ, ಆರೋಗ್ಯ ಮತ್ತು ಸಮೃದ್ಧಿಯನ್ನು ಆಕರ್ಷಿಸುತ್ತದೆ ಎಂದು ಹೇಳಲಾಗುತ್ತದೆ. ಜೊತೆಗೆ ಕುಟುಂಬದ ಸದಸ್ಯರ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸಿ, ಮನೆಯಲ್ಲಿ ಸಂತೋಷದ ವಾತಾವರಣವನ್ನು ನಿರ್ಮಿಸುತ್ತದೆ.

ವಾಸ್ತು ಪ್ರಕಾರ ಬಿದಿರು ಗಿಡವನ್ನು ಇಡುವುದಕ್ಕೆ ಅತ್ಯುತ್ತಮ ದಿಕ್ಕು ಪೂರ್ವ ದಿಕ್ಕು. ಈ ದಿಕ್ಕು ಆರೋಗ್ಯ ಮತ್ತು ಬೆಳವಣಿಗೆಗೆ ಸಂಬಂಧಿಸಿದೆ ಎಂದು ನಂಬಲಾಗುತ್ತದೆ. ಪೂರ್ವದಲ್ಲಿ ಇಟ್ಟರೆ ಮನೆಯಲ್ಲಿ ಶಾಂತಿ, ಸಮತೋಲನ ಮತ್ತು ಆರ್ಥಿಕ ಪ್ರಗತಿ ಕಂಡುಬರುತ್ತದೆ. ಕಚೇರಿಯಲ್ಲಿ ಇಟ್ಟರೆ ನಿಮ್ಮ ವೃತ್ತಿಜೀವನದಲ್ಲಿ ಬೆಳವಣಿಗೆ ಮತ್ತು ಹೊಸ ಅವಕಾಶಗಳನ್ನು ತರುತ್ತದೆ. ೨–೩ ಅಡಿ ಎತ್ತರದ ಗಿಡಗಳನ್ನು ಇಡುವುದು ಉತ್ತಮ.

ಬಿದಿರಿನ ೨ ಕಾಂಡಗಳು – ದಾಂಪತ್ಯ ಪ್ರೀತಿ ಮತ್ತು ಸಂಬಂಧ ಬಲಪಡಿಸಲು, ೩ ಕಾಂಡಗಳು – ಸಂತೋಷ, ಸಂಪತ್ತು ಮತ್ತು ದೀರ್ಘಾಯುಷ್ಯ, ೫ ಕಾಂಡಗಳು – ಆರೋಗ್ಯದ ಬೆಳವಣಿಗೆ, ೮ ಕಾಂಡಗಳು – ಸಂಪತ್ತು ಮತ್ತು ಪ್ರಗತಿ, ೯ ಕಾಂಡಗಳು – ಅದೃಷ್ಟ ಮತ್ತು ಯಶಸ್ಸು.

ಬಿದಿರು ಗಿಡ ಇರುವ ಪಾತ್ರೆಯ ಸುತ್ತ ಕೆಂಪು ರಿಬ್ಬನ್ ಕಟ್ಟುವುದು ಶುಭಕರ. ವಾಸ್ತು ಪ್ರಕಾರ ಬಿದಿರು ಮರವನ್ನು ಮತ್ತು ಕೆಂಪು ಬಣ್ಣ ಅಗ್ನಿಯನ್ನು ಸೂಚಿಸುತ್ತದೆ. ಈ ಎರಡರ ಸಮನ್ವಯ ಜೀವನದಲ್ಲಿ ಸಮತೋಲನವನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಇದನ್ನು ವಿಶೇಷವಾಗಿ ಪೂರ್ವ ದಿಕ್ಕಿನಲ್ಲಿ ಇಡುವುದು ಉತ್ತಮ.

ನೇರ ಬಿಸಿಲು ಬೀಳುವ ಸ್ಥಳದಲ್ಲಿ ಇಡಬೇಡಿ. ಒಣಗಿದ ಅಥವಾ ಹಾಳಾದ ಗಿಡವನ್ನು ಮನೆಯಲ್ಲಿ ಇಡಬೇಡಿ. ಇದು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ. ಅಶುಚಿ ನೀರು ಅಥವಾ ಪಾತ್ರೆಯಲ್ಲಿ ಇಡಬೇಡಿ. ವಾರಕ್ಕೆ ಒಮ್ಮೆ ನೀರನ್ನು ಬದಲಿಸುವುದು ಉತ್ತಮ. ಇನ್ನು ಬಿದಿರು ಗಿಡವನ್ನು ನೆಟ್ಟರೆ ರೋಗಗಳು ದೂರವಾಗುತ್ತವೆ ಮತ್ತು ಆರೋಗ್ಯ ಸುಧಾರಿಸುತ್ತದೆ ಎಂಬ ನಂಬಿಕೆ ಇದೆ. ಮಲಗುವ ಕೋಣೆಯಲ್ಲಿ ಇಟ್ಟರೆ ದಾಂಪತ್ಯ ಜೀವನದಲ್ಲಿ ಸೌಹಾರ್ದತೆ ಮತ್ತು ಪ್ರೀತಿ ಹೆಚ್ಚುತ್ತದೆ. ವಿಶೇಷವಾಗಿ ಎರಡು ಕಾಂಡಗಳ ಬಿದಿರು ದಂಪತಿಗಳ ನಡುವಿನ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ ಎಂದು ಹೇಳಲಾಗುತ್ತದೆ.

Leave a Reply

Your email address will not be published.