ಬೆಂಗಳೂರು ಕರಗ ವಿಶೇಷತೆ

ಬೆಂಗಳೂರು ಕರಗ ಉತ್ಸವ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಬೆಂಗಳೂರು ಕರಗವು ೮ ಶತಮಾನಗಳ ಇತಿಹಾಸವನ್ನ ಹೊಂದಿದೆ. ಆದಿ ಶಕ್ತಿ ಸ್ವರೂಪಿಣಿಯಾದ ದ್ರೌಪದಿ ಆರಾಧನೆಗಾಗಿ ಮೀಸಲಿಡಲಾಗಿದೆ. ಕರಗವನ್ನು ಬೆಂಗಳೂರಿನ ಗ್ರಾಮ ಉತ್ಸವ ಎಂದು ಸಹ ಕರೆಯಲಾಗುತ್ತದೆ. ಹಿಂದೂ ಮತ್ತು ಮುಸ್ಲಿಂರ ಏಕತೆಯನ್ನು ಪ್ರದರ್ಶಿಸಲು ಕರಗ ಆಚರಣೆ ಮಾಡಲಾಗುತ್ತದೆ. ಪ್ರತಿ ವರ್ಷ ಚೈತ್ರ ಶುದ್ಧ ಸಪ್ತಮಿಯ ದಿನದಿಂದ ಉತ್ಸವ ಆರಂಭವಾಗುತ್ತದೆ. ಕರಗದ ಹಿಂದಿನ ದಿನದಿಂದಲೇ ಧರ್ಮರಾಯಸ್ವಾಮಿ ದೇಗುಲದಲ್ಲಿ ಪೂಜೆ ನಡೆಯುತ್ತೆ.

ಕರಗದ ಅರ್ಥ

ಕರಗ ಎಂಬ ಮಾತಿಗೆ ‘ಕುಂಭ’ ಎನ್ನುವ ಅರ್ಥವೂ ಇದೆ. ಕರಗದ ಒಂದೊAದು ಅಕ್ಷರ ಒಂದೊAದು ಸಂಕೇತ ಹೊಂದಿವೆ. ಕ-ಕೈಯಿಂದ ಮುಟ್ಟದೆ, ರ-ರುಂಡದ ಮೇಲೆ ಧರಿಸಿ, ಗ-ಗತಿಸುವುದು. ಕರಗ ಪೂಜೆ ತಮಿಳುನಾಡಿನಲ್ಲಿ ಬಹು ಹಿಂದಿನಿAದಲೂ ಇದೆ. ಬೆಂಗಳೂರು ಮಾತ್ರವಲ್ಲದೆ ಅನೇಕ ಕಡೆ ಕರಗ ಆಚರಣೆ ರೂಢಿಯಲ್ಲಿದೆ.

 ಮಲ್ಲಿಗೆ ಹೂವಿನ ಕರಗವನ್ನು ತಲೆ ಮೇಲೆ ಹೊತ್ತ ಪೂಜಾರಿ ನೃತ್ಯ ಮಾಡುತ್ತಾ ದೇಗುಲದಿಂದ ಹೊರ ಬರ್ತಾರೆ. ಅನೇಕ ದೇವಸ್ಥಾನಗಳಿಂದ ಕರಗ ವೇಷಧಾರಿಗಳು ಈ ದೇಗುಲಕ್ಕೆ ಬರ್ತಾರೆ. ಕಾಟನ್‌ಪೇಟೆಯ ಮಸ್ತಾನ್ ಸಾಬ್ ದರ್ಗಾಕ್ಕೆ ಕಗರ ತೆರಳುತ್ತೆ. ಮಸ್ತಾನ್ ಸಾಬ್ ದರ್ಗಾದಲ್ಲಿ ಧೂಪಾರತಿ ನಂತರ ನಗರ ಪ್ರದಕ್ಷಿಣೆ ಮಾಡಲಾಗುತ್ತದೆ.

ಕರಗ ಆಚರಣೆಯ ಹಿನ್ನೆಲೆ

ಕುರುಕ್ಷೇತ್ರ ಸಮರದ ನಂತರ ಪಾಂಡವರು ಸ್ವರ್ಗಾರೋಹಣ ಮಾಡುತ್ತಾರೆ. ಸ್ವರ್ಗಾರೋಹಣ ಸಂದರ್ಭದಲ್ಲಿ ದ್ರೌಪದಿ ಮೂರ್ಛೆ ತಪ್ಪಿ ಬಿದ್ದಳಂತೆ. ದ್ರೌಪದಿ ಮೂರ್ಛೆ ತಪ್ಪಿ ಬಿದ್ದದ್ದು ಅರಿಯದೆ ಪಾಂಡವರು ಮುಂದೆ ನಡೆಯುತ್ತಾರೆ. ಆಕೆ ಎಚ್ಚರವಾಗಿ ನೋಡಿದಾಗ ತಿಮಿರಾಸುರ ಎಂಬ ರಾಕ್ಷಸ ದೂರದಲ್ಲಿ ನಿಂತಿದ್ದ. ಆಗ ತಿಮಿರಾಸುರ ನೋಡಿದ ದ್ರೌಪದಿ ಆದಿಶಕ್ತಿಯ ರೂಪವನ್ನು ತೋರುತ್ತಾಳೆ. ರಾಕ್ಷಸ ತಿಮರಾಸುರನನ್ನು ಸದೆ ಬಡಿಯಲು ರಕ್ಷಕರನ್ನು ಆಕೆ ಸೃಷ್ಟಿಸುತ್ತಾಳೆ. ತಲೆಯಿಂದ ಯಜಮಾನ, ಹಣೆಯಿಂದ ಗಣಾಚಾರಿ, ಕಿವಿಗಳಿಂದ ಗೌಡರು, ಬಾಯಿಯಿಂದ ಗಂಟೆ ಪೂಜಾರಿ, ಹೆಗಲಿನಿಂದ ವೀರಕುಮಾರರ ಸೃಷ್ಟಿಸುತ್ತಾಳೆ. ಹೀಗೆ ಹುಟ್ಟಿದ ಇವರೆಲ್ಲರೂ ಸೇರಿ ಆ ರಕ್ಕಸನ ಎದುರು ಹೋರಾಡಿ ಗೆಲ್ಲುತ್ತಾರೆ.

ಜನ್ಮ ನೀಡಿದ ದ್ರೌಪದಿ ಕೈಲಾಸಕ್ಕೆ ಹೋಗುವುದು ಮಕ್ಕಳಲ್ಲಿ ದುಗುಡ ಉಂಟು ಮಾಡುತ್ತೆ. ತೆರಳದಂತೆ ದ್ರೌಪದಿಯನ್ನು ಬೇಡಿಕೊಳ್ಳುವಂತೆ ಕೃಷ್ಣನು ಸಲಹೆ ನೀಡುತ್ತಾನೆ. ವೀರಕುಮಾರರು ಕತ್ತಿಯಿಂದ ಎದೆಗೆ ತಿವಿದುಕೊಳ್ಳುತ್ತಾ ಬೇಡಿಕೊಳ್ಳುತ್ತಾರೆ. ನಮಗೆ ನೀನಲ್ಲದೆ ಇನ್ಯಾರು ದಿಕ್ಕು, ಹೋಗದಿರು ಎಂದು ಅಲವತ್ತುಕೊಳ್ಳುತ್ತಾರೆ. ಕೊನೆಗೆ ದ್ರೌಪದಿಯ ಮರುಕ ಪಟ್ಟು ಪ್ರತಿ ವರ್ಷವೂ ೩ ದಿನ ಭೂಮಿಗೆ ಬರುವುದಾಗಿ ಮಾತು ನೀಡ್ತಾಳೆ. ಮಕ್ಕಳೊಂದಿಗೆ ಇರುವ ಭರವಸೆ ಕೊಡ್ತಾಳೆ. ಆ ಮೂರು ದಿನಗಳೇ ಕರಗ ಹಬ್ಬದ ದಿನಗಳು.

Leave a Reply

Your email address will not be published.