ಪ್ರಕೃತಿಯಲ್ಲಿ ಚಿಗುರೆಲೆಗಳ ಹೊಸತನದ ಹಸಿರು ಯುಗಾದಿ ಹಬ್ಬ

ಪ್ರಕೃತಿಯಲ್ಲಿ ಚಿಗುರೆಲೆಗಳ ಹೊಸತನದ ಹಸಿರು ಯುಗಾದಿ ಹಬ್ಬ

                -ಹನುಮಂತ.ಮ.ದೇಶಕುಲಕರ್ಣಿ.

ಪ್ರಕೃತಿಯಲ್ಲಿ ಚಿಗುರೆಲೆಗಳ ಹೊಸತನದ ಹಸಿರು ಕಾಣಿಸಿಕೊಂಡು ಅವು ನವಜೀವನವನ್ನು ಪಡೆದುಕೊಳ್ಳುವುದರ ಮೂಲಕ ವಸಂತಾಗಮನವನ್ನು ಸಾರುತ್ತವೆ. ಹಿಂದೂ ಧರ್ಮದ ಪ್ರಕಾರ, ಸೃಷ್ಟಿಕರ್ತನಾದ ಬ್ರಹ್ಮ ತನ್ನ ಸೃಷ್ಟಿಕಾರ್ಯವನ್ನು ಚೈತ್ರಮಾಸದ ತಿಂಗಳಿನಲ್ಲಿ ಆರಂಭಿಸಿದನೆಂದು ನಂಬಲಾಗಿದೆ. ಮರಗಿಡಗಳು ಹಣ್ಣು ಹೂವುಗಳನ್ನು ನೀಡಲು ಪ್ರಾರಂಭಿಸಿದಂತೆ ಹೊಸ ಜೀವನದ ಆರಂಭಕ್ಕೆ ಯುಗಾದಿ ಕಾರಣವಾಗಿದೆ.

ಈ ಹಬ್ಬವು ದಕ್ಷಿಣ ಭಾರತದ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಜನರ ಪಾಲಿಗೆ ಈ ಹಬ್ಬವು ಅತ್ಯಂತ ಮಹತ್ತರ ಹಬ್ಬವಾಗಿರುತ್ತದೆ. ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯಗಳ ಜನರು ಈ ಹಬ್ಬವನ್ನು ಯುಗಾದಿ ಎಂಬ ಹೆಸರಿನಲ್ಲಿ ಆಚರಿಸಿದರೆ, ಇದೇ ಹಬ್ಬವನ್ನು ಮಹಾರಾಷ್ಟ್ರ ರಾಜ್ಯದ ಜನರು ಗುಡಿ ಪಡ್ವವೆಂದೂ, ಹಾಗೂ ಸಿಂಧಿ ಜನರು ಚೈತ್ರ ಶುದ್ಧ ಪಾಡ್ಯಮಿಯಂದು ಈ ಹಬ್ಬವನ್ನು ಚೇಟೀ ಚಾಂದ್ ಎಂದು ಆಚರಿಸುತ್ತಾರೆ.

ಹಿಂದೂ ಶಾಸ್ತ್ರಗಳ ಪ್ರಕಾರ, ಈ ದಿನದಂದು ಬ್ರಹ್ಮನು ಜೀವಿಗಳ ಸೃಷ್ಟಿಗೆ ತೊಡಗಿದನು ಎಂಬುದು ಜನಜನಿತ. ದಕ್ಷಿಣ ಭಾರತದೆಲ್ಲೆಡೆ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಮರಗಿಡಗಳು ಹಣ್ಣು ಹೂವುಗಳನ್ನು ನೀಡಲು ಪ್ರಾರಂಭಿಸಿದಂತೆ ಹೊಸ ಜೀವನದ ಆರಂಭಕ್ಕೆ ಯುಗಾದಿ ಕಾರಣವಾಗಿದೆ ಎಂಬುದು ಇದರ ಹಿಂದಿರುವ ನಂಬಿಕೆಯಾಗಿದೆ.

ಜನರು ಬೆಳಗ್ಗೆ ಬೇಗನೆದ್ದು ಸ್ನಾನ ಮಾಡುತ್ತಾರೆ. ತಮ್ಮ ಮನೆಗಳನ್ನು ಮಾವಿನಲೆಯ ತೋರಣಗಳಿಂದ ಅಲಂಕರಿಸುತ್ತಾರೆ. ಶಿವ ಮತ್ತು ಪಾರ್ವತಿಯ ಮಕ್ಕಳಾದ ಗಣೇಶ ಮತ್ತು ಕಾರ್ತಿಕೇಯರಿಗೆ ಮಾವಿನ ಕಾಯಿಗಳೆಂದರೆ ತುಂಬಾ ಇಷ್ಟ ಎಂಬ ಪ್ರತೀತಿ ಇದೆ. ಆದ್ದರಿಂದ ಈ ದೇವರ ಕೃಪೆ ತಮ್ಮ ಮೇಲಿರಲಿ ಎಂದು ಜನರು ಮಾವಿನ ತೋರಣಗಳಿಂದ ಮನೆಯನ್ನು ಅಲಂಕರಿಸುತ್ತಾರೆ. ಮನೆಯವರ ಪಂಚಾಂಗವನ್ನು ಸಿದ್ಧಪಡಿಸುವ ಸಂಪ್ರದಾಯ ಯುಗಾದಿ ಆಚರಣೆಗಳಲ್ಲಿ ಒಂದಾಗಿದೆ. ಮನೆಯವರೆಲ್ಲರ ಪಂಚಾಂಗವನ್ನು ಯುಗಾದಿಯಂದು ಪಂಡಿತರು ತಯಾರಿಸುತ್ತಾರೆ.

ಈ ಯುಗಾದಿ ಹಬ್ಬದಂದು ತಯಾರಿಸಲ್ಪಡುವ ಪಚಡಿಯೂ ಕೂಡ ಒಂದು ಬಗೆಯ ಭಕ್ಷ್ಯವಾಗಿದ್ದು, ಬೇವಿನ ಚಿಗುರುಗಳು/ಹೂಗಳು, ಬೆಲ್ಲ, ಮಾವು, ಹುಣಸೆಹುಳಿಯ ರಸ ಇವೇ ಮೊದಲಾದ ವಿವಿಧ ಸಾಮಗ್ರಿಗಳ ಮಿಶ್ರಣವಾಗಿರುತ್ತದೆ. ಈ ವಿವಿಧ ಸಾಮಗ್ರಿಗಳು ಈ ಕೆಳಗೆ ಪ್ರಸ್ತಾವಿಸಿರುವಂತೆ ಮಾನವ ಜೀವನದ ವಿವಿಧ ಭಾವಗಳನ್ನು ಸಂಕೇತಿಸುತ್ತದೆ. ಬೇವಿನ ಚಿಗುರು,ಹೂಗಳು ಕಹಿಯಾಗಿದ್ದು ದು:ಖವನ್ನು ಸಂತೈಸಿದರೆ, ಬೆಲ್ಲ ಸಿಹಿಯಾಗಿದ್ದು ಜೀವನದ ಸುಖ/ಸಂತೋಷವನ್ನು, ಮಿಡಿಮಾವು ಒಗರಾಗಿದ್ದು, ವಿಚಿತ್ರ ಸಂದರ್ಭವನ್ನು, ಹುಣಸೆ ರಸ ಹುಳಿಯಾಗಿದ್ದು ಬೇಸರವನ್ನು ಸಂಕೇತಿಸಿದರೆ, ಲವಣ ಉಪ್ಪಿನಸ್ವಾದವಾಗಿದ್ದು ಭಯವನ್ನು ಸಂಕೇತಿಸಿದರೆ, ಕಾಯಿಮೆಣಸು ಖಾರವಾಗಿದ್ದು ಕೋಪವನ್ನು ಸಂಕೇತಿಸುತ್ತದೆ ಎನ್ನಲಾಗಿದೆ.   

ಆದ್ದರಿಂದ ಯುಗಾದಿಯಂದು ಜೀವನವು ಸುಖದು:ಖಗಳ ಮಿಶ್ರಣವೆಂಬ ಕಟು ವಾಸ್ತವವನ್ನು ಬೇವು-ಬೆಲ್ಲವು ಸಂಕೇತಿಸುತ್ತದೆ ಹಾಗೂ ಜೀವನದ ನೋವು, ನಲಿವುಗಳನ್ನು ಸಮಾನವಾಗಿ ಸ್ವೀಕರಿಸಬೇಕೆಂಬ ಸಂದೇಶವನ್ನೇ ಬೇವು-ಬೆಲ್ಲವು ಸಾರುತ್ತದೆ.

ಯುಗಾದಿ/ಉಗಾದಿ ಎಂಬ ಪದದ ಅರ್ಥ “ಹೊಸ ತಲೆಮಾರು ಅಥವಾ ಹೊಸ ಶಕೆ”ಯ ಆರಂಭವೆಂದಾಗಿದೆ. ವಸಂತಋತುವಿನ ಆರಂಭದ ದಿನವಾಗಿದ್ದು ಅಂತೆಯೇ ಹೊಸ ವರ್ಷದ ಪ್ರಥಮ ಋತುವಿನ ಆರಂಭದ ದಿನವೂ ಹೌದು. ಈ ದಿನದಂದು ಸೂರ್ಯನು ಮೇಷ ರಾಶಿಯನ್ನು ಪ್ರವೇಶಿಸುವನು. ಮೇಷರಾಶಿಯು ಸೌರಚಿಹ್ನೆಯ ಪ್ರಥಮ ಚಿಹ್ನೆಯಾಗಿದ್ದು, ಇದು ಪ್ರಥಮ ತಿಂಗಳಾದ ಚೈತ್ರಮಾಸದ ಆರಂಭವನ್ನೂ ಸಂಕೇತಿಸುತ್ತದೆ. ಇದೇ ದಿನದಂದು ನೂತನ ಸಾಹಿತ್ಯಿಕ ಬರವಣಿಗೆಗಳ ಹಾಗೂ ಕಾವ್ಯ, ಕವನಗಳ ವಾಚನವನ್ನೂ ಕೈಗೊಳ್ಳಲಾಗುತ್ತದೆ ಹಾಗೂ ಗೌರವಿಸುವ ದಿನವೂ ಇದಾಗಿರುತ್ತದೆ.

ರೋಮನ್ನರ ಹೊಸ ವರ್ಷಾಚರಣೆ ಮೊದಲು ಜನವರಿ ಆಗಿರಲಿಲ್ಲ: ಸಾಂಪ್ರದಾಯಿಕ ದೇಶಿ ಪದ್ಧತಿಯ ಯುಗಾದಿ. ಯುಗಾದಿ ಚೈತ್ರ ಮಾಸದಲ್ಲಿ (ಮಾರ್ಚ್-ಏಪ್ರಿಲ್) ಬಂದರೆ ಗ್ರಿಗೋರಿಯನ್ ಕ್ಯಾಲೆಂಡರ್‌ನ ಹೊಸ ವರ್ಷ ಪುಷ್ಯ ಮಾಸದಲ್ಲಿ ಬರುತ್ತದೆ. ಹೊಸ ವರ್ಷವನ್ನಾಗಿ ಆಚರಿಸುವ ಜನವರಿ ತಿಂಗಳನ್ನು ರೋಮನ್ ಕ್ಯಾಲೆಂಡರ್‌ಗೆ ಸೇರಿಸಿದ್ದು ರೋಮ್ ಸಾಮ್ರಾಜ್ಯದ ನ್ಯುಮ ಪಾಂಪಿಲಿಯಸ್ ಎಂಬ ದೊರೆ.

ಕ್ರಿ.ಪೂ. ೭೦೦ರಲ್ಲಿ ಈ ಮಹಾ ಘನಂದಾರಿ ತಿರುವು ಮುರುವ ಕೆಲಸ ಮಾಡಿದ. ಇನ್ನು ಜನವರಿಯನ್ನು ಹೊಸ ವರ್ಷವನ್ನಾಗಿ ಆಚರಿಸಲು ಪ್ರಾರಂಭವಾಗಿದ್ದು ಕ್ರಿ.ಪೂ ೪೫೦ರಲ್ಲಿ. ರೋಮನ್ ದೊರೆ ಜನವರಿಯನ್ನು ಪ್ರಾರಂಭಿಸಿದ್ದು ೧೦ನೇ ತಿಂಗಳಾಗಿ. ಅದೂ ದೇವರ ಹೆಸರಿನಲ್ಲಿ ನಂತರದ ಫೆಬ್ರವರಿ ತಿಂಗಳನ್ನು ಫೆಬ್ರುಯೇರಿಸ್ ಎಂದು ತ್ಯಾಗದ ಹೆಸರಿನಲ್ಲಿ ಪ್ರಾರಂಭಿಸಿದ.

ಜನವರಿ ತಿಂಗಳು ಮೊದಲು ಪ್ರಾರಂಭವಾದಾಗ ತಿಂಗಳಲ್ಲಿ ಇದ್ದದ್ದು ಕೇವಲ ೩೦ ದಿನಗಳು ಮಾತ್ರ ಆದರೆ ನಂತರ ಬಂದ ಜೂಲಿಯಸ್ ಸೀಸರ್ ಫೆಬ್ರವರಿಯಿಂದ ಒಂದು ದಿನವನ್ನು ತೆಗೆದುಕೊಂಡು ಜನವರಿ ತಿಂಗಳಲ್ಲಿ ಒಂದು ದಿನವನ್ನು ಹೆಚ್ಚು ಮಾಡಿ ೩೧ ದಿನಗಳನ್ನಾಗಿಸಿದ. ಇದಕ್ಕೆ ಜ್ಯೂಲಿಯಸ್ ಸೀಸರ್ ಬೆಸ ಸಂಖ್ಯೆಗಳನ್ನು ಶ್ರೇಯಸ್ಕರ ಎಂದು ನಂಬಿದ್ದರಿAದ ಜನವರಿ ತಿಂಗಳಿಗೆ ೩೧ ದಿನಗಳನ್ನು ಸೇರಿಸಿದ ಎಂದು ಹೇಳಲಾಗುತ್ತದೆ.

ಆದರೆ ಹೊಸ ವರ್ಷದ ಜನವರಿ ತಿಂಗಳನ್ನು ರೋಮನ್ನರು ಪ್ರಾರಂಭಿಸಿದ್ದು ಹೇಗೆಂದರೆ ರೋಮ್ ಸಾಮ್ರಾಜ್ಯದ ದೊರೆಗಳು ಜನವರಿ ತಿಂಗಳನ್ನು ಪ್ರಾರಂಭಿಸುವುದಕ್ಕೂ ಮುನ್ನ ಅಲ್ಲಿಯೂ ನಾವು ಯುಗಾದಿ ಆಚರಣೆ ಮಾಡುವ ಕೆಲ ದಿನ ಹಿಂದುಮುAದಿನ ದಿನಗಳಲ್ಲಿಯೇ ಅಂದರೆ ಮಾರ್ಚ್ ತಿಂಗಳಲ್ಲಿ ಹೊಸ ವರ್ಷವನ್ನು ಆಚರಣೆ ಮಾಡಲಾಗುತ್ತಿತ್ತು. ಅಂದರೆ ಗ್ರಿಗೋರಿಯನ್ ಕ್ಯಾಲೆಂಡರ್‌ನ್ನು ಪರಿಚಯಿಸಿದವರೂ ಹಿಂದೊಮ್ಮೆ ಮರಗಳು ಚಿಗುರುವ ಮಾಸದಲ್ಲೇ ಹೊಸ ವರ್ಷವನ್ನು ಆಚರಿಸುತ್ತಿದ್ದರು ಎಂದು ತಿಳಿದು ಬರುತ್ತದೆ.

ರೋಮನ್ ಕ್ಯಾಲೆಂಡರ್‌ಗಳಲ್ಲಿ ಇಂದಿಗೂ ಇರುವ ಸೆಪ್ಟೆಂಬರ್ ಅಕ್ಟೋಬರ್ ನವೆಂಬರ್ ಡಿಸೆಂಬರ್ ತಿಂಗಳುಗಳ ಶಬ್ದಗಳು ಶಬ್ದಗಳ ಸಪ್ತ, ಅಷ್ಟ, ನವ, ದಶ ಎಂಬ ಪದಗಳಿಗೂ ಸಾಮ್ಯತೆ ಇರುವುದು ಇದಕ್ಕೆ ಪೂರಕವಾದ ಮತ್ತೊಂದು ವಿಷಯ ಎಂದು ಕೆಲ ತಜ್ಞರು ವಾದ ಮಾಡಿದ್ದಾರೆ. ಅದು ನಿಜವೂ ಎಂದು ಅಧ್ಯಯನದಿಂದ ಕಮಡು ಬರುತ್ತದೆ.

ಜನವರಿ ಯಾವ ದಿನದಂದು ಪ್ರಾರಂಭವಾಗುತ್ತದೋ ಅದೇ ದಿನದಂದು ಅಕ್ಟೋಬರ್ ಸಹ ಪ್ರಾರಂಭವಾಗುತ್ತದೆ ಹಾಗೂ ಫೆಬ್ರವರಿ ಯಾವ ದಿನದಂದು ಕೊನೆಯಾಗುತ್ತದೋ ಅದೇ ದಿನದಂದು ಕೊನೆಯಾಗುತ್ತದೆ. ಅಧಿಕ ವರ್ಷದಲ್ಲಿ ಮಾತ್ರ ಜನವರಿ ತಿಂಗಳು ಏಪ್ರಿಲ್ ತಿಂಗಳು ಪ್ರಾರಂಭವಾದ ದಿನದಂದೇ ಪ್ರಾರಂಭವಾಗಿ ಜುಲೈ ತಿಂಗಳು ಮುಗಿಯುವ ದಿನದಂದೇ ಮುಕ್ತಾಯಗೊಳ್ಳುತ್ತದೆ ಎಂಬುದು ಆಶ್ಚರ್ಯಕರ ಸಂಗತಿಯಾಗಿದೆ.

ರೋಮನ್ನರು ಜನವರಿ ತಿಂಗಳಲ್ಲಿ ಅತಿ ಹೆಚ್ಚು ಚಳಿ ಇರುವ ಕಾರಣದಿಂದ ರೋಮನ್ನರಿಗೆ  ಜನವರಿ ಫೆಬ್ರವರಿ ತಿಂಗಳುಗಳಿಗೆ ವಾಸ್ತವವಾಗಿ ಹೆಚ್ಚಿನ ಮಹತ್ವ ನೀಡಿರಲಿಲ್ಲ. ಕಾಲಕ್ರಮೇಣ ಮನಸೋಇಚ್ಛೆ ಯಾವುದೇ ಗಣಿತದ ಆಧಾರ, ತರ್ಕಬದ್ಧ ವಿಚಾರಗಳಿಲ್ಲದೇ ಕ್ಯಾಲೆಂಡರ್‌ನ್ನು ಬೇಕಾಬಿಟ್ಟಿ ತಯಾರಿಸಲಾಯಿತು. ಇದರಿಂದ ಗೊಂದಲಕ್ಕೀಡಾಗಿ ಪಂಡಿತರ ಸಲಹೆ ಕೇಳಿದ ಜ್ಯೂಲಿಯಸ್ ಸೀಜರ್‌ಗೆ ಮಾರ್ಚ್ ತಿಂಗಳನ್ನು ಬಿಟ್ಟು ಜನವರಿ ತಿಂಗಳನ್ನು ಮೊದಲ ತಿಂಗಳೆಂದು ಪರಿಗಣಿಸಬೇಕೆಂದು ಸಲಹೆ ಮಹಾನ್(?) ಪಂಡಿತರು ನೀಡುತ್ತಾರೆ. ಆ ಸಲಹೆಯಂತೆ ಜೂಲಿಯಸ್ ಸೀಜರ್ ಅವಧಿಯಲ್ಲಿ ಅಂದರೆ ಕ್ರಿ.ಪೂ ೪೫೦ ರಿಂದ ಜನವರಿಯನ್ನು ಹೊಸ ವರ್ಷವನ್ನಾಗಿ ಆಚರಿಸಲು ಪ್ರಾರಂಭಿಸಲಾಗುತ್ತದೆ.

Leave a Reply

Your email address will not be published.