ವಸಂತರಾಜ ಬಂದ

ವಸಂತರಾಜ ಬಂದ

ವಸಂತರಾಜ ಬಂದ

ತಾಜಾ ಮನಸಿನೊಂದಿಗೆ ಬಂದ

ಉತ್ಸಾಹದಿ ವಸಂತ ರಮ್ಯಕಾಲದಲಿ

ಶಿಶಿರದ ವೇದನೆಗೆ ತೇಪೆ ಹಾಕಲು

ಓಡೋಡಿ ಬಂದ

ನೇಸರನ ಹೊಂಗಿರಣಗಳಿAದ

ಕ್ಷಿಪ್ರತೆಯ ನೋವು ನಿವಾರಿಸಿದ

ಅಳುಕಿನ ಮನಸಿಗೆ ಬೆಳಕಿನ

ಸಮ್ಮಿಶ್ರ ನೆರಳಿನ ನೋಟ

ಸಣ್ಣನೆಯ ನರಳಿಕೆಗೆ

ತಣ್ಣನೆಯ ತಂಗಾಳಿ ಬೀಸಿ

ನೆನಯದಂತೆ, ನೊಂದು

ನೆನೆಗುದಿಕೆ ಬೀಳದಂತೆ

ಭರವಸೆಯಾಗಿ ಮತ್ತೆ ಬಂದು

ಹೊಸತೇನೋ ಹೊತ್ತು ತಂದು

ಸುವೃಷ್ಟಿಯ ವಸಂತರಾಜ

  • ಹನುಮಂತ.ಮ.ದೇಶಕುಲಕರ್ಣಿ

Leave a Reply

Your email address will not be published.