ಶೈಕ್ಷಣಿಕ ಕಲಿಕೆಗೆ AI ಪರಿಕರ’ ತರಲು ಸರ್ಕಾರ ಚಿಂತನೆ

ಶೈಕ್ಷಣಿಕ ಕಲಿಕೆಗೆ AI ಪರಿಕರ’ ತರಲು ಸರ್ಕಾರ ಚಿಂತನೆ

ತಂತ್ರಜ್ಞಾನ ಬೆಳೆದಂತೆ ಪ್ರತಿಯೊಂದು ಕ್ಷೇತ್ರದಲ್ಲೂ ವಿಭಿನ್ನ ರೀತಿಯ ಬದಲಾವಣೆಗಳಾಗುತ್ತಿವೆ. ಸ್ವತಂತ್ರ ಪೂರ್ವದಲ್ಲಿ ರೇಡಿಯೋ, ಟಿವಿ ಹೀಗೆ ಒಂದಾದ ಮೇಲೊಂದರಂತೆ ಹೊಸ ಹೊಸ ವಸ್ತುಗಳು ಆವಿಷ್ಕಾರವಾದವು. ಅವುಗಳನ್ನೇ ಇಟ್ಟುಕೊಂಡು ಅದರಲ್ಲಿ ವಿಭಿನ್ನ ತಂತ್ರಜ್ಞಾನಗಳ ಅಳವಡಿಕೆ ಶುರುವಾಯಿತು. ಅಲ್ಲಿಂದ ಆರಂಭವಾದ ತಂತ್ರಜ್ಞಾನ ಯುಗ ಪ್ರಸ್ತುತ ಎಲ್ಲಾ ಕ್ಷೇತ್ರಗಳಲ್ಲಿಯೂ ಅನಿವಾರ್ಯವಾಗಿಬಿಟ್ಟಿದೆ.

ಇದೀಗ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದಂತೆಯೇ ಎಲ್ಲಾ ಕ್ಷೇತ್ರಗಳಲ್ಲಿಯೂ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತಿದೆ. ಆರಂಭದಲ್ಲಿ ಕೇವಲ ಮಾಹಿತಿ ಕೊಡುವ ಉದ್ದೇಶದಿಂದ ಕಾಲಿಟ್ಟ ಕೃತಕ ಬುದ್ಧಿಮತ್ತೆ ಈಗ ಹಂತ ಹಂತವಾಗಿ ಬದಲಾಗುತ್ತಿದೆ. ಇದೀಗ ಕೇಂದ್ರ ಸರ್ಕಾರ ಶೈಕ್ಷಣಿಕ ಕಲಿಕೆಗೆ ಎಐ ಪರಿಕರಗಳನ್ನು ಅಳವಡಿಸುವ ಯೋಜನೆಗೆ ಚಿಂತನೆ ನಡೆಸಿದೆ. ಏನು ಈ ಯೋಜನೆ? ಯಾವ ರೀತಿ ಇದು ಕೆಲಸ ಮಾಡಲಿದೆ? ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಕಳೆದ ವಾರ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ಮುಂದಿನ ಶೈಕ್ಷಣಿಕ ವರ್ಷದಿಂದ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣವರೆಗೆ ಎಲ್ಲಾ ಹಂತದ ಬೋಧನೆಯಲ್ಲಿ ಎಐ ಪರಿಕರಗಳನ್ನು ಜಾರಿಗೆ ತರಲಾಗುವುದು ಎಂಬ ಮಾಹಿತಿ ನೀಡಿದ್ದರು. ಈ ಸಂಬAಧ `ಬೋಧನ್ ಎಐ’ ಎಂಬ ಲಾಭರಹಿತ ಕಂಪನಿಗೆ Centre of Excellence in AI ನಲ್ಲಿ ಚಾಲನೆ ನೀಡಿದರು. ಈ Centre of Excellence in AI ಅನ್ನು ಐಐಟಿ ಮದ್ರಾಸ್ ಆಯೋಜಿಸುತ್ತಿದ್ದು, ಕಳೆದ ವರ್ಷ ಈ ಸಂಬAಧ ಬಜೆಟ್ ನಲ್ಲಿ ೫೦೦ ಕೋಟಿ ರೂಗಳನ್ನು ನಿಗದಿಪಡಿಸಲಾಗಿದೆ.

ಈ ಕಂಪನಿಯು ಕಿಂಡರ್ ಗಾರ್ಟನ್ ನಿಂದ ಉನ್ನತ ಶಿಕ್ಷಣ ವರೆಗೆ ಇಡೀ ಶಿಕ್ಷಣ ವ್ಯವಸ್ಥೆಗೆ ಅವಶ್ಯಕವಾದ ಎಐ ಪರಿಕರಗಳು ಮತ್ತು ಇನ್ನಿತರ ಸೇವೆಗಳನ್ನ ಒದಗಿಸುವ ಒಂದು ಡಿಜಿಟಲ್ ಚೌಕಟ್ಟನ್ನು ರಚಿಸುತ್ತದೆ ಅದನ್ನು ಭಾರತ್ Eduai ಎಂದು ಕರೆಯಲಾಗುತ್ತದೆ. ಯಾವ ರೀತಿ ಯುಪಿಐ ದೊಡ್ಡಮಟ್ಟದಲ್ಲಿ ಹಣ ವರ್ಗಾವಣೆಗೆ ಸಹಾಯ ಮಾಡುತ್ತದೆಯೋ ಅದೇ ರೀತಿ ಡಿಜಿಟಲ್ ಆಗಿ ಸಾರ್ವಜನಿಕರಿಗೆ ಮೂಲ ಸೌಕರ್ಯ ಒದಗಿಸುವ ಡಿಪಿಐ ಅಡಿಯಲ್ಲಿ ಭಾರತ್ Eduai ಕಾರ್ಯನಿರ್ವಹಿಸುತ್ತದೆ.

ಉದ್ದೇಶ: ಇದರಡಿಯಲ್ಲಿ ಭಾರತೀಯ ಭಾಷೆಗಳಿಗೆ ತಕ್ಕಂತೆ ಕೃತಕ ಬುದ್ಧಿಮತ್ತೆ ಮಾಡೆಲ್ಗಳನ್ನು ಅಭಿವೃದ್ಧಿಪಡಿಸುತ್ತದೆ. ಜೊತೆಗೆ ಸ್ವಯಂ ಭಾಷೆಯನ್ನ ಗುರುತಿಸುವಿಕೆ ಮತ್ತು ಅದೇ ಭಾಷೆಯಲ್ಲಿ ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತದೆ.

ಇದರ ಅಡಿಯಲ್ಲಿ ಕಂಪನಿಗಳು ಎಜುಕೇಶನ್ ಟೆಕ್ನಾಲಜಿಗೆ ಸಂಬಂಧಪಟ್ಟಂತೆ ಅಪ್ಲಿಕೇಶನ್ ಗಳನ್ನು ಕೂಡ ಅಭಿವೃದ್ಧಿಪಡಿಸಬಹುದಾಗಿದೆ.  ಡಿಜಿಟಲ್ ಪರಿಕರಿಗಳನ್ನು ಮತ್ತು ಸಾಫ್ಟ್ ವೇರ್ ಅನ್ನು ಅಭಿವೃದ್ಧಿಪಡಿಸಿ,  ಬಳಿಕ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಶಾಲೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಅಳವಡಿಸಲಾಗುತ್ತದೆ.  ಕಲಿಕೆಯನ್ನು ಸುಧಾರಿಸಲು, ಶಿಕ್ಷಣದಲ್ಲಿ ತಂತ್ರಜ್ಞಾನವನ್ನು ಅಳವಡಿಸುವ ವಿಶೇಷ ಉದ್ದೇಶವನ್ನು ಎತ್ತಿ ತೋರಿಸುತ್ತದೆ. ಅಲ್ಲದೆ ಹೊಸ ಅಪ್ಲಿಕೇಶನ್ ಗಳು ಹಾಗೂ ಡಿಜಿಟಲ್ ಪರಿಕರಗಳನ್ನು ಅಭಿವೃದ್ಧಿಪಡಿಸಿ ಅವುಗಳನ್ನ ನೇರವಾಗಿ ಶಾಲೆಗಳು ಮತ್ತು ಇನ್ನಿತರ ಶಿಕ್ಷಣ ಸಂಸ್ಥೆಗಳಿಗೆ ಪರಿಚಯಿಸುವ ಗುರಿ ಹೊಂದಿದೆ.  ಈ ಮೂಲಕ ವಿದ್ಯಾರ್ಥಿಗಳಿಗೆ ಸುಲಭ ಮಾಹಿತಿ ಹಾಗೂ ರಾಜ್ಯ ಸರ್ಕಾರಗಳೊಂದಿಗೆ ನೇರವಾಗಿ ಸಂಪರ್ಕ ಹೊಂದಿರುತ್ತದೆ.

ಐಐಟಿ ಮದ್ರಾಸ್ ನ ನಿರ್ದೇಶಕರಾದ ವಿ. ಕಾಮಕೋಟಿ ಅವರ ಮಾಹಿತಿಯಂತೆ, ಶೈಕ್ಷಣಿಕ ಪರಿಕರಗಳು ಪೂರ್ವ ವ್ಯಾಪ್ತಿಯ ಕಲಿಕಾ ಸಾಮರ್ಥ್ಯದ ಆಧಾರದ ಮೇಲೆ ತಯಾರಾಗುತ್ತವೆ. ಜೊತೆಗೆ ಶಿಕ್ಷಕರಿಗೆ ಮಾರ್ಗದರ್ಶನ ಹಾಗೂ ಪೋಷಕರು ಇದರಲ್ಲಿ ಮಧ್ಯಸ್ಥಿಕೆ ಬಯಸುವಂತಹ ಅವಕಾಶ ನೀಡುತ್ತದೆ. ಅಲ್ಲದೆ ಜಿಲ್ಲೆಗಳಲ್ಲಿ ಶಾಲೆಗಳು ಯಾವ ರೀತಿ ನಡೆಯುತ್ತದೆ ಎಂಬುದನ್ನು ಗಮನಿಸಲು ಆಡಳಿತ ಮಂಡಳಿಗೆ ವಿದ್ಯಾರ್ಥಿಗಳ ಪರೀಕ್ಷಾ ಅಂಕ, ಹಾಜರಾತಿ, ಶಿಕ್ಷಕರು ಮತ್ತು ಮೂಲ ಸೌಕರ್ಯಗಳ ಗುಣಮಟ್ಟದ ಮಾಹಿತಿಯನ್ನು ಇದು ನೀಡುತ್ತದೆ.

ಅಲ್ಲದೆ ಮಕ್ಕಳಿಗೆ ಪಠ್ಯಕ್ರಮವನ್ನು ಹಂಚಿಕೆ ಮಾಡುವುದು, ಪಠ್ಯಕ್ರಮವನ್ನ ಪುನರ್ ಪರಿಶೀಲನೆ ಮಾಡಿ ರಚಿಸುವುದು ಹಾಗೂ ಹೊಸ ತಂತ್ರಜ್ಞಾನವನ್ನ ಪರಿಚಯಿಸೋದು ಹಾಗೂ ಶಿಕ್ಷಕರಿಗೆ ತರಬೇತಿ ಒದಗಿಸುವಂತಹ ನಿರ್ಧಾರ ಕೈಗೊಳ್ಳಲು ಇದು ಸಹಾಯಮಾಡುತ್ತದೆ ಎಂದು ತಿಳಿಸಿದ್ದಾರೆ. ಒಂದು ಮಗು ಹೇಗೆ ತನ್ನ ಮಾತೃ ಭಾಷೆಯಲ್ಲಿ ಎಲ್ಲವನ್ನು ಅರ್ಥ ಮಾಡಿಕೊಳ್ಳುತ್ತದೆಯೋ ಹಾಗೆಯೇ ಂI ಕೂಡ ಮಕ್ಕಳಿಗೆ ಅವರ ಮಾತೃಭಾಷೆಯಲ್ಲಿಯೇ ತಿಳಿಯುವಂತೆ ಅವಕಾಶ ಮಾಡಿಕೊಡಬೇಕು. ಮತ್ತು ಧ್ವನಿ ಆಧಾರಿತ ಕೆಲವು ವರ್ಕ್ ಗಳನ್ನು ಒದಗಿಸಬೇಕು. ಈ ಮೂಲಕ ವಿದ್ಯಾರ್ಥಿಗಳ ಉಚ್ಚಾರಣೆ ನಿರರ್ಗಳವಾಗಿ ಮಾತನಾಡುವುದು ಸೇರಿದಂತೆ ಎಲ್ಲದರ ಕುರಿತು ಶಿಕ್ಷಕರಿಗೆ ವರದಿಯನ್ನು ಕೂಡ ಇದು ನೀಡುತ್ತದೆ. ಈ ಮೂಲಕ ವಿದ್ಯಾರ್ಥಿಯ ಬೆಳವಣಿಗೆ ಯಾವ ರೀತಿಯಾಗಿದೆ ಎನ್ನುವುದು ತಿಳಿಯುತ್ತದೆ. ಅಲ್ಲದೆ ಸುಲಭವಾಗಿ ಓದುವುದು, ಭಾಷಾ ಕಲಿಕೆ ಮತ್ತು ರಸಪ್ರಶ್ನೆಗಳಿಗೆ ಉತ್ತರಿಸುವುದು ಇಂತಹ ಚಟುವಟಿಕೆಗಳನ್ನ ಅದು ನೀಡುತ್ತದೆ

ಈ ಸಾಧನವು ಯಾವುದೇ ಮಗು ಪ್ರಶ್ನೆ ಕೇಳಿದಾಗ ಅದಕ್ಕೆ ಉತ್ತರಿಸುತ್ತದೆ. ಪ್ರತಿಯೊಂದು ಭಾಷೆಯಲ್ಲಿಯೂ ಇದು ಲಭ್ಯವಿದ್ದು ಮಗು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಇದು ಹೊಂದಿರಬೇಕು ಎಂದು ತಿಳಿಸಿದ್ದಾರೆ.

ಇನ್ನು ಮಕ್ಕಳು ಆಪ್ ನಲ್ಲಿ ಹಾಕುವ ದತ್ತಾಂಶವು ಕೇವಲ ಮಕ್ಕಳು ಬಳಸುವ ಆಪ್ ನಲ್ಲಿ ಮಾತ್ರ ಇರಬೇಕು. ಎಲ್ಲವೂ ವಯಕ್ತಿಕವಾಗಿರಬೇಕು. ಯಾವುದೇ ದತ್ತಾಂಶವು ಸಾರ್ವಜನಿಕ ವೇದಿಕೆಗೆ ಲಭ್ಯವಿರಬಾರದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ವಿದ್ಯಾರ್ಥಿಗಳಿಗೆ ವೈಯಕ್ತಿಕ ಕಲಿಕೆಗೆ ಅನುವು ಮಾಡಿಕೊಡುತ್ತದೆ. ಧ್ವನಿ ಆಧಾರಿತ ಚಟುವಟಿಕೆಗಳು ಮತ್ತು ತಕ್ಷಣದ ಪ್ರತಿಕ್ರಿಯೆಗಳು ಇದರಿಂದ ಲಭ್ಯವಾಗುತ್ತದೆ. ಪ್ರಶ್ನೆಗೆ ಉತ್ತರ, ಡಿಜಿಟಲ್ ಟ್ಯೂಷನ್ ಮಾದರಿಯ ಅಂಶಗಳು ಮತ್ತು ರಿವಿಶನ್ ಗೆ ಸಹಾಯ ಮಾಡುತ್ತದೆ. ಚಟುವಟಿಕೆಗಳ ಮೂಲಕ ಮಕ್ಕಳಿಗೆ ಕಲಿಕೆಗೆ ಅನುವು ಮಾಡಿಕೊಡುತ್ತದೆ. ವಿದ್ಯಾರ್ಥಿಗಳ ಚಟುವಟಿಕೆ, ಬಳಕೆ ಹಾಗೂ ಇನ್ನಿತರ ಕಲಿಕಾ ಸಾಮರ್ಥ್ಯ ಗಮನಿಸಿ ರಿಪೋರ್ಟ್ ನೀಡುತ್ತದೆ. ಇದರಿಂದ ಸುಲಭವಾಗಿ ವಿದ್ಯಾರ್ಥಿಗಳ ಪ್ರಗತಿಯ ಕುರಿತು ಮಾಹಿತಿ ದೊರೆಯುತ್ತದೆ. ಶಿಕ್ಷಕರಿಗೆ ತರಬೇತಿ ಹಾಗೂ ಮಕ್ಕಳ ಕಲಿಕಾ ಕೌಶಲ್ಯದ ಆಧಾರದ ಮೇಲೆ ಸಹಾಯವಾಗುತ್ತದೆ. ಇದು ಮಾತೃಭಾಷೆಯಲ್ಲಿ ಮಾಹಿತಿ ನೀಡುವಲ್ಲಿ ಸಹಾಯ ಮಾಡುತ್ತದೆ.

ಇನ್ನು ಆಡಳಿತ ಮಂಡಳಿಗೆ ಪ್ರತಿ ಶಾಲೆಯ ಬಗ್ಗೆ, ಆ ಶಾಲೆಯ ಶೈಕ್ಷಣಿಕ ಗುಣಮಟ್ಟ ಹಾಗೂ ಮಕ್ಕಳ ಕಲಿಕಾ ಕೌಶಲ್ಯ ಬಗ್ಗೆ ಮಾಹಿತಿ ಒದಗಿಸುತ್ತದೆ. ಜೊತೆಗೆ ಜಿಲ್ಲೆಯ ಪ್ರಗತಿ ಹಾಗೂ ಜಿಲ್ಲೆಗಳಲ್ಲಿನ ಶಾಲೆಗಳ ಬಗ್ಗೆ ಇದು ಮಾಹಿತಿ ನೀಡಲು ಸಹಾಯಮಾಡುತ್ತದೆ.

Leave a Reply

Your email address will not be published.