ಶಿವ ಸಮರ್ಪಣೆಯ ಮಾಸ ಶ್ರಾವಣ ಮಾಸ ‘ಮಾಸಗಳ ರಾಜ ಶ್ರಾವಣ ಮಾಸ’
ತುಗಳ ರಾಜ ವಸಂತ ಋತು’ ಹೇಗೋ ಹಾಗೇಯೇ ‘ಮಾಸಗಳ ರಾಜ ಶ್ರಾವಣ ಮಾಸ’ ಎನ್ನಬಹುದು. ಬ್ರಹ್ಮನ ಮುಖದಿಂದ ಅವಿರ್ಭವಿಸಿದ ಋಗ್ವೇದ, ಸಾಮವೇದ, ಯಜುರ್ವೇದ, ಮತ್ತು ಅಥರ್ವಣವೇದ ಮುಂತಾದ ಚತುರ್ವೇದಗಳೂ, ಸಕ್ಯ, ಸಾಮೀಪ್ಯ, ಸಾರೂಪ್ಯ, ಸಾಯೂಜ್ಯವೆಂಬ ಚತುರ್ವಿಧ ಮೋಕ್ಷಗಳೂ ಹಾಗೂ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥಗಳೂ ಈ ಮಾನವನ ಸಾರ್ಥಕ ಬದುಕಿಗೆ ಅರ್ಥವನ್ನು ಕಲ್ಪಿಸಿದವು ಜನಜೀವನದ ಜೀವಾಳವೆಂದೆನಿಸಿರುವ ಭೌಗೋಳಿಕ ಪರಿಸರ,ಋತುಮಾನಗಳು, ಜೀವಿಗಳ ಬಾಹ್ಯಾಂತರ ಬದುಕಿನ ಮೇಲೆ ಆಗಾಧವಾದ ಪರಿಣಾಮ ಬೀರುತ್ತವೆಂಬುವುದು ವೈಜ್ಞಾನಿಕ ಸತ್ಯವಾದರೂ ಮಾನವ ಜೀವಿಯ ಆಂತರಿಕ ಪರಿಣಾಮಗಳಲ್ಲಿ ‘ಅಧ್ಯಾತ್ಮಿಕ’ ಪರಿಣಾಮವೂ ಒಂದಾಗಿದೆ ಎಂಬ ಮಾತು ಅಷ್ಟೇ ಸತ್ಯ. ‘ಶ್ರಾವಣ ಮಾಸದಲ್ಲಿ ನಡೆಯುವ ಧರ್ಮಾಚರಣೆಯ ಬಲವಾಗಿ ಸಮರ್ಥಿಸಬಲ್ಲ ಆಧಾರ ಮತ್ತು ಸಕಾರಣಗಳಾಗಿವೆ.

  ಹಿಂದೂ ಪಂಚಾಂಗದಲ್ಲಿ ಶ್ರಾವಣ ಮಾಸ ಶ್ರೇಷ್ಠ ಮಾಸಗಳಲ್ಲಿ ಒಂದಾಗಿದೆ. ಹಬ್ಬಗಳ ಸಾಲು ಪ್ರಾರಂಭವಾಗುವ ಮಾಸವೂ ಇದಾಗಿದ್ದು, ಸನಾತನ ಪಂಚಾಂಗದ ೫ ನೇ ತಿಂಗಳನ್ನು ಶಿವನಿಗೆ ಅರ್ಪಿಸಲಾಗಿದೆ. ಅಂದರೆ ಈ ಮಾಸದಲ್ಲಿ ಪರಮೇಶ್ವರನನ್ನು ಹೆಚ್ಚು ಆರಾಧಿಸಲಾಗುತ್ತದೆ. ವಿಶೇಷವಾಗಿ ಸೋಮವಾರಗಳಂದು ಈಶ್ವರನಿಗೆ ವಿಶೇಷ ಪೂಜೆ ನಡೆಯಲಿದ್ದು, ಶ್ರಾವಣ ಸೋಮವಾರದಂದು ನಡೆಯುವ ಶಿವ ಪೂಜೆಗೆ ವಿಶೇಷ ಮಹತ್ವವಿದೆ.   ಶ್ರವ ಸವ್ರಿಸು-ಸುರಿಸು, ಶ್ರವಕ-ಸುರಿಸುವ ಈ ಶ್ರವಕವು-ಶ್ರಾವಕವಾಗಿ ೨೭ ನಕ್ಷತ್ರಗಳು ಒಂದೇ ರೇಖೆಯಲ್ಲಿ ಬಂದು ಮಂಗಳಕರ ಫಲಗಳನ್ನು ಗರೆಯುವ ಮೂಲಕ ಶ್ರಾವಣವಾಗಿ ರೂಪಾಂತರ ಹೊಂದಿರಬಹುದು ಅಥವಾ ಶ್ರವಣ ಅಂದರೆ (ಆಲಿಸು)ಕೇಳುವುದು. ಹೀಗೆ ಜೀವ-ಶಿವರ ಐಕ್ಯತ್ವ ಘಟಿಸುವುದು. ಆಲಿಸಿದಾಗಲೇ ಮುಕ್ತಿ ಎಂದರ್ಥ.

ಮಾಸಗಳಲ್ಲೇ ಶ್ರಾವಣ ಮಾಸವು ಅತ್ಯಂತ ಪ್ರಮುಖ ಮಾಸವಾಗಿದೆ. ಈ ತಿಂಗಳಲ್ಲಿ ಶ್ರಾವಣ ಶಿವರಾತ್ರಿ ಪ್ರಮುಖವಾದುದಾಗಿದೆ. ಶ್ರಾವಣದಲ್ಲಿ ಶಿವನನ್ನು ಆರಾಧಿಸಿದರೆ ಶುಭ ಫಲವು ನಮ್ಮದಾಗುತ್ತದೆ. ಶಿವನ ಆರಾಧನೆಯು ವ್ಯಕ್ತಿಯ ಮನಸ್ಸನ್ನು, ಇಂದ್ರೀಯವನ್ನು, ದೇಹವನ್ನು ಮತ್ತು ಆತ್ಮವನ್ನು ಶುದ್ಧೀಕರಿಸುತ್ತದೆ. ಶ್ರಾವಣ ಎಂದರೆ ಹಿಂದೂ ಧರ್ಮಾನುಯಾಯಿಗಳಿಗೆ, ಅದರಲ್ಲೂ ಕನ್ನಡ ನಾಡಿನ ಜನತೆಗೆ ಸಂಭ್ರಮದ ಮಾಸ. ಸಂವತ್ಸರದ ಹಬ್ಬ-ಹರಿದಿನಗಳ ಪ್ರಾರಂಭ ಶ್ರಾವಣ ಮಾಸದಿಂದಲೇ, ಹಬ್ಬಗಳಿಗೆ ನಾಗರ ಪಂಚಮಿ ಮಹಾದ್ವಾರ ಇದ್ದಂತೆ. ಪಂಚಮಿ ಬಳಿಕ ಒಂದರ ಹಿಂದೊಂದು ಹಬ್ಬಗಳು ಸಾಲಾಗಿ ಬರುತ್ತವೆ.

ಮುಖ್ಯವಾಗಿ ಹೆಂಗಳೆಯರು, ಮುತ್ತೈದೆಯರಿಗೆ ಶ್ರಾವಣ ಮಾಸವೆಂದರೆ ವಿಶೇಷ. ಮುತ್ತೈದೆಯರು ಆಚರಿಸುವ ಮಂಗಳಗೌರಿ ವ್ರತ, ಮಹಾಲಕ್ಷ್ಮಿಯ ವರವನ್ನು ಕೇಳುವ ವರಮಹಾಲಕ್ಷ್ಮೀ ವ್ರತಗಳು ಬರುವುದು ಕೂಡ ಇದೇ ಶ್ರಾವಣದಲ್ಲಿ. ಮಳೆಗಾಲದೊಂದಿಗೆ ಹಸಿರಾಗುವ ಪರಿಸರದ ನಡುವೆ ಹಬ್ಬಗಳನ್ನು ಆಚರಿಸುವ ಸಂಭ್ರಮದ ಸಮಯ ಇದಾಗಿದೆ. ಜತೆಗೆ ಮಕ್ಕಳಿಗೂ ಸಾಲು ಸಾಲು ರಜೆಗಳು ಸಿಗುವುದರಿಂದ ಮಕ್ಕಳಲ್ಲೂ ಸಂತಸ ತುಂಬುವುದು ಶ್ರಾವಣ ಮಾಸದ ವಿಶೇಷ.

೧೬ ಸೋಮವಾರಗಳು:

ದಕ್ಷಿಣ ಭಾರತದಲ್ಲಿ ಶ್ರಾವಣ ಸೋಮವಾರ ಪೂಜೆಯಾದರೆ, ಇದು ಉತ್ತರ ಭಾರತದಲ್ಲಿ ಸಾವನ್ ಸೋಮವಾರ್ ವ್ರತ್ ಎಂದೇ ಪ್ರಸಿದ್ಧಿ ಪಡೆದಿದೆ. ಉತ್ತರ ಭಾರತದಲ್ಲಿ ಶ್ರಾವಣ ಸೋಮವಾರಂದು ಭಕ್ತಾದಿಗಳು ಉಪವಾಸವಿದ್ದು, ಸಾವನ್ ಶಿವರಾತ್ರಿ ಸಹ ನಡೆಯಲಿದೆ. ಶ್ರವಣಾ ನಕ್ಷತ್ರದಂದು ಈ ಮಾಸ ಪ್ರಾರಂಭವಾಗುವುದರಿಂದ ಇದಕ್ಕೆ ಶ್ರಾವಣ ಮಾಸ ಎಂದು ಹೇಳುತ್ತಾರೆ. ಶ್ರಾವಣ ಮಾಸದಲ್ಲಿ ಕೇವಲ ಹಬ್ಬಗಳಷ್ಟೇ ಅಲ್ಲದೇ, ಶುಭ ಕಾರ್ಯಗಳಿಗೆ ಮುಹೂರ್ತವೂ ಇರಲಿದ್ದು, ಶುಭಾರಂಭಕ್ಕೆ ಪ್ರಶಸ್ತವಾದ ಮಾಸ ಎಂಬ ನಂಬಿಕೆ ಇದೆ.

  ತಿಂಗಳಲ್ಲಿ ಬರುವ ೧೬ ಸೋಮವಾರಗಳೂ ಸಹ ಉಪವಾಸವಿದ್ದು, ಶ್ರಾವಣ ಮಾಸವನ್ನು ಆಚರಿಸುವ ಪದ್ಧತಿ ಹಲವೆಡೆ ಇದ್ದು, ಈ ರೀತಿ ಮಾಡುವುದರಿಂದ ಮನಸ್ಸಿನ ಸಂಕಲ್ಪಗಳು ಈಡೇರುತ್ತದೆ ಎಂದು ಹೇಳಲಾಗುತ್ತೆ. ಶ್ರಾವಣ ಮಾಸದ ಸೋಮವಾರದಂದು ಶಿವನನ್ನು ಪೂಜಿಸುವುದಷ್ಟೇ ಅಲ್ಲದೇ ಮಂಗಳವಾರದಂದು ಪಾರ್ವತಿ ದೇವಿಯನ್ನು ಆರಾಧಿಸುವ ಮಂಗಳ ಗೌರಿ ವ್ರತಾಚರಣೆಯಿರುವುದು ಶ್ರಾವಣ ಮಾಸದ ಮತ್ತೊಂದು ವಿಶೇಷವಾಗಿದೆ.

ಸಮುದ್ರ ಮಂಥನ:

ಅನೇಕ ಧರ್ಮಗ್ರಂಥಗಳಲ್ಲಿ ಶ್ರಾವಣ ಮಾಸವನ್ನು ಅತ್ಯಂತ ಪವಿತ್ರವೆಂದು ಹೇಳಲಾಗಿದೆ. ಶ್ರಾವಣ ತಿಂಗಳಲ್ಲಿ ಶಿವ ಭಕ್ತರು ಕಠಿಣ ಉಪವಾಸವನ್ನು ಮತ್ತು ಪ್ರಾರ್ಥನೆಯನ್ನು ಮಾಡುತ್ತಾರೆ. ಶ್ರಾವಣ ಮಾಸ ಅತ್ಯಂತ ಪ್ರಮುಖವಾದುದ್ದು ಯಾಕೆಂದರೆ, ದೇವರುಗಳ ಮತ್ತು ಅಸುರರ ನಡುವೆ ನಡೆದ ಸಮುದ್ರ ಮಂಥನ ಸಂದರ್ಭದಲ್ಲಿ ಹೊರಹೊಮ್ಮಿದ ಹಾಲಾಹಲವನ್ನು ಶಿವನು ಸೇವಿಸಿದ ಸಮಯವಿದು. ಮಂಥನದ ಸಮಯದಲ್ಲಿ ಸುಮಾರು ೧೪ ವಿವಿಧ ರತ್ನಗಳು ಹೊರಹೊಮ್ಮುತ್ತದೆ ಅದರಲ್ಲಿ ಹಾಲಾಹಲ ಎನ್ನುವ ಕಾರ್ಕೋಟಕ ವಿಷವೂ ಕೂಡ ಒಂದು. ಹಾಲಾಹಲ ವಿಷವು ಹೊರಹೊಮ್ಮುತ್ತಿದ್ದಂತೆ ಬ್ರಹ್ಮಾಂಡದಲ್ಲಿ ಅಲ್ಲೋಲ ಕಲ್ಲೋಲವಾಗಲಾರಂಭಿಸಿತು.

 ಆಗ ಶಿವನು ಬ್ರಹ್ಮಾಂಡವನ್ನು ರಕ್ಷಿಸಲು ವಿಷವನ್ನು ಸೇವಿಸುತ್ತಾನೆ. ಇದನ್ನು ಗಮನಿಸಿದ ಪಾರ್ವತಿಯು ಓಡಿ ಬಂದು ತನ್ನ ಪತಿಯ ಗಂಟಲನ್ನು ಬಿಗಿ ಹಿಡಿಯುತ್ತಾಳೆ. ಆಗ ವಿಷವು ಶಿವನ ಕಂಠದಲ್ಲೇ ಉಳಿದುಕೊಳ್ಳುತ್ತದೆ ಅಂದಿನಿಂದ ಶಿವನನ್ನು ನೀಲಕಂಠ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ.

ಶ್ರಾವಣ ಮಾಸದಲ್ಲಿ ರುದ್ರಾಕ್ಷಿ ಮಾಲೆಯನ್ನು ಹಿಡಿದು ಶಿವ ಮಂತ್ರಗಳನ್ನು ಜಪಿಸಬೇಕು. ೧೦೮ ಬಾರಿ ಈ ಮಂತ್ರಗಳನ್ನು ಅಥವಾ ಇದಕ್ಕೂ ಹೆಚ್ಚು ಬಾರಿ ಈ ಕೆಳಗಿನ ಮಂತ್ರಗಳನ್ನು ಪಠಿಸಬೇಕು. ಶ್ರಾವಣ ಮಾಸದಲ್ಲಿ ಬೆಳಗ್ಗೆ ಅಥವಾ ಸಂಜೆ ಈ ಕೆಳಗಿನ ಮಂತ್ರಗಳನ್ನು ಪಠಿಸಿ. ಅಥವಾ ದಿನನಿತ್ಯ ಕೂಡ ಮಂತ್ರವನ್ನು ಪಠಿಸಬಹುದು.

ಶ್ರಾವಣ ಸೋಮವಾರದ ಉಪವಾಸ:

ಶಿವ ಪುರಾಣದಲ್ಲೂ ಕೂಡ ಶ್ರಾವಣ ಮಾಸದ ಉಪವಾಸವನ್ನು ಉಲ್ಲೇಖಿಸಲಾಗಿದೆ. ಶಿವ ಪುರಾಣದ ಪ್ರಕಾರ, ಶ್ರಾವಣ ಮಾಸದಲ್ಲಿ ಉಪವಾಸವನ್ನು ಆಚರಿಸುವುದರಿಂದ ನಿಮ್ಮೆಲ್ಲಾ ಆಸೆಗಳು ಈಡೇರುತ್ತದೆ. ಮತ್ತು ಶಿವನ ಆಶೀರ್ವಾದವು ನಿಮ್ಮದಾಗುತ್ತದೆ. ಶಿವ ಭಕ್ತರಿಗೆ ಶ್ರಾವಣ ಸೋಮವಾರ ಪ್ರಮುಖವಾದ ದಿನವಾಗಿದೆ. ಶ್ರಾವಣ ಸೋಮವಾರದ ಉಪವಾಸದಂದು ಶಿವ ಭಕ್ತರು ನೀರನ್ನು ಹೊರತುಪಡಿಸಿ ಬೇರಾವ ಆಹಾರ ಪದಾರ್ಥಗಳನ್ನು ಸೇವಿಸುವುದಿಲ್ಲ. ಸೂರ್ಯಾಸ್ತದ ನಂತರ ಆ ವ್ಯಕ್ತಿಯು ಬೆಳ್ಳುಳ್ಳಿ ಮತ್ತು ಈರುಳ್ಳಿ ರಹಿತ ಆಹಾರವನ್ನು ಸೇವಿಸುವುದರ ಮೂಲಕ ಉಪವಾಸವನ್ನು ತೆಗೆದು ಹಾಕಲಾಗುತ್ತದೆ. ಇನ್ನು ಕೆಲವರು ಶ್ರಾವಣ ಸೋಮವಾರದ ಉಪವಾಸದಲ್ಲಿ ಹಣ್ಣುಗಳನ್ನು ಸೇವಿಸುತ್ತಾರೆ ಹಾಗೂ ರಾತ್ರಿ ಊಟವನ್ನು ಮಾಡುತ್ತಾರೆ. ಇನ್ನು ಕೆಲವರು ಉಪವಾಸದೊಂದಿಗೆ ಮೌನ ವ್ರತವನ್ನು ಕೂಡ ಮಾಡುತ್ತಾರೆ.

ಪರಶಿವನಿಂದ ಬ್ರಹ್ಮ, ಬ್ರಹ್ಮನಿಂದ ದಕ್ಷ, ದಕ್ಷನಿಂದ ಮನು, ಮನುವಿನಿಂದ ರಾಜರು, ಪ್ರಜೆಗಳು, ಪ್ರಜೆಗಳಲ್ಲಿ, ಸ್ತ್ರೀ-ಪುರುಷರೆಂಬ ಎರಡು ವರ್ಗ, ಪ್ರಜೆಗಳು ಸೌಖ್ಯದಿಂದ ಬಾಳಿ ಬದುಕಲೆಂದು ಇಳೆ, ಗಾಳಿ, ಮಳೆ, ನದಿ, ಬೆಟ್ಟ, ಪರ್ವತ, ಸೂರ್ಯ, ಚಂದ್ರ, ನಕ್ಷತ್ರಗಳು ಮತ್ತು ಸಕಲ ಸಂಪನ್ಮೂಲಗಳಿAದ ಈ ಸಷ್ಟಿಯು ಸಮೃದ್ಧವಾಯಿತು.

ಹಬ್ಬಗಳ ಆರಂಭ:

ಶ್ರಾವಣ ಮಾಸದಲ್ಲಿ ಒಂದೇ ರೇಖೆಯಲ್ಲಿ ಬರುವ ೧೭ ನಕ್ಷತ್ರಗಳು ಮಂಗಳಕರವಾದ ಮಳೆಗೆರೆದು,ಧರೆಯ ಜನರಿಗೆ ಉನ್ನತ ಫಲಗಳನ್ನು ನೀಡುತ್ತಿದೆ. ಸಿರಿ ಸಂಪತ್ತು ವದ್ಧಿಗಾಗಿ ವರಲಕ್ಷ್ಮಿ ಮಹಾ ಪೂಜಾ ವ್ರತವಾದ ಸಂಪತ್ತು ಶುಕ್ರವಾರ, ಸಕಲ ಸಂಕಷ್ಟಗಳಿಂದ ಮುಕ್ತಗೊಳಿಸಿ ಸಮದ್ಧಿ ನೀಡುವ ಶ್ರೀ ಸತ್ಯ ನಾರಾಯಣ ಪೂಜಾವ್ರತ,ಮಂಗಳಗೌರಿ ವ್ರತ, ವಿದ್ಯಾಬುದ್ಧಿ ವದ್ಧಿಗಾಗಿ ಶಾರದಾ(ಸರಸ್ವತಿ) ಮಹಾಪೂಜೆ, ನಾಡ ಹಬ್ಬ ನಾಗಪಂಚಮಿ (ನಾಗಚತುರ್ಥಿ) ನಾಗದೇವತೆಗೆ ಹಾಲೆರೆಯುವದು, ಸಹೋದರಿಯರ ರಕ್ಷಾಬಂಧನ, ಈ ಧರಯಲ್ಲಿ ದಶಾವತಾರಗಳನ್ನೆತ್ತಿ ದುರುಳ ದೈತ್ಯರನ್ನು ಸಂಹರಿಸಿದ ಶ್ರೀಹರಿಯು ಕಷ್ಣಾವತಾರವೆತ್ತಿದ ಪ್ರಯುಕ್ತ ಶ್ರೀಕಷ್ಣ ಜನ್ಮಾಷ್ಟಮಿ ಆಚರಣೆ ಮುಂತಾದ ವಿಧಿ ವಿಶೇಷಗಳಿಗೆ ಈ ಮಾಸವೇ ಪ್ರಧಾನವಾಗಿದೆ ಹಾಗೂ ಶ್ರವಣ ಸೋಮವಾರಕ್ಕೆ ಅಗ್ರ ಸ್ಥಾನವನ್ನು ಕಲ್ಪಿಸಲಾಗಿದ್ದು, ಈ ಮಾಸದಲ್ಲಿ ಬರುವ ಎಲ್ಲ ಸೋಮವಾರಗಳು ಮುಕ್ತಿಯ ಸೋಪಾನಗಳು ಎಂಬುದು ಶಿವಭಕ್ತರ ನಂಬಿಕೆಯಾಗಿದೆ.

ಪವಿತ್ರ ಶ್ರಾವಣ ಮಾಸವು ಶಿವ ಭಕ್ತರಿಗೆ ಅತ್ಯಂತ ಮಹತ್ವದ ಸಮಯ. ಈ ಮಾಸದಲ್ಲಿ ಶಿವನನ್ನು ಆರಾಧಿಸುವುದರಿಂದ ಆತನ ಆಶೀರ್ವಾದ ಸುಲಭವಾಗಿ ದೊರೆಯುತ್ತದೆ ಎಂಬ ನಂಬಿಕೆಯಿದೆ. ಶಿವನಿಗೆ ಪ್ರಿಯವಾದ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸುವುದು ಅತ್ಯಂತ ಶುಭವೆಂದು ಪರಿಗಣಿಸಲಾಗಿದೆ.

ಮಹಾಮೃತ್ಯುಂಜಯ ಮಂತ್ರವು ಶಿವನಿಗೆ ಸಮರ್ಪಿತವಾದ ಅತ್ಯಂತ ಶಕ್ತಿಶಾಲಿ ಮಂತ್ರವಾಗಿದೆ. ಇದನ್ನು ನಿಯಮಬದ್ಧವಾಗಿ ಪಠಿಸುವುದರಿಂದ ಅಕಾಲಿಕ ಮರಣದ ಭಯ ದೂರವಾಗುತ್ತದೆ. ಜೊತೆಗೆ, ದೀರ್ಘಾಯುಷ್ಯ, ಉತ್ತಮ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ದೊರೆಯುತ್ತದೆ. ಈ ಮಂತ್ರವು ರೋಗರುಜಿನಗಳಿಂದ ರಕ್ಷಣೆ ನೀಡಿ, ವ್ಯಕ್ತಿಯ ಜೀವನದಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬುತ್ತದೆ.

”ಓಂ ತ್ರ್ಯಂಬಕಂ ಯಜಮಹೇ ಸುಗಂಧಿಂ ಪುಷ್ಟಿವರ್ಧನಂ|

ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯ ಮಾಮೃತತ್||”

ಮಂಗಳಗೌರಿ ವ್ರತ:

ಶ್ರಾವಣ ಮಾಸದಲ್ಲಿ ವಿಶೇಷವಾಗಿ ಆಚರಿಸಲ್ಪಡುವ ವ್ರತಗಳಲ್ಲಿ ಮಂಗಳಗೌರಿ ವ್ರತ ಪ್ರಮುಖವಾದದ್ದು, ಸಾಮಾನ್ಯವಾಗಿ ವಿವಾಹಿತ ಮಹಿಳೆಯರು ಅದರಲ್ಲೂ ನವ ವಿವಾಹಿತೆಯರು ಶ್ರಾವಣ ಮಾಸದ ನಾಲ್ಕು ಮಂಗಳವಾರದಂದು ಮಂಗಳಗೌರಿಯನ್ನು ಪೂಜಿಸಿ ವ್ರತ ಆಚರಿಸುತ್ತಾರೆ. ನಸುಕಿನಲ್ಲೆ ಪೂಜಾ ತಯಾರಿ ನಡೆಸುವ ಮಹಿಳೆಯರು ದಿನವಿಡೀ ಉಪವಾಸವಿದ್ದು, ಗೌರಿಯನ್ನು ಆರಾಧಿಸುತ್ತಾರೆ. ಜತೆಗೆ ಮಂಗಳ ಗೌರಿ ವೃತ್ತಾಂತವನ್ನು ಓದುತ್ತಾರೆ. ಪತಿಯ ದೀರ್ಘಾಯುಷ್ಯ ಹಾಗೂ ಆರೋಗ್ಯಕ್ಕಾಗಿ ಈ ವ್ರತ ಆಚರಿಸಲಾಗುತ್ತದೆ. ಕೆಲವೆಡೆ ಅವಿವಾಹಿತ ಯುವತಿಯರು ಸಹ ಸರ್ವಗುಣ ಸಂಪನ್ನ ಪತಿಯನ್ನು ಪಡೆಯಲೆಂದು ಮಂಗಳಗೌರಿ ವ್ರತ ಆಚರಿಸುವ ವಾಡಿಕೆಯಿದೆ.

  ಶ್ರಾವಣ ಮಾಸ ಅತ್ಯಂತ ಪ್ರಮುಖವಾದುದ್ದು ಯಾಕೆಂದರೆ, ದೇವರುಗಳ ಮತ್ತು ಅಸುರರ ನಡುವೆ ನಡೆದ ಸಮುದ್ರ ಮಂಥನ ಸಂದರ್ಭದಲ್ಲಿ ಹೊರಹೊಮ್ಮಿದ ಹಾಲಾಹಲವನ್ನು ಶಿವನು ಸೇವಿಸಿದ ಸಮಯವಿದು. ಮಂಥನದ ಸಮಯದಲ್ಲಿ ಸುಮಾರು ೧೪ ವಿವಿಧ ರತ್ನಗಳು ಹೊರಹೊಮ್ಮುತ್ತದೆ. ಅದರಲ್ಲಿ ಹಾಲಾಹಲ ಎನ್ನುವ ಕಾರ್ಕೋಟಕ ವಿಷವೂ ಕೂಡ ಒಂದು. ಹಾಲಾಹಲ ವಿಷವು ಹೊರಹೊಮ್ಮುತ್ತಿದ್ದಂತೆ ಬ್ರಹ್ಮಾಂಡದಲ್ಲಿ ಅಲ್ಲೋಲ ಕಲ್ಲೋಲವಾಗಲಾರಂಭಿಸಿತು. ಆಗ ಶಿವನು ಬ್ರಹ್ಮಾಂಡವನ್ನು ರಕ್ಷಿಸಲು ವಿಷವನ್ನು ಸೇವಿಸುತ್ತಾನೆ.

ಇದನ್ನು ಗಮನಿಸಿದ ಪಾರ್ವತಿಯು ಓಡಿ ಬಂದು ತನ್ನ ಪತಿಯ ಗಂಟಲನ್ನು ಬಿಗಿ ಹಿಡಿಯುತ್ತಾಳೆ. ಆಗ ವಿಷವು ಶಿವನ ಕಂಠದಲ್ಲೇ ಉಳಿದುಕೊಳ್ಳುತ್ತದೆ. ಅಂದಿನಿಂದ ಶಿವನನ್ನು ನೀಲಕಂಠ ಎನ್ನುವ ಹೆಸರಿನಿಂದ ಕರೆಯಲಾಗುತ್ತದೆ. ಮನೆಯಲ್ಲಾಗಿರಬಹುದು, ದೇವಾಲಯಗಳಲ್ಲಾಗಿರಬಹುದು ಪೂಜೆ, ವೃತ, ಭಜನೆಗಳಂತಹ ಧಾರ್ಮಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ಈ ತಿಂಗಳಲ್ಲಿ ಪ್ರತಿನಿತ್ಯವಾಗದಿದ್ದರೂ ಒಮ್ಮೆಯಾದರೂ ಶಿವನ ದೇವಾಲಯಕ್ಕೆ ಭೇಟಿ ನೀಡಬೇಕು. ಈ ತಿಂಗಳ ಪ್ರತಿದಿನವೂ ಧಾರ್ಮಿಕ ಮಹತ್ವವನ್ನು ಹೊಂದಿದೆ.

ಸೋಮವಾರ: ಸೋಮವಾರದಂದು ಪರಶಿವನನ್ನು ತಪ್ಪದೇ ಆರಾಧಿಸಬೇಕು. ಮಂಗಳವಾರ: ಮನೆಯಲ್ಲಿನ ಮಹಿಳೆಯರು ಕುಟುಂಬದ ಸದಸ್ಯರ ಉತ್ತಮ ಆರೋಗ್ಯಕ್ಕಾಗಿ ಗೌರಿ ಪೂಜೆಯನ್ನು ಮಾಡಬೇಕು. ಬುಧವಾರ: ಭಗವಾನ್ ವಿಷ್ಣು ಅಥವಾ ಕೃಷ್ಣನ ಇನ್ನೊಂದು ಅವತಾರವಾದ ವಿಠಲನನ್ನು ಈ ದಿನ ಆರಾಧಿಸಬೇಕು. ಗುರುವಾರ: ಶ್ರಾವಣ ಮಾಸದ ಗುರುವಾರದಂದು ಬುಧ ಮತ್ತು ಗುರುವನ್ನು ಪೂಜಿಸಬೇಕು. ಶುಕ್ರವಾರ: ಈ ದಿನ ಲಕ್ಷ್ಮಿ ಮತ್ತು ತುಳಸಿಯನ್ನು ಭಕ್ತಿಯಿಂದ ಪೂಜಿಸಿ. ಶನಿವಾರ: ಶ್ರಾವಣ ಮಾಸದ ಈ ದಿನವನ್ನು ಶ್ರಾವಣ ಶನಿವಾರ ಅಥವಾ ಸಂಪತ್ ಶನಿವಾರವೆಂದು ಕರೆಯಲಾಗುತ್ತದೆ. ಈ ದಿನ ಸಂಪತ್ತನ್ನು ಪಡೆದುಕೊಳ್ಳಲು ಶನೇಶ್ವರನನ್ನು ಆರಾಧಿಸಬೇಕು.

ಜ್ಞಾನಿಗಳು, ಯತಿಗಳು ಮತ್ತು ಋಷಿಮುನಿಗಳು ಈ ಸಮಯದಲ್ಲಿ ಮಾನವನ ಅಭಿವೃದ್ಧಿ, ಮೋಕ್ಷ ಮತ್ತು ಪ್ರಗತಿಗಾಗಿ ಸಂದೇಶಗಳನ್ನು ಮತ್ತು ಮಾರ್ಗದರ್ಶನವನ್ನು ನೀಡುತ್ತಾರೆ. ಶ್ರಾವಣ ಮಾಸವು ಮುಮುಕ್ಷು ಸಾಧಕರಿಗೆ ಆತ್ಮಜ್ಞಾನವನ್ನು ಪಡೆಯಲು ಮತ್ತು ಜೀವನವನ್ನು ಪರಿಪೂರ್ಣಗೊಳಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಶ್ರಾವಣ ಮಾಸದ ಪ್ರತಿಯೊಂದು ದಿನವೂ ಪವಿತ್ರ ಮತ್ತು ಶ್ರೇಷ್ಠವಾಗಿದೆ. ಈ ಮಾಸವು ಮನಸ್ಸಿನ ಶುದ್ಧಿ, ಮನಶಾಂತಿ ಮತ್ತು ಜೀವನದ ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ. ಸಂತೃಪ್ತಿಯ ಜೀವನವನ್ನು ನಡೆಸಲು ಭಗವಂತನ ಸಾನಿಧ್ಯ ಅತ್ಯಗತ್ಯ. ಮನೆಯನ್ನು ಶುಚಿಗೊಳಿಸುವುದು ಮತ್ತು ದೇವತೆಗಳ ಆಶೀರ್ವಾದಕ್ಕಾಗಿ ಪ್ರಾರ್ಥಿಸುವುದು ಈ ಮಾಸದಲ್ಲಿ ಪ್ರಮುಖ ಅಂಶಗಳಾಗಿವೆ.

Leave a Reply

Your email address will not be published.