ಏ. ೨ರಂದು ಹನುಮ ಜನ್ಮೋತ್ಸವ

-ಗುರುರಾಜ ಮ. ದೇಶಕುಲಕರ್ಣಿ

ಅಚಲ ಭಕ್ತಿ, ಶಕ್ತಿಗೆ ಹೆಸರು ಹನುಮಂತ

ರಾಮನ ಮೇಲಿಟ್ಟ ಭಕ್ತಿ, ಲಂಕೆಗೆ ಏಕಾಂಗಿಯ ಹೋಗಿ ಲಂಕಾದಹನ ಮಾಡಿದ ಪರಾಕ್ರಮಿ, ಗಟ್ಟಿ ಮುಟ್ಟಾದ ದೇಹವನ್ನು ಹೊಂದಿರುವ ಆಂಜನೇಯನ ಜನ್ಮವನ್ನು ಸ್ಮರಿಸಲು ಆಚರಿಸಲಾಗುವ ಹಬ್ಬವೇ ಹನುಮ ಜನ್ಮೋತ್ಸವ.

ಹನುಮಂತನ ಜನನ:

ಒಂದು ದಿನ ಪಾರ್ವತಿ, ಪರಮೇಶ್ವರರು ಕೈಲಾಸ ಪರ್ವತದಲ್ಲಿದ್ದಾಗ ಒಂದು ವಾನರಯುಗ್ಮವನ್ನು ಕಂಡರು. ಪಾರ್ವತಿ ಶಿವನೊಂದಿಗೆ ಕಲೆತು ಗರ್ಭವನ್ನು ಧರಿಸಿ ಅದನ್ನು ತಾಳಲಾರದೇ ಶಿವನಲ್ಲಿ ಮನವಿ ಮಾಡಿದಾಗ ಶಿವ ಆ ಗರ್ಭವನ್ನು ಪಾರ್ವತಿಯ ನಾಭಿಯಿಂದ ಹೊರಬೀಳುವಂತೆ ಮಾಡಿದ. ಭೂದೇವಿ ಅದನ್ನು ಧರಿಸಲಾರದೇ ಕಂಗೆಟ್ಟಳು.

ಅದೇ ಸಮಯದಲ್ಲಿ ಗೌತಮನ ಪುತ್ರಿ, ಕೇಸರಿಯ ಪತಿ ಆಂಜನೆ ಪುತ್ರಕಾಂಕ್ಷೆಯಿAದ ತೀವ್ರವಾದ ಜಪ, ತಪ ಕೈಗೊಂಡಿದ್ದಳು. ಆಗ ವಾಯುದೇವ ಆಕೆಯ ರೂಪಕ್ಕೆ ಮರುಳಾಗಿ, ಆ ಗರ್ಭವನ್ನು ತೆಗೆದುಕೊಂಡು ಆಕೆಯ ಅಂಗೈಯಲ್ಲಿಟ್ಟ. ಆಕೆ ಅದನ್ನು ನುಂಗಿದಳು. ನವಮಾಸಗಳು ತುಂಬಿದ ಬಳಿಕ ಒಬ್ಬ ವಟು ಜನಿಸಿದ. ಜನಿಸಿದ ವಟುವೇ ಆಂಜನೇಯ.

ಈ ವಟು ಸೂರ್ಯನನ್ನು ನೋಡಿ ಸೂರ್ಯನನ್ನೇ ನುಂಗಲು ಹೋಗಿದ್ದ. ಇಂದ್ರನ ವಜ್ರಾಯುಧದ ಪೆಟ್ಟಿನಿಂದ ಮೂರ್ಛೆ ಬಿದ್ದರೂ ದೇವತೆಗಳ ಮೂಲಕ ಅನೇಕ ವರಗಳನ್ನು ಪಡೆದ. ಇಂದ್ರನ ವಜ್ರಾಯುಧದಿಂದ ಪೆಟ್ಟು ಬಿದ್ದು ಒಂದು ಕೆನ್ನೆ ಗಾಯವಾಗಿ ಸೊಟ್ಟಗಾಯಿತು. ಈ ಕಾರಣದಿಂದ ಹನುಮಂತ ಎಂಬ ಹೆಸರು ಬಂದಿತು.

ಹನುಮಂತ, ಆಂಜನೇಯ, ವಾಯುಪುತ್ರ, ಹನುಮ, ಭಜರಂಗಿ, ಅಕ್ಷಾಂತಕ, ಕಪೀಶ ಎಂದು ಕರೆಯುವ ಹನುಮಂತನ ಜನ್ಮ ಆಗಿದ್ದು ಹಿಂದೂ ಚಂದ್ರಮಾನ ಮಾಸದ ಹುಣ್ಣಿಮೆಯ ದಿನ. ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಹನುಮ ಜಯಂತಿ ಬರುತ್ತದೆ.

ಹನುಮ ಜಯಂತಿಯAದು ಪ್ರಾರ್ಥನೆ, ಉಪವಾಸ, ಹನುಮಾನ್ ಚಾಲೀಸಾ (ಹನುಮನನ್ನು ಸ್ತುತಿಸುವ ಸ್ತೋತ್ರ) ಪಠಣ ಮತ್ತು ಹನುಮನಿಗೆ ಸಮರ್ಪಿತವಾದ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಭಕ್ತರು ಆಚರಿಸುತ್ತಾರೆ.

ರಾಮ-ರಾವಣರ ಮಧ್ಯೆ ಯುದ್ಧ ನಡೆಯುತ್ತಿದ್ದಾಗ ಮೇಘನಾಥನ ಜೊತೆಗಿನ ಕಾದಾಟದಲ್ಲಿ ಲಕ್ಷಣ ತೀವ್ರವಾಗಿ ಗಾಯಗೊಳ್ಳುತ್ತಾನೆ. ಮೂರ್ಛೆ ಹೋಗಿ ನೆಲದ ಮೇಲೆ ಉರುಳಿದ್ದ ಲಕ್ಷ್ಮಣನನ್ನು ಎತ್ತಿಕೊಂಡು ಬಂದ ಹನುಮಂತ ರಾಮನ ಮುಂದೆ ಮುಂದೆ ಇಡುತ್ತಾನೆ.

ಈ ಸಂದರ್ಭದಲ್ಲಿ ಅಲ್ಲಿದ್ದ ಸುಷೇನರು ಹಿಮಾಲಯದಲ್ಲಿ ಇರುವಂತಹ ಸಂಜೀವಿನಿ ಪರ್ವತದಲ್ಲಿ ಔಷಧಿ ಇದೆ. ಅದನ್ನು ತಂದರೆ ಲಕ್ಷ್ಮಣನನ್ನು ಗುಣಪಡಿಸಬಹುದು ಎಂದು ಹೇಳುತ್ತಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಹನುಮಂತ ಹಿಮಾಲಯಕ್ಕೆ ಬಂದು ಔಷಧಿ ಸಸಿಗಳನ್ನು ಹುಡುಕುತ್ತಾನೆ. ಆದರೆ ಔಷಧಿ ಸಸಿ ಸಿಗದ ಕಾರಣ ಕೊನೆಗೆ ಇಡೀ ಪರ್ವತವನ್ನೇ ಹೊತ್ತುಕೊಂಡು ಲಂಕೆಗೆ ಬರುತ್ತಾನೆ. ಸುಷೇನರು ಔಷಧಿ ಸಸ್ಯದಿಂದ ಲಕ್ಷಣನಿಗೆ ಔಷಧ ನೀಡಿದರು. ತಕ್ಷಣ ಲಕ್ಷಣನಿಗೆ ಪ್ರಜ್ಞೆ ಬರುತ್ತದೆ. ಜೀವ ಉಳಿಸುವ ಗಿಡಮೂಲಿಕೆಯನ್ನು ತರಲು ಒಬ್ಬಂಟಿಯಾಗಿ ಇಡೀ ಪರ್ವತವನ್ನು ಹೊತ್ತುಕೊಂಡು ತರುವ ಮೂಲಕ ತನ್ನ ಅಪಾರ ಶಕ್ತಿಯನ್ನು ಹನುಮಂತ ಪ್ರದರ್ಶಿಸಿದ್ದ.

ಆಂಜನೇಯನಿಗೆ ಅತ್ಯಂತ ಪ್ರಿಯವಾದ ಹೆಸರು ರಾಮನಾಮ. ಆದ್ದರಿಂದ ಆಂಜನೇಯ ಜಯಂತಿಯAದು ೧೦೮ ಬಾರಿ ಶ್ರೀರಾಮಜಯರಾಮಜಯಜಯರಾಮ ಎಂಬ ಮಂತ್ರವನ್ನು ಪಠಿಸಿದರೆ ಆಂಜನೇಯನ ಕೃಪೆ ನಮಗೆ ಪರಿಪೂರ್ಣವಾಗುತ್ತದೆ. ಆದಷ್ಟು ದಿನವಿಡೀ ಮನದಲ್ಲಿ ಶ್ರೀರಾಮಜಯ ನಾಮವನ್ನು ಜಪಿಸಿದರೆ ಆಂಜನೇಯನ ಕೃಪೆ ಪರಿಪೂರ್ಣವಾಗುತ್ತದೆ ಎಂದು ಹೇಳಲಾಗುತ್ತದೆ.

ಆಂಜನೇಯನ ಮೂರ್ತಿಯ ಮುಂದೆ ಮೂರು ದೀಪಗಳಲ್ಲಿ ತುಪ್ಪವನ್ನು ಸುರಿದು ಹತ್ತಿ ಬತ್ತಿಯನ್ನು ಇಟ್ಟು ದೀಪವನ್ನು ಸ್ವೀಕರಿಸಿ. ಈ ದೀಪವು ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಬೇಕು. ಆಗ ಆಂಜನೇಯನ ಮೂಲ ಮಂತ್ರ ತಿಳಿದರೆ ಆ ಮೂಲ ಮಂತ್ರವನ್ನು ಪಠಿಸಿ ಪೂಜೆ ಮಾಡಬಹುದು. ಆಂಜನೇಯರಿಗೆ ಶ್ರೀರಾಮಜಯವನ್ನು ಬರೆದು ಮಾಲೆಯನ್ನು ಹಚ್ಚಿ ಪ್ರಾರ್ಥಿಸಬಲ್ಲವರು. ಎಲ್ಲಾ ವಿಧಿವಿಧಾನಗಳನ್ನು ಪೂರೈಸಿದ ನಂತರ, ವಸ್ತ್ರದ ವಸ್ತುಗಳನ್ನು ಮನೆಯಲ್ಲಿ ಮತ್ತು ಮನೆಯ ಸಮೀಪವಿರುವ ಜನರಿಗೆ ಪ್ರಸಾದವಾಗಿ ನೀಡಬಹುದು. ಆ ದಿನದಂದು ಇತರರಿಗೆ ದಾನವನ್ನು ಮಾಡಲು ಸಾಧ್ಯವಾಗುವವರಿಗೆ ಇದು ತುಂಬಾ ವಿಶೇಷವಾಗಿದೆ.

ಆಂಜನೇಯನನ್ನು ಪೂಜಿಸುವುದರಿಂದ ನಿಮಗೆ ಅಸಂಖ್ಯಾತ ಲಾಭಗಳು ಸಿಗುತ್ತವೆ. ಆಂಜನೇಯನAತೆ ವರ್ತಿಸಿ ಸಕಲ ರೀತಿಯ ಲಾಭಗಳನ್ನು ಪಡೆಯಬಹುದೆಂಬ ಪೂರ್ಣ ವಿಶ್ವಾಸದಿಂದ ಆತನನ್ನು ಪೂಜಿಸಿ.

Leave a Reply

Your email address will not be published.