Home Leader focus

Category: Leader focus

Post
ಮಹಾಬಲಾದ್ರಿ ಬೆಟ್ಟವೇ ಚಾಮುಂಡಿ ಬೆಟ್ಟ

ಮಹಾಬಲಾದ್ರಿ ಬೆಟ್ಟವೇ ಚಾಮುಂಡಿ ಬೆಟ್ಟ

ಮೈಸೂರಿನ ಚಾಮುಂಡಿ ಬೆಟ್ಟವು ಹಿಂದೆ ‘ಮಹಾಬಲಾದ್ರಿ’ ಅಥವಾ ‘ಮಹಾಬಲ ಬೆಟ್ಟ’ ಎಂದು ಕರೆಯಲ್ಪಡುತ್ತಿತ್ತು. ಇದರ ಮೂಲ ದೇವರು ಚಾಮುಂಡೇಶ್ವರಿ ಅಲ್ಲ, ಬದಲಿಗೆ ಮಹಾಬಲೇಶ್ವರ (ಶಿವ) ಎಂದು ಕ್ರಿ.ಶ. ೯೫೦ರ ಶಾಸನಗಳು ದೃಢಪಡಿಸುತ್ತವೆ. ಯದುವಂಶದ ಅರಸರು ಚಾಮುಂಡೇಶ್ವರಿಯನ್ನು ಕುಲದೇವತೆಯಾಗಿ ಸ್ವೀಕರಿಸಿದ ನಂತರ ಆಕೆಯ ಮಹಿಮೆ ಹೆಚ್ಚಾಯಿತು. ಮಹಾಬಲೇಶ್ವರ ದೇವಸ್ಥಾನವು ಚಾಮುಂಡಿ ಬೆಟ್ಟದ ಅತ್ಯಂತ ಹಳೆಯ ದೇವಾಲಯವಾಗಿದೆ. ಮೈಸೂರಿನ ಚಾಮುಂಡಿ ಬೆಟ್ಟ ಇಂದು ವಿಶ್ವಪ್ರಸಿದ್ಧ ಪ್ರವಾಸಿ ತಾಣ ಹಾಗೂ ಧಾರ್ಮಿಕ ಕೇಂದ್ರ. ಆದರೆ ಸಾವಿರಾರು ವರ್ಷಗಳ ಹಿಂದೆ ಈ ಬೆಟ್ಟವನ್ನು...

Post
ತೈಲ, ಎಲ್‌ಪಿಜಿ ಆಯ್ತು.. ಭಾರತಕ್ಕೀಗ ರಸಗೊಬ್ಬರ ಪೂರೈಕೆ, ಆಹಾರ ಭದ್ರತೆ ಮೇಲೆ ಎಫೆಕ್ಟ್ ಭೀತಿ

ತೈಲ, ಎಲ್‌ಪಿಜಿ ಆಯ್ತು.. ಭಾರತಕ್ಕೀಗ ರಸಗೊಬ್ಬರ ಪೂರೈಕೆ, ಆಹಾರ ಭದ್ರತೆ ಮೇಲೆ ಎಫೆಕ್ಟ್ ಭೀತಿ

ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರವಾದ ಭಾರತವನ್ನು ಮುನ್ನಡೆಸುವುದು ಆಗ ಸವಾಲಿನ ಸಂಗತಿಯಾಗಿತ್ತು. ಹೆಚ್ಚುತ್ತಿದ್ದ ಜನಸಂಖ್ಯೆಗೆ ಆಗ ಆಹಾರ ಭದ್ರತೆ ಒದಗಿಸುವುದು ಪ್ರಮುಖ ಉದ್ದೇಶವಾಗಿತ್ತು. ಬರಗಾಲ, ಕ್ಷಾಮ, ನಿಧಾನಗತಿಯ ನೈಸರ್ಗಿಕ ಕೃಷಿಯಿಂದ ದೇಶದಲ್ಲಿ ಆಹಾರ ಅಭದ್ರತೆ ಉಂಟಾಗಿತ್ತು. ಕೂಳಿಗಾಗಿ ಭಾರತೀಯರು ಪರಿತಪಿಸುವಂತಾಗಿತ್ತು. ದೇಶಕ್ಕೆ ಮೊದಲು ಆಹಾರ ಭದ್ರತೆ ಒದಗಿಸಬೇಕೆಂದು ‘ಹಸಿರು ಕ್ರಾಂತಿ’ ಜಾರಿಗೆ ಬಂತು. ದೇಶದ ಕೃಷಿಯಲ್ಲಿ ಸುಧಾರಣೆ ತರಲಾಯಿತು. ವೈಜ್ಞಾನಿಕ ಕೃಷಿ ಪದ್ಧತಿಯಲ್ಲಿ ರಸಗೊಬ್ಬರ ಬಳಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ರಸಗೊಬ್ಬರಗಳು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು (ಸಾರಜನಕ,...

Post
ಭಾರತ ಸ್ವತಂತ್ರ ಇಂಧನ ನೀತಿ ಬಗ್ಗೆ ಯೋಚಿಸಲು ಇದು ಸೂಕ್ತ ಸಮಯವೇ?

ಭಾರತ ಸ್ವತಂತ್ರ ಇಂಧನ ನೀತಿ ಬಗ್ಗೆ ಯೋಚಿಸಲು ಇದು ಸೂಕ್ತ ಸಮಯವೇ?

ಭಾರತವು ಪಳೆಯುಳಿಕೆ ಅನಿಲವಿಲ್ಲದ ಅಡುಗೆ ಇಂಧನ ವ್ಯವಸ್ಥೆಯನ್ನು ಮರುಕಲ್ಪಿಸಿಕೊಳ್ಳಬೇಕು ಮತ್ತು ಸಾಂಪ್ರದಾಯಿಕ ವಿಧಾನಗಳ ಮೇಲೆ ಹೆಚ್ಚು ಅವಲಂಬಿತವಾಗಬೇಕು ಎಂದು ಲೇಖಕ ಇಂದ್ರ ಶೇಖರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಅಡುಗೆ ಅನಿಲ ಸಿಲಿಂಡರ್‌ಗಾಗಿ ಸಮಸ್ಯೆ ಎದುರಿಸಬೇಕಾದ ಅಗತ್ಯವಿಲ್ಲ ಎಂದು ಸರ್ಕಾರ ಭರವಸೆ ನೀಡಿದ್ದರೂ, ಜನರು ಮಾತ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ದೇಶದ ಎಲ್‌ಎನ್‌ಜಿ, ಎಲ್‌ಪಿಜಿ ಬಳಕೆದಾರರ ಮೇಲೆ ಗಂಭೀರ ಪರಿಣಾಮ ಬೀರಿದೆ. ಗ್ಯಾಸ್ ಬೆಲೆಗಳು ಗಗನಕ್ಕೇರುತ್ತಿವೆ, ದೇಶದ ವಿವಿಧೆಡೆ ಜನರು ಸಿಲಿಂಡರ್‌ಗಾಗಿ ಸರತಿ ಸಾಲುಗಳಲ್ಲಿ ನಿಲ್ಲುವಂತಾಗಿದೆ. ಕಳೆದ ಕೆಲವು...

Post
ಸಂಪಾದಕೀಯ

ಸಂಪಾದಕೀಯ

ಸಂಘರ್ಷದ ಎಫೆಕ್ಟ್; ರಸಗೊಬ್ಬರಗಳ ಬೆಲೆ ಗಗನಕ್ಕೆ ಏರುವ ಸಾಧ್ಯತೆ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಯೂರಿಯಾ ರಫ್ತು ಬೆಲೆಗಳು ಕಳೆದ ಶುಕ್ರವಾರ ಮೆಟ್ರಿಕ್ ಟನ್‌ಗೆ ಸುಮಾರು 40% ರಷ್ಟು ಏರಿಕೆಯಾಗಿವೆ. ಪ್ರಸ್ತುತ ಬೆಲೆಯು 700 ಡಾಲರ್‌ಗಿಂತ (ಅಂದಾಜು 58,000 ದಿಂದ 65,000 ರೂಪಾಯಿ) ಹೆಚ್ಚಾಗಿದೆ. ಯುದ್ಧ ಆರಂಭವಾಗುವ ಮೊದಲು ಇದು 500 ಡಾಲರ್‌ಗಿಂತ ಕಡಿಮೆ ಇತ್ತು. ಇರಾನ್ ವಲಯದಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ಒಟ್ಟಾರೆ ರಸಗೊಬ್ಬರಗಳ ಬೆಲೆ 32% ರಷ್ಟು ಹೆಚ್ಚಾಗಿದೆ. ಯುದ್ಧ ಮುಂದುವರಿದರೆ ಯೂರಿಯಾದಂತಹ ಸಾರಜನಕ ಆಧಾರಿತ ರಸಗೊಬ್ಬರಗಳ ಬೆಲೆಗಳು...