ವಾಸ್ತು ಪ್ರಕಾರ ಬಿದಿರು ಗಿಡವನ್ನು ಮನೆಯಲ್ಲಿ ಇಡುವುದು ಶುಭಕರ. ಇದು ನಕಾರಾತ್ಮಕ ಶಕ್ತಿಯನ್ನು ದೂರ ಮಾಡಿ, ಆರೋಗ್ಯ, ಸಂಪತ್ತು ಮತ್ತು ಸಂತೋಷವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ ಪೂರ್ವ ದಿಕ್ಕಿನಲ್ಲಿ ಇಟ್ಟರೆ ಉತ್ತಮ ಫಲ ಸಿಗುತ್ತದೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
2 ನಿಮಿಷದಲ್ಲಿ ಸಿಲಿಂಡರ್ ತುಂಬುವ ಎಲ್ಪಿಜಿ ಎಟಿಎಂ!
ಅನಿಲ ಕೊರತೆಯಿಂದಾಗಿ ಜನ ಸಿಲಿಂಡರ್ ಹಿಡಿದು ಗ್ಯಾಸ್ ಏಜೆನ್ಸಿಗಳೆದುರು ಸಾಲಲ್ಲಿ ನಿಲ್ಲುತ್ತಿರುವುದು ಸರ್ವೇಸಾಮಾನ್ಯವಾಗಿರುವ ನಡುವೆ, ಹರ್ಯಾಣದ ಗುರುಗ್ರಾಮದಲ್ಲಿ ೨-೩ ನಿಮಿಷದಲ್ಲಿ ಎಲ್‌ಪಿಜಿ ಅನಿಲ ಕೊಡುವ ಎಟಿಎಂ ಅನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.(ಬಿಪಿಸಿಎಲ್) ಸ್ಥಾಪಿಸಿದೆ. ಅನಿಲ ಕೊರತೆಯಿಂದಾಗಿ ಜನ ಸಿಲಿಂಡರ್ ಹಿಡಿದು ಗ್ಯಾಸ್ ಏಜೆನ್ಸಿಗಳೆದುರು ಸಾಲಲ್ಲಿ ನಿಲ್ಲುತ್ತಿರುವುದು ಸರ್ವೇಸಾಮಾನ್ಯವಾಗಿರುವ ನಡುವೆ, ಹರ್ಯಾಣದ ಗುರುಗ್ರಾಮದಲ್ಲಿ ೨-೩ ನಿಮಿಷದಲ್ಲಿ ಎಲ್‌ಪಿಜಿ ಅನಿಲ ಕೊಡುವ ಎಟಿಎಂ ಅನ್ನು ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.(ಬಿಪಿಸಿಎಲ್) ಸ್ಥಾಪಿಸಿದೆ. ಇದು ಪ್ರಾಯೋಗಿಕವಾಗಿ ಜಾರಿಯಲ್ಲಿದ್ದು, ಯಶಸ್ವಿಯಾದರೆ ದೇಶದ ಇತರ ಭಾಗಗಳಿಗೆ ವಿಸ್ತರಿಸುವ ಉದ್ದೇಶವಿದೆ. ಸೋಹ್ನಾ ಪ್ರದೇಶದಲ್ಲಿರುವ ಇದು ಇಡೀ ದಿನ ತೆರೆದಿರಲಿದೆ. ಇಲ್ಲಿ ಸಾಂಪ್ರದಾಯಿಕ ಕಬ್ಬಿಣದ ಸಿಲಿಂಡರ್‌ಗಳ ಬದಲು ಅದರ ಅರ್ಧದಷ್ಟು ತೂಕದ (೧೫ ಕಿ.ಮೀ.), ಫೈಬರ್‌ನಿಂದ ಮಾಡಲ್ಪಟ್ಟ ಕಾಂಪೊಸಿಟ್ ಸಿಲಿಂಡರ್‌ಗಳಲ್ಲಿ ಅನಿಲ ಕೊಡಲಾಗುವುದು. ಸದ್ಯ ಈ ಎಟಿಎಂನಲ್ಲಿ ೧೦ ಕೆ.ಜಿ. ಅನಿಲ ತುಂಬಿದ ೧೦ ಸಿಲಿಂಡರ್‌ಗಳು ಇವೆ. ಇವುಗಳನ್ನು ಜನರು ನೇರವಾಗಿ ಹೋಗಿ ಪಡೆಯಬಹುದು. ಎಟಿಎಂನಲ್ಲಿ ೧೦ ಸಿಲಿಂಡರ್ ಭರ್ತಿ...
ಅಮೆರಿಕದ ೨೫೦ನೇ ವರ್ಷಾಚರಣೆಗೆ ಟ್ರಂಪ್ ಚಿತ್ರವುಳ್ಳ ನಾಣ್ಯ!
ಅಮೆರಿಕ ದೇಶ ರಚನೆಯಾಗಿ ಜು.೪ಕ್ಕೆ ೨೫೦ನೇ ವರ್ಷಕ್ಕೆ ಕಾಲಿಡುತ್ತಿರುವ ಹಿನ್ನೆಲೆ ಅಲ್ಲಿನ ಸರ್ಕಾರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಭಾವಚಿತ್ರವುಳ್ಳ ಚಿನ್ನದ ನಾಣ್ಯವನ್ನು ಬಿಡುಗಡೆ ಮಾಡುವುದಕ್ಕೆ ಮುಂದಾಗಿದೆ.ಅಮೆರಿಕದ ಕಾನೂನು ಪ್ರಕಾರ ಅಧ್ಯಕ್ಷರು ಬದುಕಿರುವಾಗಲೇ ನಾಣ್ಯದಲ್ಲಿ ಅವರ ಫೋಟೋ ಬಳಸುವಂತಿಲ್ಲ. ಆದರೆ ಇದು ಸ್ಮರಣಾರ್ಥ ನಾಣ್ಯವಾಗಿರುವ ಕಾರಣ, ಚಲಾವಣೆಯಲ್ಲಿರುವ ಕರೆನ್ಸಿಗಿಂತ ಭಿನ್ನ. ಹೀಗಾಗಿ ಟ್ರಂಪ್ ಫೋಟೋ ಬಳಕೆಯಾಗಿದೆ. ೨೪ ಕ್ಯಾರೆಟ್ ಚಿನ್ನದ ನಾಣ್ಯದಲ್ಲಿ ಟ್ರಂಪ್ ಮುಷ್ಟಿ ಹಿಡಿದು ರೆಸಲ್ಯೂಟ್ ಮೇಜಿನ ಮೇಲೆ ಒರಗಿರುವುದನ್ನು ನೋಡಬಹುದು. ಅಮೆರಿಕದಲ್ಲಿ ಹಾಲಿ ಅಧ್ಯಕ್ಷರ ಫೋಟೋ ನಾಣ್ಯದ ಮೇಲೆ ಕಾಣಿಸಿಕೊಂಡಿರುವುದು ಇದು ಎರಡನೇ ಬಾರಿ. ಇದಕ್ಕೂ ಮೊದಲು ಅಮೆರಿಕದ ೩೦ನೇ ಅಧ್ಯಕ್ಷ ಕ್ಯಾಲ್ವಿನ್ ಕೂಲಿಡ್ಜ್ ಅವರ ಚಿತ್ರವು ಅಮೆರಿಕಕ್ಕೆ ಸ್ವಾತಂತ್ರ‍್ಯ ದೊರೆತ ೧೫೦ನೇ ವರ್ಷಾಚರಣೆಗಾಗಿ ೧೯೨೬ರಲ್ಲಿ ಬಿಡುಗಡೆಗೊಳಿಸಲಾಗಿತ್ತು.
ಭಾವನಾ ರಾಮಣ್ಣ ಮಗಳ ಹೆಸರು ರುಕ್ಮಿಣಿ-ತನ್ನ ಅಜ್ಜಿಯ ಹೆಸರನ್ನೇ ಪುತ್ರಿಗಿಟ್ಟ ನಟಿ
ಐವಿಎಫ್ ಮೂಲಕ ಕಳೆದ ಆಗಸ್ಟ್ನಲ್ಲಿ ಹೆಣ್ಣುಮಗುವಿಗೆ ಜನ್ಮನೀಡಿದ್ದ ನಟಿ ಭಾವನಾ ರಾಮಣ್ಣ ಇದೀಗ ಮಗಳಿಗೆ ನಾಮಕರಣ ಶಾಸ್ತ್ರ ಮಾಡಿದ್ದಾರೆ. ಈ ವೇಳೆ ಮಗಳಿಗೆ ತನ್ನ ಅಜ್ಜಿ ರುಕ್ಮಿಣಿ ಹೆಸರನ್ನೇ ಇಟ್ಟಿದ್ದಾರೆ. ಕುಟುಂಬಸ್ಥರು, ಸ್ನೇಹಿತರು ಹಾಗೂ ಆಪ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿವಾಹವಾಗದೇ ಸಿಂಗಲ್ ಮದರ್ ಆಗಿ ಮಗಳನ್ನು ಬೆಳೆಸುವುದಾಗಿ ತಿಳಿಸಿರುವ ಭಾವನಾ ಸದ್ಯ ಮಗಳ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
2011ರ ಗಣತಿ ಆಧರಿಸಿ ಸಂಸತ್ತಲ್ಲಿ ಶೇ.೩೩ ಮಹಿಳಾ ಮೀಸಲು?
ಸಂಸತ್ತು ಮತ್ತು ವಿಧಾನಮಂಡಲದಲ್ಲಿ ಮಹಿಳೆಯರಿಗೆ ಶೇ.೩೩ರಷ್ಟು ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಮಹತ್ವದ ಮಹಿಳಾ ಮೀಸಲಾತಿ ವಿಧೇಯಕವನ್ನು ಆದಷ್ಟು ಶೀಘ್ರ ಜಾರಿಗೆ ತರಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಿದೆ. ಹೊಸ ಜನಗಣತಿಗಾಗಿ ಕಾಯುವ ಬದಲು ೨೦೧೧ರ ಜನಗಣತಿ ಆಧಾರದ ಮೇಲೆಯೇ ಈ ಮೀಸಲಾತಿ ಜಾರಿಗೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಮುಂಬರುವ ಕ್ಷೇತ್ರ ಮರುವಿಂಗಡಣೆಯ ವೇಳೆ ಒಟ್ಟು ಲೋಕಸಭಾ ಸ್ಥಾನಗಳ ಸಂಖ್ಯೆ ೫೪೩ರಿಂದ ೮೧೬ಕ್ಕೆ ಏರಿಕೆಯಾಗಲಿದೆ. ಇದರಲ್ಲಿ ೨೭೩ ಸ್ಥಾನಗಳನ್ನು ಮಹಿಳೆಯರಿಗಾಗಿಯೇ ಮೀಸಲಿಡಲು ನಿರ್ಧರಿಸಲಾಗಿದೆ. ಮೂಲ ಕಾಯ್ದೆ ಪ್ರಕಾರ ಮೀಸಲಾತಿಯು ಹೊಸ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ನಂತರವೇ ಅನುಷ್ಠಾನಕ್ಕೆ ಬರಬೇಕು. ಆದರೆ, ಸರ್ಕಾರವು ಇದಕ್ಕಾಗಿ ಇನ್ನೂ ಹಲವು ವರ್ಷ ಕಾಯಬೇಕು. ಅದರ ಬದಲು ಆದಷ್ಟು ಶೀಘ್ರ ಮೀಸಲಾತಿ ಕಾನೂನು ಜಾರಿಗೆ ಸರ್ಕಾರ ಚಿಂತನೆ ನಡೆಸುತ್ತಿದ್ದು, ಇದರ ಭಾಗವಾಗಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ವಿಸ್ತರಿಸುವ ತಿದ್ದುಪಡಿ ವಿಧೇಯಕವೊಂದನ್ನು ಈಗಾಗಲೇ ನಡೆಯುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನದಲ್ಲೇ ಮಂಡಿಸಲು ಸಿದ್ಧತೆ ಆರಂಭಿಸಿದೆ ಎಂದು...
ವಿಶ್ವದ ಯಾವುದೇ ಕ್ರಿಕೆಟಿಗರಿಗೂ ಸಾಧ್ಯವಾಗದ ದಾಖಲೆ ಬರೆದ ಅಮೆಲಿಯಾಕೆರ್!!
ನ್ಯೂಜಿಲೆಂಡ್ ಮಹಿಳಾ ತಂಡದ ನಾಯಕಿ ಅಮೆಲಿಯಾ ಕೆರ್ ಅವರು ಟಿ೨೦ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗೆ ಯಾವುದೇ ಕ್ರಿಕೆಟರ್ಗೂ ಸಾಧ್ಯವಾಗದ ದಾಖಲೆಯನ್ನು ನಿರ್ಮಿಸಿದ್ದಾರೆ. ಅಮೆಲಿಯಾ ಈಗ ಟಿ೨೦ಐ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಒಟ್ಟಾರೆ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾರ್ಚ್ ೨೨, ೨೦೨೬ ರಂದು ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಖಿ೨೦I ನಲ್ಲಿ ಅಮೆಲಿಯಾ ಕೆರ್ ಈ ಗಮನಾರ್ಹ ಸಾಧನೆಯನ್ನು ಮಾಡಿದರು. ವೆಲ್ಲಿಂಗ್ಟನ್‌ನ ಸ್ಕೈ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಅವರು ೨೯ ಎಸೆತಗಳಲ್ಲಿ ೩೧ ರನ್ ಗಳಿಸಿದರು. ಇದು ಸಾಮಾನ್ಯ ಇನ್ನಿಂಗ್ಸ್ ಆಗಿದ್ದರೂ ಅವರ ಹೆಸರನ್ನೂ ದಾಖಲೆಯ ಪುಟಕ್ಕೆ ಸೇರಿಸಿತು. ಅಮೆಲಿಯಾ ಈಗ ಟಿ೨೦ಐ ಇತಿಹಾಸದಲ್ಲಿ ಸತತ ೧೦ ಇನ್ನಿಂಗ್ಸ್ಗಳಲ್ಲಿ ೩೦ ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ, ಸತತ ಒಂಬತ್ತು ಪಂದ್ಯಗಳಲ್ಲಿ ೩೦+ ಸ್ಕೋರ್‌ಗಳನ್ನು ಕಲೆಹಾಕಿದ ದಾಖಲೆಯನ್ನು ಶ್ರೀಲಂಕಾದ ಚಾಮರಿ ಅಟಪಟ್ಟು ಮತ್ತು ರೊಮೇನಿಯಾದ ರೆಬೆಕ್ಕಾ...
ಮಕ್ಕಳಿಗೆ ಡಿಜಿಟಲ್ ಬಳಕೆ ಹೇಗೆ?
ವಿದ್ಯಾರ್ಥಿಗಳಿಗೆ ಫೋನ್ ಬಳಕೆ ನಿರ್ಬಂಧದ ಬಗ್ಗೆ ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ನಿಮ್ಹಾನ್ಸ್ನಿಂದ ಡಿಜಿಟಲ್ ಬಳಕೆಯ ಪರಿಣಾಮ ಅನುಷ್ಠಾನ ಮಾರ್ಗಸೂಚಿ ರಿಲೀಸ್ ಆಗಿದೆ. ೧೬ ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ ಹೇರುವ ವಿಷಯ ಚರ್ಚೆ ಇರುವ ಬೆನ್ನಲ್ಲೇ ಮಕ್ಕಳು ಡಿಜಿಟಲ್ ಬಳಕೆ ಬಗ್ಗೆ ನಿಮಾನ್ಸ್ ತಜ್ಞರ ತಂಡ ಅಧ್ಯಯನ ನಡೆಸಿದೆ. ಮಕ್ಕಳು ಡಿಜಿಟಲ್ ಬಳಕೆ ಹೇಗಿರಬೇಕು? ಡಿಜಿಟಲ್ ಬಳಕೆಯಲ್ಲಿ ಪೋಷಕರು, ಶಿಕ್ಷಕರು, ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಆರೋಗ್ಯ ಇಲಾಖೆ ಪಾತ್ರ ಹೇಗಿರಬೇಕು ಅಂತಾ ಅಧ್ಯಯನ ನಡೆಸಿ ವರದಿ ಸಿದ್ಧಮಾಡಿದೆ. ೨೭ ಪುಟಗಳ ಒಳಗೊಂಡ ಅಧ್ಯಯನದ ವರದಿಯನ್ನ ನಿಮ್ಹಾನ್ಸ್ ಆರೋಗ್ಯ ಇಲಾಖೆಗೆ ಶಿಫಾರಸು ಮಾಡಿದೆ. ವಿದ್ಯಾರ್ಥಿಗಳಲ್ಲಿ ಜಾಗೃತಿ ಹಾಗೂ ಇನ್ಮುಂದೆ ಶಾಲೆಗಳಲ್ಲಿ ಕಡ್ಡಾಯ ಡಿಜಿಟಲ್ ವೆಲ್‌ನೆಸ್ ಕಮಿಟಿ ಇರಬೇಕು. ಪ್ರತಿ ಶಾಲೆಯಲ್ಲಿಯೂ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿಗತಿ, ಫೋನ್ ಅಡಿಕ್ಷನ್ ಬಗ್ಗೆ ಗಮನಹರಿಸಲು ಒಬ್ಬ ಶಿಕ್ಷಕರಿಗೆ ಟ್ರೈನಿಂಗ್ ಕೊಡ್ಬೇಕು. ವಿದ್ಯಾರ್ಥಿಗಳ ಫೋನ್‌ಗಳಲ್ಲಿ ಆಡಿಯೋ ಮಾತ್ರ ಇರಬೇಕು. ಸಂಜೆ ೭ ಗಂಟೆಯ...
ಸ್ವೀಟಿ ಅನುಷ್ಕಾಗೆ ಕಂಕಣ ಭಾಗ್ಯ
ಕರಾವಳಿ ಮೂಲದ ಖ್ಯಾತ ನಟಿ ಅನುಷ್ಕಾ ಶೆಟ್ಟಿ(ಅನುಷ್ಕಾ ಶೆಟ್ಟಿ) ಮದುವೆ ಕುರಿತಾಗಿ ಹೊಸ ಸಮಾಚಾರವೊಂದು ಕೇಳಿ ಬರುತ್ತಿದೆ. ೪೪ ವಯಸ್ಸಿನ ಈ ಚೆಲುವೆ ಈವರೆಗೂ ಮದುವೆ ಆಗದೆ ಇರುವುದು ಅವರ ಕುಟುಂಬಕ್ಕೆ ಬೇಸರ ತಂದಿತ್ತು. ಆದರೆ ಕೊನೆಗೂ ಮದುವೆ ಆಗಲು ಅನುಷ್ಕಾ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಈವರೆಗೂ ಯಾರೂ ಮದುವೆಯ ಬಗ್ಗೆ ಯಾವತ್ತೂ ಮಾತಾಡಿಲ್ಲ. ಮದುವೆ ವಿಚಾರ ಬಂದಾಗೆಲ್ಲ ತೇಲಿಸಿ ಮಾತಾಡಿದ್ದೇ ಹೆಚ್ಚು. ಇಬ್ಬರೂ ಮದುವೆ ಆಗದೇ ಇರುವ ಗಾಸಿಪ್‌ಗಳು ಹರಿದಾಡಿದ್ದವು. ಇದೀಗ ಗಾಸಿಪ್‌ಗಳಿಗೆ ಫುಲ್‌ಸ್ಟಾಪ್ ಇಡುವ ಕಾಲ ಬಂದಿದೆ. ಕರಾವಳಿ ಮೂಲದ ಬೆಡಗಿ ಅನುಷ್ಕಾ ಶೆಟ್ಟಿಗೆ ಇದೀಗ ೪೪ರ ಹರೆಯ. ಆದರೂ ಅವರು ಮದುವೆ ಆಗಿಲ್ಲ. ಈಗ ಮದುವೆಗೆ ಒಪ್ಪಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದು ಸಹಜವಾಗಿಯೇ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಆಪ್ತ ಮೂಲಗಳ ಪ್ರಕಾರ ಬೆಂಗಳೂರು ಮೂಲದ ಉದ್ಯಮಿಯೊಬ್ಬರ ಜೊತೆ ಅನುಷ್ಕಾ ಮದುವೆಯ ಬಗ್ಗೆ...
ಉತ್ತರ ಕೊರಿಯಾ ಅಣ್ವಸ್ತ್ರ ಸಾಮರ್ಥ್ಯದ ರಾಕೆಟ್ ಲಾಂಚರ್ ಪರೀಕ್ಷೆ
ಉತ್ತರ ಕೊರಿಯಾ ಅಣ್ವಸ್ತ್ರ ಸಾಮರ್ಥ್ಯದ ರಾಕೆಟ್ ಲಾಂಚರ್ ಪರೀಕ್ಷೆ ನಡೆಸಿದೆ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಅವರ ಮಗಳು ಕಿಮ್ ಜು ಏ ಸಮ್ಮುಖದಲ್ಲಿ ಈ ಪರೀಕ್ಷೆ ನಡೆದಿದೆ. ಪರೀಕ್ಷೆ ಬಳಿಕ ಇದು, ೪೨೦ ಕಿಮೀ ವ್ಯಾಪ್ತಿಯೊಳಗಿನ ಶತ್ರುಗಳನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಕಿಮ್ ಜಾಂಗ್ ಉನ್ ತಿಳಿಸಿದ್ದಾರೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ ಈ ವಾರ ಜಂಟಿ ಸಮರಾಭ್ಯಾಸ ಪ್ರಾರಂಭಿಸಿದ ನಂತರ, ಉತ್ತರ ಕೊರಿಯಾ ೧೨ ೬೦೦ಎಂ.ಎಂ. ಕ್ಯಾಲಿಬರ್ ಮಲ್ಟಿಪಲ್ ರಾಕೆಟ್ ಲಾಂಚರ್‌ಗಳ ಪರೀಕ್ಷೆ ನಡೆಸಿದೆ. ಈ ಪರೀಕ್ಷೆಯು ಪರಮಾಣು ಶಸ್ತ್ರಾಸ್ತ್ರಗಳ ವಿನಾಶಕಾರಿ ಶಕ್ತಿಯ ಬಗ್ಗೆ ಶತ್ರುಗಳಿಗೆ ಅರಿವು ಮೂಡಿಸುತ್ತದೆ ಎಂದು ಉನ್ ಎಚ್ಚರಿಕೆ ನೀಡಿದ್ದಾರೆ. ಉಡಾಯಿಸಲಾದ ರಾಕೆಟ್‌ಗಳು ಸುಮಾರು ೩೬೪.೪ ಕಿಮೀ ದೂರದಲ್ಲಿರುವ ಕೊರಿಯಾದ ಪೂರ್ವ ಸಮುದ್ರದಲ್ಲಿರುವ ದ್ವೀಪದಲ್ಲಿದ್ದ ಗುರಿಗೆ ನಿಖರವಾಗಿ ಹೊಡೆದಿವೆ ಎಂದು ವರದಿಯಾಗಿದೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ (south korea) ಸಮರಾಭ್ಯಾಸದ ಬಗ್ಗೆ ಮಾತನಾಡಿದ್ದ ಕಿಮ್ ಜಾಂಗ್ ಉನ್ ಅವರ...
ಭಾರತದ ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಇಂಡೋನೇಶ್ಯಾದಿಂದ 200-350 ಬಿಲಿಯನ್ ಡಾಲರ್ ಡೀಲ್
ಭಾರತದ ಬತ್ತಳಿಕೆಯಲ್ಲಿರುವ ಯುದ್ಧಾಸ್ತ್ರಗಳಲ್ಲಿ ಪ್ರಮುಖವಾಗಿರುವ ಬ್ರಹ್ಮೋಸ್ ಮಿಸೈಲ್ ಸಿಸ್ಟಂ ( BrahMos missile system ) ಅನ್ನು ಖರೀದಿಸಲು ಇಂಡೋನೇಷ್ಯಾ ಒಪ್ಪಂದ ಮಾಡಿಕೊಂಡಿದೆ. ಈ ವಿಚಾರವನ್ನು ಇಂಡೋನೇಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರರಾದ ರಿಕೋ ರಿಕಾರ್ಡೊ ಸಿರಾಯ್ಟ್ ಅವರೇ ಖುದ್ದಾಗಿ ಮಾಹಿತಿ ನೀಡಿದ್ದಾರೆ. ೨೦೨೩ರಲ್ಲೇ ಭಾರತ ಮತ್ತು ಇಂಡೋನೇಷ್ಯಾ ನಡುವೆ ಈ ಒಪ್ಪಂದ ಸಂಬಂಧ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಹೇಳಲಾಗಿತ್ತು. ಈ ಡೀಲ್ ಸುಮಾರು ೨೦೦ ಮಿಲಿಯನ್ ಡಾಲರ್‌ನಿಂದ ೩೫೦ ಮಿಲಿಯನ್ ಡಾಲರ್ ಇರಬಹುದು. ಅಂದರೆ ಸುಮಾರು ೨,೦೦೦ ಕೋಟಿ ರೂ ಮೊತ್ತದ ಡೀಲ್ ಇದಾಗಿರಬಹುದು. ಆದರೆ, ಒಪ್ಪಂದದ ಸ್ವರೂಪ ಏನು ಎಂಬುದು ಗೊತ್ತಾಗಿಲ್ಲ. ಇಂಡೋನೇಷ್ಯಾದ ವಕ್ತಾರರು ನೀಡಿರುವ ಮಾಹಿತಿ ಪ್ರಕಾರ, ತಮ್ಮ ಮಿಲಿಟರಿ ಹಾರ್ಡ್ವೇರ್‌ನ ಆಧುನೀಕರಣ ಹಾಗೂ ರಕ್ಷಣಾ ಸಾಮರ್ಥ್ಯ ಬಲಪಡಿಸಲು ಈ ಒಪ್ಪಂದವನ್ನು ಬಳಸಲಾಗಿದೆ. ಆದರೆ, ಅವರು ಈ ಡೀಲ್‌ನ ಒಟ್ಟು ಮೊತ್ತವೆಷ್ಟು ಎಂದು ನಿಖರ ಡಾಟಾ ಕೊಡಲು ನಿರಾಕರಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂದೂರ್‌ನಲ್ಲಿ...









