ಸ್ವೀಟಿ ಅನುಷ್ಕಾಗೆ ಕಂಕಣ ಭಾಗ್ಯ

ಸ್ವೀಟಿ ಅನುಷ್ಕಾಗೆ ಕಂಕಣ ಭಾಗ್ಯ

ಕರಾವಳಿ ಮೂಲದ ಖ್ಯಾತ ನಟಿ ಅನುಷ್ಕಾ ಶೆಟ್ಟಿ(ಅನುಷ್ಕಾ ಶೆಟ್ಟಿ) ಮದುವೆ ಕುರಿತಾಗಿ ಹೊಸ ಸಮಾಚಾರವೊಂದು ಕೇಳಿ ಬರುತ್ತಿದೆ. ೪೪ ವಯಸ್ಸಿನ ಈ ಚೆಲುವೆ ಈವರೆಗೂ ಮದುವೆ ಆಗದೆ ಇರುವುದು ಅವರ ಕುಟುಂಬಕ್ಕೆ ಬೇಸರ ತಂದಿತ್ತು. ಆದರೆ ಕೊನೆಗೂ ಮದುವೆ ಆಗಲು ಅನುಷ್ಕಾ ಒಪ್ಪಿಕೊಂಡಿದ್ದಾರೆ ಎಂಬ ಸುದ್ದಿ ಬಂದಿದೆ. ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಮದುವೆಯಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಈವರೆಗೂ ಯಾರೂ ಮದುವೆಯ ಬಗ್ಗೆ ಯಾವತ್ತೂ ಮಾತಾಡಿಲ್ಲ. ಮದುವೆ ವಿಚಾರ ಬಂದಾಗೆಲ್ಲ ತೇಲಿಸಿ ಮಾತಾಡಿದ್ದೇ ಹೆಚ್ಚು. ಇಬ್ಬರೂ ಮದುವೆ ಆಗದೇ ಇರುವ ಗಾಸಿಪ್‌ಗಳು ಹರಿದಾಡಿದ್ದವು. ಇದೀಗ ಗಾಸಿಪ್‌ಗಳಿಗೆ ಫುಲ್‌ಸ್ಟಾಪ್ ಇಡುವ ಕಾಲ ಬಂದಿದೆ. ಕರಾವಳಿ ಮೂಲದ ಬೆಡಗಿ ಅನುಷ್ಕಾ ಶೆಟ್ಟಿಗೆ ಇದೀಗ ೪೪ರ ಹರೆಯ. ಆದರೂ ಅವರು ಮದುವೆ ಆಗಿಲ್ಲ. ಈಗ ಮದುವೆಗೆ ಒಪ್ಪಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದು ಸಹಜವಾಗಿಯೇ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಆಪ್ತ ಮೂಲಗಳ ಪ್ರಕಾರ ಬೆಂಗಳೂರು ಮೂಲದ ಉದ್ಯಮಿಯೊಬ್ಬರ ಜೊತೆ ಅನುಷ್ಕಾ ಮದುವೆಯ ಬಗ್ಗೆ...

ಉತ್ತರ ಕೊರಿಯಾ ಅಣ್ವಸ್ತ್ರ ಸಾಮರ್ಥ್ಯದ ರಾಕೆಟ್ ಲಾಂಚರ್ ಪರೀಕ್ಷೆ

ಉತ್ತರ ಕೊರಿಯಾ ಅಣ್ವಸ್ತ್ರ ಸಾಮರ್ಥ್ಯದ ರಾಕೆಟ್ ಲಾಂಚರ್ ಪರೀಕ್ಷೆ

ಉತ್ತರ ಕೊರಿಯಾ ಅಣ್ವಸ್ತ್ರ ಸಾಮರ್ಥ್ಯದ ರಾಕೆಟ್ ಲಾಂಚರ್ ಪರೀಕ್ಷೆ ನಡೆಸಿದೆ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹಾಗೂ ಅವರ ಮಗಳು ಕಿಮ್ ಜು ಏ ಸಮ್ಮುಖದಲ್ಲಿ ಈ ಪರೀಕ್ಷೆ ನಡೆದಿದೆ. ಪರೀಕ್ಷೆ ಬಳಿಕ ಇದು, ೪೨೦ ಕಿಮೀ ವ್ಯಾಪ್ತಿಯೊಳಗಿನ ಶತ್ರುಗಳನ್ನು ನಾಶ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಕಿಮ್ ಜಾಂಗ್ ಉನ್ ತಿಳಿಸಿದ್ದಾರೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ ಈ ವಾರ ಜಂಟಿ ಸಮರಾಭ್ಯಾಸ ಪ್ರಾರಂಭಿಸಿದ ನಂತರ, ಉತ್ತರ ಕೊರಿಯಾ ೧೨ ೬೦೦ಎಂ.ಎಂ. ಕ್ಯಾಲಿಬರ್ ಮಲ್ಟಿಪಲ್ ರಾಕೆಟ್ ಲಾಂಚರ್‌ಗಳ ಪರೀಕ್ಷೆ ನಡೆಸಿದೆ. ಈ ಪರೀಕ್ಷೆಯು ಪರಮಾಣು ಶಸ್ತ್ರಾಸ್ತ್ರಗಳ ವಿನಾಶಕಾರಿ ಶಕ್ತಿಯ ಬಗ್ಗೆ ಶತ್ರುಗಳಿಗೆ ಅರಿವು ಮೂಡಿಸುತ್ತದೆ ಎಂದು ಉನ್ ಎಚ್ಚರಿಕೆ ನೀಡಿದ್ದಾರೆ. ಉಡಾಯಿಸಲಾದ ರಾಕೆಟ್‌ಗಳು ಸುಮಾರು ೩೬೪.೪ ಕಿಮೀ ದೂರದಲ್ಲಿರುವ ಕೊರಿಯಾದ ಪೂರ್ವ ಸಮುದ್ರದಲ್ಲಿರುವ ದ್ವೀಪದಲ್ಲಿದ್ದ ಗುರಿಗೆ ನಿಖರವಾಗಿ ಹೊಡೆದಿವೆ ಎಂದು ವರದಿಯಾಗಿದೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾ (south korea) ಸಮರಾಭ್ಯಾಸದ ಬಗ್ಗೆ ಮಾತನಾಡಿದ್ದ ಕಿಮ್ ಜಾಂಗ್ ಉನ್ ಅವರ...

ಭಾರತದ ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಇಂಡೋನೇಶ್ಯಾದಿಂದ 200-350 ಬಿಲಿಯನ್ ಡಾಲರ್ ಡೀಲ್

ಭಾರತದ ಬ್ರಹ್ಮೋಸ್ ಕ್ಷಿಪಣಿ ಖರೀದಿಗೆ ಇಂಡೋನೇಶ್ಯಾದಿಂದ 200-350 ಬಿಲಿಯನ್ ಡಾಲರ್ ಡೀಲ್

ಭಾರತದ ಬತ್ತಳಿಕೆಯಲ್ಲಿರುವ ಯುದ್ಧಾಸ್ತ್ರಗಳಲ್ಲಿ ಪ್ರಮುಖವಾಗಿರುವ ಬ್ರಹ್ಮೋಸ್ ಮಿಸೈಲ್ ಸಿಸ್ಟಂ ( BrahMos missile system ) ಅನ್ನು ಖರೀದಿಸಲು ಇಂಡೋನೇಷ್ಯಾ ಒಪ್ಪಂದ ಮಾಡಿಕೊಂಡಿದೆ. ಈ ವಿಚಾರವನ್ನು ಇಂಡೋನೇಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರರಾದ ರಿಕೋ ರಿಕಾರ್ಡೊ ಸಿರಾಯ್ಟ್ ಅವರೇ ಖುದ್ದಾಗಿ ಮಾಹಿತಿ ನೀಡಿದ್ದಾರೆ. ೨೦೨೩ರಲ್ಲೇ ಭಾರತ ಮತ್ತು ಇಂಡೋನೇಷ್ಯಾ ನಡುವೆ ಈ ಒಪ್ಪಂದ ಸಂಬಂಧ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಹೇಳಲಾಗಿತ್ತು. ಈ ಡೀಲ್ ಸುಮಾರು ೨೦೦ ಮಿಲಿಯನ್ ಡಾಲರ್‌ನಿಂದ ೩೫೦ ಮಿಲಿಯನ್ ಡಾಲರ್ ಇರಬಹುದು. ಅಂದರೆ ಸುಮಾರು ೨,೦೦೦ ಕೋಟಿ ರೂ ಮೊತ್ತದ ಡೀಲ್ ಇದಾಗಿರಬಹುದು. ಆದರೆ, ಒಪ್ಪಂದದ ಸ್ವರೂಪ ಏನು ಎಂಬುದು ಗೊತ್ತಾಗಿಲ್ಲ. ಇಂಡೋನೇಷ್ಯಾದ ವಕ್ತಾರರು ನೀಡಿರುವ ಮಾಹಿತಿ ಪ್ರಕಾರ, ತಮ್ಮ ಮಿಲಿಟರಿ ಹಾರ್ಡ್ವೇರ್‌ನ ಆಧುನೀಕರಣ ಹಾಗೂ ರಕ್ಷಣಾ ಸಾಮರ್ಥ್ಯ ಬಲಪಡಿಸಲು ಈ ಒಪ್ಪಂದವನ್ನು ಬಳಸಲಾಗಿದೆ. ಆದರೆ, ಅವರು ಈ ಡೀಲ್‌ನ ಒಟ್ಟು ಮೊತ್ತವೆಷ್ಟು ಎಂದು ನಿಖರ ಡಾಟಾ ಕೊಡಲು ನಿರಾಕರಿಸಿದ್ದಾರೆ. ಪಾಕಿಸ್ತಾನ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂದೂರ್‌ನಲ್ಲಿ...

AI ಕ್ಷೇತ್ರದಲ್ಲಿ ₹೧೦ ಲಕ್ಷ ಕೋಟಿ ಹೂಡಿಕೆ: ರಿಲಯನ್ಸ್ ಜಿಯೊ ಘೋಷಣೆ

AI ಕ್ಷೇತ್ರದಲ್ಲಿ ₹೧೦ ಲಕ್ಷ ಕೋಟಿ ಹೂಡಿಕೆ: ರಿಲಯನ್ಸ್ ಜಿಯೊ ಘೋಷಣೆ

ನವದೆಹಲಿಯ ಭಾರತ ಮಂಟಪದಲ್ಲಿ ನಡೆಯುತ್ತಿರುವ ಎ.ಐ ಇಂಪ್ಯಾಕ್ಟ್ ಶೃಂಗದಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಮಹತ್ವದ ಘೋಷಣೆ ಮಾಡಿದ್ದಾರೆ. ಕೃತಕ ಬುದ್ಧಿಮತ್ತೆ (Ai) ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲು ರಿಲಯನ್ಸ್ ಜಿಯೊ ಮುಂದಿನ ಏಳು ವರ್ಷಗಳಲ್ಲಿ ₹೧೦ ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಅವರು ತಿಳಿಸಿದ್ದಾರೆ. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅಂಬಾನಿ, “ಎ.ಐಯ ಅತ್ಯುತ್ತಮ ಹಂತ ಇನ್ನಷ್ಟೇ ಬರಬೇಕಿದೆ. ಇದು ಸೂಪರ್ ಸಮೃದ್ಧಿಯ ಜಗತ್ತನ್ನು ತೆರೆದುಕೊಳ್ಳಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೊಬೈಲ್ ದತ್ತಾಂಶ ಕ್ಷೇತ್ರದಲ್ಲಿ ಜಿಯೊ ಮಾಡಿದ ಕ್ರಾಂತಿಯAತೆ, Ai ಕ್ಷೇತ್ರದಲ್ಲಿಯೂ ಅದೇ ಮಾದರಿಯ ಬದಲಾವಣೆ ತರಲಾಗುತ್ತದೆ ಎಂದು ಅವರು ಹೇಳಿದರು. ಕೈಗೆಟುಕುವ Ai – ಭಾರತದ ದೃಷ್ಟಿಕೋನ : AI ಕ್ಷೇತ್ರದಲ್ಲಿ ಜಗತ್ತು ಎರಡು ದಿಕ್ಕುಗಳಲ್ಲಿ ಸಾಗುತ್ತಿದೆ. ಒಂದು ದುಬಾರಿ ಹಾಗೂ ನಿಯಂತ್ರಿತ ದತ್ತಾಂಶ ಆಧಾರಿತ AI, ಇನ್ನೊಂದು ಸಾಮಾನ್ಯ ಜನತೆಗೆ ಕೈಗೆಟುಕುವ Ai. ಭಾರತ ಕೈಗೆಟುಕುವ, ಸಮಾನ ಅವಕಾಶಗಳನ್ನು ಒದಗಿಸುವ Ai ಮಾದರಿಯನ್ನು ಅಭಿವೃದ್ಧಿಪಡಿಸಲಿದೆ ಎಂದು ಅಂಬಾನಿ ತಿಳಿಸಿದರು.  “ಈ...

ಕನ್ನಡ ಮುದ್ರಣೋದ್ಯಮಕ್ಕೆ ದ್ವಿಶತಕ ಸಂಭ್ರಮ

ಕನ್ನಡ ಮುದ್ರಣೋದ್ಯಮಕ್ಕೆ ದ್ವಿಶತಕ ಸಂಭ್ರಮ

೧೫೫೬ರಲ್ಲಿ ಅನಿರೀಕ್ಷಿತವಾಗಿ ಮೊಟ್ಟಮೊದಲ ಮುದ್ರಣಯಂತ್ರ ಗೋವಾ ತಲುಪಿ ಮುದ್ರಣಕಾರ್ಯ ಆರಂಭ ಮಾಡಿತು. ಜಾನ್ ಹ್ಯಾಂಡ್ಸ್ನ ಸತತ ೭ ವರ್ಷಗಳ ಪ್ರಯತ್ನದ ಫಲವಾಗಿ ೧೮೨೬ರಲ್ಲಿ ಮುದ್ರಣಯಂತ್ರವು ಬಳ್ಳಾರಿಯನ್ನು ಸೇರಿತು ೧೫೫೬ರಲ್ಲಿ ಅನಿರೀಕ್ಷಿತವಾಗಿ ಮೊಟ್ಟಮೊದಲ ಮುದ್ರಣಯಂತ್ರ ಗೋವಾ ತಲುಪಿ ಮುದ್ರಣಕಾರ್ಯ ಆರಂಭ ಮಾಡಿತು. ಜಾನ್ ಹ್ಯಾಂಡ್ಸ್ನ ಸತತ ೭ ವರ್ಷಗಳ ಪ್ರಯತ್ನದ ಫಲವಾಗಿ ೧೮೨೬ರಲ್ಲಿ ಮುದ್ರಣಯಂತ್ರವು ಬಳ್ಳಾರಿಯನ್ನು ಸೇರಿತು. ಅನೇಕ ಅಡಚಣೆಗಳನ್ನು ದಾಟಿ ೧೮೨೮ರಿಂದ ಕನ್ನಡ ಮುದ್ರಣವನ್ನು ನಿಯಮಿತವಾಗಿ ಪ್ರಾರಂಭಿಸಲಾಯಿತು. ಈ ೨ ಶತಮಾನಗಳ ನಂತರವೂ ಹೊಸ ಹೊಸ ಆವಿಷ್ಕಾರ ನಡೆದು, ಹೊಸ ಯಂತ್ರಗಳು ಬರುತ್ತಲೇ ಇವೆ. ಮುದ್ರಣ ಲೋಕದ ಪಿತಾಮಹ ಗುಟೆನ್‌ಬರ್ಗ್ ಸ್ಮರಣಾರ್ಥ ಫೆ.೨೪ ಅನ್ನು ‘ಮುದ್ರಕರ ದಿನ’ವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ಜರ್ಮನಿಯ ಅಕ್ಕಸಾಲಿಗ ಗುಟೆನ್‌ಬರ್ಗ್ ೧೪೫೪ರಲ್ಲಿ ಬಿಡಿ ಅಕ್ಷರಗಳ ಮೊಳೆಗಳನ್ನು ಕಂಡುಹಿಡಿದ ಮೇಲೆ ಮುದ್ರಣ ಕಲೆಯು ಫ್ರಾನ್ಸ್, ಇಟಲಿ, ಪೋರ್ಚುಗಲ್, ಹಾಲೆಂಡ್, ಇಂಗ್ಲೆAಡ್ ಮುಂತಾದ ರಾಷ್ಟ್ರಗಳಿಗೆ ಹಬ್ಬಿತು. ಇದಕ್ಕೂ ಮುಂಚೆ ಕ್ರಿ.ಶ.೮೬೮ರಲ್ಲಿ ಮುದ್ರಿತವಾದ ೬ ಹಾಳೆಯ ‘ಹಿರಕಸೂತ್ರ’ ಎಂಬ ಪುಸ್ತಕವು ಚೀನಾದ...

ಗಡಸು ನೀರು ಕೂದಲು ಉದುರುವಿಕೆಗೆ ಕಾರಣ

ಗಡಸು ನೀರು ಕೂದಲು ಉದುರುವಿಕೆಗೆ ಕಾರಣ

ಕೂದಲು ಉದುರುವ ಸಮಸ್ಯೆ ಪ್ರತಿಯೊಬ್ಬರನ್ನೂ ಕಾಡುತ್ತಿದೆ. ಕೆಲವರಂತೂ ಪೋಷಕಾಂಶ ಭರಿತ ಆಹಾರವನ್ನು ಸೇವಿಸಿದರೂ ಕೂದಲು ಉದುರುವುದು ಮಾತ್ರ ನಿಲ್ಲೋದಿಲ್ಲ. ಇದಕ್ಕೆ ಅವರು ನೀರನ್ನು ದೂರುತ್ತಾರೆ. ಗಡಸು ನೀರಿನ ಬಳಕೆಯಿಂದ ಕೂದಲು ಉದುರುತ್ತದೆ ಎನ್ನುತ್ತಾರೆ. ನಮ್ಮಲ್ಲಿ ಅನೇಕರು ಕೂದಲು ಉದುರುವುದಕ್ಕೆ ಗಡಸು ನೀರು ಕಾರಣ, ನೀರು ಸರಿಯಿಲ್ಲ ಎನ್ನುವುದನ್ನು ನೀವು ಕೇಳಿರಬಹುದು. ಗಡಸು ನೀರಿನಲ್ಲಿ ತಲೆಸ್ನಾನ ಮಾಡೋದರಿಂದ ಕೂದಲು ಉದುರಲು ಆರಂಭಿಸಿದೆ ಎನ್ನುತ್ತಾರೆ. ಆದರೆ ನಿಜಕ್ಕೂ ಕೂದಲು ಉದುರಲು ಗಡಸು ನೀರು ಕಾರಣವಾಗುತ್ತಾ ಎನ್ನುವ ಪ್ರಶ್ನೆ ಬಹುತೇಕರಲ್ಲಿದೆ. ತಲೆ ಕೂದಲು ಶಾಶ್ವತ ಬೋಳಾಗುವುದು ಹಾಗೂ ಕೂದಲು ಉದುರುವಿಕೆಗೆ ಗಡಸು ನೀರು ಕಾರಣವಾಗುವುದಿಲ್ಲ ಆದರೆ ಅದರ ಖನಿಜ ಅಂಶವು ಕೂದಲು ಮತ್ತು ನೆತ್ತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ, ಇದು ಕೂದಲು ಉದುರುವಿಕೆಯನ್ನು ಇನ್ನಷ್ಟು ಹದಗೆಡಿಸುತ್ತದೆ ಎನ್ನುತ್ತಾರೆ ಅವರು. ಗಡಸು ನೀರಿನ ಖನಿಜ ಅಂಶವು ಗಣನೀಯ ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ ಅನ್ನು ಒಳಗೊಂಡಿರುತ್ತದೆ. ಗಡಸು ನೀರಿನಿಂದ ತೊಳೆಯುವ ಪ್ರಕ್ರಿಯೆಯು ನೆತ್ತಿ ಮತ್ತು ಕೂದಲಿನ ಬುಡ ಎರಡರಲ್ಲೂ...

ಭಾರತದಿಂದ ಕಣ್ಮರೆಯಾಗಲಿವೆಯೇ ಕಾಮನಬಿಲ್ಲುಗಳು:

ಭಾರತದಿಂದ ಕಣ್ಮರೆಯಾಗಲಿವೆಯೇ ಕಾಮನಬಿಲ್ಲುಗಳು:

ಹವಾಮಾನ ಬದಲಾವಣೆಯ ಎಫೆಕ್ಟ್! ನವದೆಹಲಿ: ಆಗಸದಲ್ಲಿ ವರ್ಣರಂಜಿತ ಕಾಮನಬಿಲ್ಲನ್ನು ನೋಡಿ ಮನಸೋತವರು ಯಾರಿಲ್ಲ? ಮಳೆ ಅಥವಾ ನೀರಿನ ಹನಿಗಳ ಮೇಲೆ ಸೂರ್ಯನ ಬೆಳಕು ಬಿದ್ದಾಗ ಆಗಸದಲ್ಲಿ ಮೂಡುವ ಈ ಸುಂದರ ಕಮಾನು ಪ್ರತಿಯೊಬ್ಬರ ಮನಸಿಗೂ ಮುದ ನೀಡುತ್ತದೆ. ಆದರೆ, ಭವಿಷ್ಯದಲ್ಲಿ ಈ ಕಾಮನಬಿಲ್ಲು ಎಂಬ ಪರಿಕಲ್ಪನೆಯೇ ಮಾಯವಾದರೆ? ಹೌದು, ಸೌಂದರ್ಯದ ಸಂಕೇತವಾಗಿರುವ ಕಾಮನಬಿಲ್ಲುಗಳು, ಹವಾಮಾನ ಬದಲಾವಣೆಯ ಪರಿಣಾಮವಾಗಿ ಭವಿಷ್ಯದಲ್ಲಿ ತಮ್ಮ ಗೋಚರಿಸುವಿಕೆಯ ಮಾದರಿಯನ್ನು ಬದಲಿಸಿಕೊಳ್ಳಲಿವೆ ಎಂಬ ಆತಂಕಕಾರಿ ವಿಷಯವನ್ನು ಹೊಸ ವೈಜ್ಞಾನಿಕ ಅಧ್ಯಯನವೊಂದು ಬಹಿರಂಗಪಡಿಸಿದೆ. ಜಾಗತಿಕವಾಗಿ ಮಳೆಯ ಮಾದರಿಗಳು ಮತ್ತು ಮೋಡದ ಹೊದಿಕೆಯನ್ನು ಬದಲಾಯಿಸುತ್ತಿರುವ ಹವಾಮಾನ ಬದಲಾವಣೆಯು, ಕಾಮನಬಿಲ್ಲುಗಳು ಎಲ್ಲಿ ಮತ್ತು ಯಾವಾಗ ಕಾಣಿಸಿಕೊಳ್ಳುತ್ತವೆ ಎಂಬುದರ ಮೇಲೂ ಪರಿಣಾಮ ಬೀರಲಿದೆ. ಕೆಲವು ಪ್ರದೇಶಗಳಲ್ಲಿ ಕಾಮನಬಿಲ್ಲುಗಳು ಹೆಚ್ಚಾಗಿ ಕಾಣಿಸಿಕೊಂಡರೆ, ಭಾರತದಂತಹ ಜನನಿಬಿಡ ಪ್ರದೇಶಗಳಲ್ಲಿ ಅವುಗಳ ಗೋಚರತೆ ಕಡಿಮೆಯಾಗಿ, ಮುಂದೊAದು ದಿನ ಸಂಪೂರ್ಣವಾಗಿ ಕಣ್ಮರೆಯಾಗುವ ಸಾಧ್ಯತೆಯಿದೆ ಎಂದು ಸಂಶೋಧನೆ ಎಚ್ಚರಿಸಿದೆ. ಸೂರ್ಯನ ಬೆಳಕು ವಾತಾವರಣದಲ್ಲಿನ ನೀರಿನ ಹನಿಗಳ ಮೂಲಕ ಹಾದುಹೋದಾಗ ಕಾಮನಬಿಲ್ಲುಗಳು ರೂಪುಗೊಳ್ಳುತ್ತವೆ. ಹೀಗಾಗಿ,...

ಹೂಡಿಕೆದಾರರಿಗೆಲೈಫ್ಸೈಕಲ್ಫಂಡ್ಎಷ್ಟುಪ್ರಯೋಜನಕಾರಿ

ಹೂಡಿಕೆದಾರರಿಗೆಲೈಫ್ಸೈಕಲ್ಫಂಡ್ಎಷ್ಟುಪ್ರಯೋಜನಕಾರಿ

ಸಣ್ಣ ಹೂಡಿಕೆದಾರರು ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್ ಸೇರಿದಂತೆ ಇತರ ಹೂಡಿಕೆ ಸಾಧನಗಳಲ್ಲಿ ಸೆಬಿ ಆಗಾಗ ಬದಲಾವಣೆ ಮಾಡುತ್ತದೆ. ಏಕೆಂದರೆ ಹೂಡಿಕೆದಾರರ ಬಂಡವಾಳ ರಕ್ಷಣೆ ಸೆಬಿಯ ಮುಖ್ಯ ಉದ್ದೇಶ. ಅಂತೆಯೇ ಇತ್ತೀಚೆಗೆ ಸೆಬಿ, “ಲೈಫ್ ಸೈಕಲ್ ಫಂಡ್” ಎಂದು ಕರೆಯಲ್ಪಡುವ ಹೊಸ ಮ್ಯೂಚುಯಲ್ ಫಂಡ್‌ಗಳನ್ನು ಪರಿಚಯಿಸಿದೆ. ಏನಿದು ಲೈಫ್ ಸೈಕಲ್ ಫಂಡ್? ಹೂಡಿಕೆದಾರರಿಗೆ ಎಷ್ಟರ ಮಟ್ಟಿಗೆ ಪ್ರಯೋಜನ ಎಂಬುದನ್ನು ನೋಡಬೇಕಿದೆ. ಸಾಂಪ್ರದಾಯಿಕ ಮ್ಯೂಚುವಲ್ ಫಂಡ್‌ಗಳಿಗೆ ಹೋಲಿಸಿದರೆ, ಲೈಫ್ ಸೈಕಲ್ ಫಂಡ್‌ಗಳು ಒಂದು ವಿಶಿಷ್ಟ ವಿಧಾನವನ್ನು ಅಳವಡಿಸಿಕೊಳ್ಳುತ್ತವೆ. ಮೂಲಭೂತವಾಗಿ, ಇವು ಓಪನ್ ಎಂಡೆಡ್ ಟಾರ್ಗೆಟ್ ಡೇಟ್ ಫಂಡ್‌ಗಳು. ಅಂದರೆ ಇವು ಪೂರ್ವನಿರ್ಧರಿತ ಮ್ಯಾಚುರಿಟಿ ದಿನಾಂಕದೊಂದಿಗೆ ಸಂಬಂಧ ಹೊಂದಿವೆ ಎಂದು ಸೂಚಿಸುತ್ತದೆ. ಈ ಫಂಡ್ ಸಾಮಾನ್ಯವಾಗಿ ೫ ವರ್ಷಗಳ ಅವಧಿಯನ್ನು ಹೊಂದಿರುತ್ತವೆ, ಆದರೂ ಕೆಲವು ಗರಿಷ್ಠ ೩೦ ವರ್ಷಗಳ ಅವಧಿಯವರೆಗೆ ವಿಸ್ತರಿಸಬಹುದು. ಮೆಚ್ಯುರಿಟಿ ದಿನಾಂಕ ಸಮೀಪಿಸುತ್ತಿದ್ದಂತೆ, ಸ್ವಯಂಚಾಲಿತವಾಗಿ ಫಂಡ್ ತನ್ನ ಹೂಡಿಕೆ ತಂತ್ರವನ್ನು ಬದಲಿಸುತ್ತದೆ. ಅಂದರೆ “ಗ್ಲೈಡ್ ಪಾತ್” ಎಂದು ಕರೆಯಲ್ಪಡುವ ಪೂರ್ವನಿರ್ಧರಿತ ಹೂಡಿಕೆ...

ಪುತ್ರಿ ಜೊತೆ ಯುದ್ಧ ಟ್ಯಾಂಕರ್‌ನಲ್ಲಿ ಸವಾರಿ ಮಾಡಿದ ಕಿಮ್

ಪುತ್ರಿ ಜೊತೆ ಯುದ್ಧ ಟ್ಯಾಂಕರ್‌ನಲ್ಲಿ ಸವಾರಿ ಮಾಡಿದ ಕಿಮ್

ಮಧ್ಯಪ್ರಾಚ್ಯ ಯುದ್ಧದ ನಡುವೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ (kim jong un) ಇದೀಗ ಪುತ್ರಿ ಜೊತೆ ಯುದ್ಧ ಟ್ಯಾಂಕರ್‌ನಲ್ಲಿ ಸವಾರಿ ಮಾಡಿದ್ದಾರೆ. ಹೌದು, ಇತ್ತೀಚಿಗಷ್ಟೇ ಪುತ್ರಿ ಜೊತೆ ಕ್ರೂಸ್ ಕ್ಷಿಪಣಿ ಪರೀಕ್ಷಿಸಿ, ಶೂಟಿಂಗ್ ಮಾಡಿದ್ದರು. ಇದೀಗ ಮತ್ತೆ ಹೊಸ ಪ್ರಯತ್ನ ಮಾಡಿದ್ದಾರೆ. ಪ್ಯೊಂಗ್ಯಾಂಗ್ ನಲ್ಲಿರುವ ೬೦ನೇ ತರಬೇತಿ ನೆಲೆಗೆ ಭೇಟಿ ನೀಡಿದಾಗ ಕಿಮ್ ಮತ್ತು ಜು ಏ ಸಮರಾಭ್ಯಾಸ ವೀಕ್ಷಿಸಿ, ಒಂದೇ ತರಹದ ಉಡುಗೆ ಧರಿಸಿ, ಯುದ್ಧ ಟ್ಯಾಂಕರ್‌ನಲ್ಲಿ ಸವಾರಿ ಮಾಡಿದ್ದಾರೆ. ಈ ಕುರಿತು ಉತ್ತರ ಕೊರಿಯಾದ ಅಧಿಕೃತ ಸುದ್ದಿಸಂಸ್ಥೆ `ಕೆಸಿಎನ್‌ಎ’ ಫೋಟೋಗಳನ್ನು ಬಿಡುಗಡೆ ಮಾಡಿದೆ. `ಕೆಸಿಎನ್‌ಎ’ ಪ್ರಕಾರ, ಯುದ್ಧ ಟ್ಯಾಂಕರ್‌ಗಳು ಕ್ಷಿಪಣಿ ಮತ್ತು ಡ್ರೋನ್‌ಗಳ ವಿರುದ್ಧ ರಕ್ಷಣೆ ಮಾಡುವುದು, ಫೈರ್‌ಪವರ್ ಮತ್ತು ರಕ್ಷಣಾತ್ಮಕ ವ್ಯವಸ್ಥೆಗಳನ್ನು ಹೊಂದಿದೆ. ಟ್ಯಾಂಕರ್‌ಗಳ ಚಲನಶೀಲತೆ, ಅವುಗಳು ಅಬ್ಬರಿಸುವ ರೀತಿ ಎಲ್ಲವನ್ನು ನೋಡಿದ ಕಿಮ್ ಜಾಂಗ್ ಉನ್ ಅವರು ಸಂತೋಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಟ್ಯಾಂಕರ್‌ಗಳ ಅದ್ಭುತ ಪ್ರದರ್ಶನವು ನಮ್ಮ ಸೈನ್ಯದ ಶೌರ್ಯವನ್ನು ಪ್ರತಿಬಿಂಬಿಸುತ್ತಿದೆ...

ದೇಶದಾದ್ಯಂತ ೩೨ ವಿಶ್ವವಿದ್ಯಾಲಯಗಳು ನಕಲಿ: ಕರ್ನಾಟಕದಲ್ಲೂ ೨ ಫೇಕ್ ಯೂನಿವರ್ಸಿಟಿ ಪತ್ತೆ!

ದೇಶದಾದ್ಯಂತ ೩೨ ವಿಶ್ವವಿದ್ಯಾಲಯಗಳು ನಕಲಿ: ಕರ್ನಾಟಕದಲ್ಲೂ ೨ ಫೇಕ್ ಯೂನಿವರ್ಸಿಟಿ ಪತ್ತೆ!

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ೧೨ ರಾಜ್ಯಗಳಲ್ಲಿ ಬರೋಬ್ಬರಿ ೩೨ ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ನಮ್ಮ ರಾಜ್ಯದಲ್ಲೂ ಎರಡು ನಕಲಿ ವಿಶ್ವವಿದ್ಯಾಲಯ ಪತ್ತೆಯಾಗಿವೆ. ಈ ನಕಲಿ ವಿಶ್ವವಿದ್ಯಾಲಯಗಳ ಪೈಕಿ ದೆಹಲಿ ೧ನೇ ಸ್ಥಾನದಲ್ಲಿದ್ದರೆ, ಉತ್ತರ ಪ್ರದೇಶ ಎರಡನೇ ಸ್ಥಾನದಲ್ಲಿದೆ. ಇಂತಹ ವಿಶ್ವವಿದ್ಯಾಲಯಗಳಲ್ಲಿ ದಾಖಲಾದ ನಂತರ ಪಡೆದ ಪದವಿಗಳು ನಿಷ್ಪ್ರಯೋಜಕವಾಗುತ್ತವೆ ಎಂದು ಯುಜಿಸಿ ಸ್ಪಷ್ಟವಾಗಿ ಎಚ್ಚರಿಸಿದೆ. ಜೊತೆಗೆ ಈ ವಿಶ್ವವಿದ್ಯಾಲಯಗಳಿಂದ ಪದವಿಗಳನ್ನು ಉದ್ಯೋಗಕ್ಕಾಗಿ ಮಾನ್ಯತೆ ನೀಡಬಾರದು ಎಂದಿದೆ. ಕೇಂದ್ರ ಸರ್ಕಾರವು ನಿರಂತರವಾಗಿ ನಕಲಿ ವಿಶ್ವವಿದ್ಯಾಲಯಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ. ಇತ್ತೀಚೆಗೆ, ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಎರಡು ವರ್ಷಗಳ ಹಿಂದೆ, ಎಂಟು ರಾಜ್ಯಗಳಲ್ಲಿ ಸುಮಾರು ೨೦ ಇದ್ದವು, ಆದರೆ ಈಗ ಅವು ವಿಸ್ತರಿಸಿವೆ. ಕರ್ನಾಟಕದಲ್ಲಿ ಯಾವುದು? ನಕಲಿ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಕರ್ನಾಟಕದ ತುಮಕೂರಿನ ಸರ್ವ ಭಾರತಿ ಶಿಕ್ಷಾ ಪೀಠ, ಬೆಂಗಳೂರಿನ ಗ್ಲೋಬಲ್ ಹ್ಯೂಮನ್ ಪೀಸ್ ವಿಶ್ವವಿದ್ಯಾಲಯ ಕಂಡು ಬಂದಿದೆ. ದೆಹಲಿಯ ಆಲ್...