ಪುದೀನಾ ಸಾಮಾನ್ಯವಾಗಿ ಸೂರ್ಯನ ಬೆಳಕನ್ನು ಇಷ್ಟಪಡುವ ಗಿಡ. ಆದರೆ ಬೇಸಿಗೆಯ ತೀವ್ರ ಬಿಸಿಲು ಇದಕ್ಕೆ ಮಾರಕವಾಗಬಹುದು. ಸರಿಯಾದ ಗೊಬ್ಬರ, ನೀರು ಮತ್ತು ಬಿಸಿಲಿನ ನಿರ್ವಹಣೆ ಮಾಡಿದರೆ ನಿಮ್ಮ ಮನೆಯ ಪುದೀನಾ ಗಿಡವು ವರ್ಷಪೂರ್ತಿ ತಾಜಾ ಎಲೆಗಳನ್ನು ನೀಡುತ್ತದೆ. ಮೇ ಮತ್ತು ಜೂನ್ ತಿಂಗಳಲ್ಲಿ ತಾಪಮಾನ ೪೦-೪೫ ಡಿಗ್ರಿ ತಲುಪಿದಾಗ, ಪುದೀನಾ ಗಿಡವನ್ನು ದಿನವಿಡೀ ಬಿಸಿಲಿನಲ್ಲಿ ಬಿಡಬೇಡಿ. ಬೆಳಗಿನ ೩-೪ ಗಂಟೆಗಳ ಕಾಲ ಮಾತ್ರ ಹಗುರವಾದ ಬಿಸಿಲು ತಗುಲುವಂತೆ ನೋಡಿಕೊಳ್ಳಿ. ಅತಿಯಾದ ಬಿಸಿಲು ಎಲೆಗಳನ್ನು ಸುಡುತ್ತದೆ ಮತ್ತು ಅವುಗಳ ಸುವಾಸನೆಯನ್ನು ಕಡಿಮೆ ಮಾಡುತ್ತದೆ. ಪಾಟ್: ನಿಮ್ಮ ಪುದೀನಾ ಪಾಟ್‌ನಲ್ಲಿದ್ದರೆ ಬಿಸಿಲು ಹೆಚ್ಚಾದಾಗ ಅದನ್ನು ಬಾಲ್ಕನಿ ಅಥವಾ ಕಿಟಕಿಯ ಹತ್ತಿರ ತಂಪಾದ ಜಾಗಕ್ಕೆ ಶಿಫ್ಟ್ ಮಾಡಿ. ಟೆರೇಸ್ ಗಾರ್ಡನ್: ಒಂದು ವೇಳೆ ನೀವು ಟೆರೇಸ್ ಗಾರ್ಡನ್ ಮಾಡುತ್ತಿದ್ದರೆ ಗಿಡದ ಮೇಲೆ ‘ಗ್ರೀನ್ ನೆಟ್’ಹಾಕುವುದರಿಂದ ಬಿಸಿಲಿನ ತಾಪವನ್ನು ೫೦% ಕಡಿಮೆ ಮಾಡಬಹುದು. ಪುದೀನಾ ವೇಗವಾಗಿ ಬೆಳೆಯಲು ಮಣ್ಣು ಸಡಿಲವಾಗಿರಬೇಕು. ಕುಂಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ. ಅಂತಹ...
ಕುಂಭಮೇಳ ಮೊನಾಲಿಸಾ ಕಣ್ಣೀರು
ಕುಂಭಮೇಳದಲ್ಲಿ ‘ರುದ್ರಾಕ್ಷಿ ಲೇಡಿ’ ಎಂದು ವೈರಲ್ ಆಗಿದ್ದ ಮೊನಾಲಿಸಾ, ಮುಸ್ಲಿಂ ಯುವಕ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದು, ಇದು ‘ಲವ್ ಜಿಹಾದ್’ ಚರ್ಚೆಗೆ ಕಾರಣವಾಗಿದೆ. ಜೀವ ಬೆದರಿಕೆ ಎದುರಿಸುತ್ತಿರುವ ದಂಪತಿ ರಕ್ಷಣೆ ಕೋರಿದ್ದಾರೆ. ಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಾ ಕಣ್ಣುಗಳಿಂದಲೇ ವೈರಲ್ ಆಗಿ ಇಡೀ ದೇಶದಲ್ಲಿ ಹಲ್‌ಚಲ್ ಸೃಷ್ಟಿಸಿದ್ದ ಮೊನಾಲಿಸಾ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿರೋ ಮೋನಿ ಬಗ್ಗೆ ಇದಾಗಲೇ ವಾದ-ಪ್ರತಿವಾದ-ವಿವಾದ ಎಲ್ಲವೂ ಶುರುವಾಗಿಬಿಟ್ಟಿದೆ. ಫರ್ಮಾನ್ ಖಾನ್ ಎನ್ನುವ ನಟನನ್ನು ಪ್ರೀತಿಸಿ ಮದುವೆಯಾಗಿರುವ ಮೊನಾಲಿಸಾದ್ದು ಲವ್ ಜಿಹಾದ್ ಎಂದು ಬಹುದೊಡ್ಡ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಇದಾಗಲೇ ಈ ದಂಪತಿ ಈ ಬಗ್ಗೆ ಸ್ಪಷ್ಟಪಡಿಸಿದ್ದೂ ಆಗಿದೆ. ಮೊನಾಲಿಸಾ ತಾನೇ ಖುದ್ದಾಗಿ ಲವ್ ಮಾಡಿ, ಮದುವೆಗೆ ಒತ್ತಾಯಿಸಿದ್ದು, ಇದರಲ್ಲಿ ತಮ್ಮ ಪತಿಯ ತಪ್ಪಿಲ್ಲ ಎಂದಿದ್ದಾರೆ. ಇದೀಗ ಮದುವೆಯಾದ ವಾರದಲ್ಲಿಯೇ ಜೋಡಿ ಲೈವ್‌ಗೆ ಬಂದಿದೆ. ಮೊನಾಲಿಸಾ ಜೀವ ರಕ್ಷಣೆ ಕೋರಿದ್ದಾರೆ. ನಮ್ಮನ್ನು ಕಾಪಾಡಿ. ಸಾರ್ವಜನಿಕರಿಂದ ನಮಗೆ ಜೀವ ಭಯ ಉಂಟಾಗಿದೆ. ಸೋಷಿಯಲ್ ಮೀಡಿಯಾಗಳಲ್ಲಿ,...
ಕಿಮ್ ಪರ ೯೯.೯೩% ಮತ ಬಿದ್ದರೂ ೦.೦೭% ಹೋಗಿದ್ದು ಯಾರಿಗೆ
ಉತ್ತರ ಕೊರಿಯಾ ಸಂಸತ್ ಚುನಾವಣೆಯಲ್ಲಿ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ವರ್ಕರ್ಸ್ ಪಾರ್ಟಿ ಆಫ್ ಕೊರಿಯಾ ಮತ್ತು ಮಿತ್ರ ಗುಂಪುಗಳು ೯೯.೯೩% ಮತ ಪಡೆದು ಭರ್ಜರಿ ಜಯಗಳಿಸಿದ್ದರೂ ೦.೦೭% ಮತ ಹೋಗಿದ್ದು ಯಾರಿಗೆ? – ವಿಶ್ವಾದ್ಯಂತ ಭಾರೀ ಸದ್ದು ಮಾಡಿದ್ದ ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಮಾರ್ಚ್ ೧೫ ರಂದು ೧೫ ನೇ ಸುಪ್ರೀಂ ಪೀಪಲ್ಸ್ ಅಸೆಂಬಿ ಸದಸ್ಯರನ್ನು ಆಯ್ಕೆ ಮಾಡಲು ನಡೆದ ಚುನಾವಣೆಯಲ್ಲಿ ಆಡಳಿತ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಪ್ರತಿಯೊಂದು ಸ್ಥಾನವನ್ನು ಗೆದ್ದಿದ್ದಾರೆ ಎಂದು ಸರ್ಕಾರಿ ಮಾಧ್ಯಮ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ ತಿಳಿಸಿದೆ. ನೋಂದಾಯಿತ ಮತದಾರರಲ್ಲಿ ಕೇವಲ ೦.೦೦೩೭ ಪ್ರತಿಶತದಷ್ಟು ಜನರು ವಿದೇಶದಲ್ಲಿ ಅಥವಾ ಸಮುದ್ರದಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರಿಗೆ ಮತವನ್ನು ಚಲಾಯಿಸಲು ಸಾಧ್ಯವಾಗಲಿಲ್ಲ. ಆದರೆ ಅತ್ಯಂತ ಕಡಿಮೆ ಸಂಖ್ಯೆಯ ಸುಮಾರು ೦.೦೦೦೦೩ ಪ್ರತಿಶತದಷ್ಟು ಜನರು ಮತದಾನ ಪ್ರಕ್ರಿಯೆಯಿಂದ ದೂರವಿದ್ದರು ಎಂದು ಹೇಳಿಕೊಂಡಿದೆ. ಈ ಚುನಾವಣೆಯಲ್ಲಿ ಯಾವುದೇ ವಿರೋಧ ಪಕ್ಷದ ಅಭ್ಯರ್ಥಿಗಳು ಇರದ ಕಾರಣ ಪ್ರತಿಸ್ಪರ್ಧಿಗೆ...
`ಸರ್ಸೆ ಸೆರಗ ಸರ್ಸೆ’ ಹಿಂದಿ ಹಾಡು ವಿವಾದ– ನಟಿ ನೋರಾ ಫತೇಹಿ ವಿರುದ್ಧ ಫತ್ವಾ
ಕೆಡಿ ಸಿನಿಮಾದ ವಿವಾದಿತ `ಸರ್ಸೆ ಸೆರಗ ಸರ್ಸೆ’ ಹಾಡಿಗೆ ನೃತ್ಯ ಮಾಡಿದ್ದಕ್ಕೆ ನೋರಾ ಫತೇಹಿ ವಿರುದ್ಧ ಇಸ್ಲಾಂ ಧರ್ಮದ ಮುಖಂಡರು ಫತ್ವಾ ಹೊರಡಿಸಿದ್ದಾರೆ. ಉತ್ತರ ಪ್ರದೇಶದ ಆಲಿಗಢದ ಮುಸ್ಲಿಂ ದಾರುಲ್ ಇಫ್ತಾದಿಂದ ಮುಖಂಡರು `ಸರ್ಸೆ ಸೆರಗ ಸರ್ಸೆ’ ನೃತ್ಯ ಮಾಡಿದ್ದಕ್ಕೆ ನೋರಾ ಫತೇಹಿ ವಿರುದ್ಧ ಫತ್ವಾ ಜಾರಿ ಮಾಡಿದ್ದಾರೆ. ಈ ಹಾಡು ಆಕ್ಷೇಪಾರ್ಹವಾಗಿದ್ದು, ಇಸ್ಲಾಮಿಕ್ ಬೋಧನೆಗಳಿಗೆ ವಿರುದ್ಧವೆಂದು ಪರಿಗಣಿಸುವ ವಿಷಯಗಳನ್ನು ಹೊಂದಿದೆ. ಹೀಗಾಗಿ ಈ ಹಾಡಿಗೆ ನೃತ್ಯ ಮಾಡಿದ್ದಕ್ಕಾಗಿ ಫತ್ವಾ ಜಾರಿ ಮಾಡಿದೆ. ನಟಿ ನೋರಾ ಫತೇಹಿ ಕೆನಡಾ ಮೂಲದವರಾಗಿದ್ದು, ಕೆಲ ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದಾರೆ. ಹಿಂದಿ, ತೆಲುಗು ಹಾಗೂ ಮಲಯಾಳಂನ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇತ್ತೀಚಿಗಷ್ಟೇ ನಟಿ ಈ ಬಗ್ಗೆ ಮಾತನಾಡಿ, ಮೂರು ವರ್ಷಗಳ ಹಿಂದೆ ಈ ಹಾಡನ್ನು ಕನ್ನಡದಲ್ಲಿ ಚಿತ್ರೀಕರಿಸಿದ್ದರು. ಈ ಹಾಡನ್ನು ಹೇಗೆ ಅಳವಡಿಸಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ತಿಳಿದಿರಲಿಲ್ಲ. ಈ ಹಾಡನ್ನು ವಿರೋಧಿಸಿದ್ದಕ್ಕೆ ಧನ್ಯವಾದಗಳು. ಈ ಹಾಡನ್ನು ಅನುವಾದಿಸಿದಾಗ ನನಗೆ ಏನೂ ಅನುಚಿತ ಅಥವಾ ಅಸಭ್ಯ ಗೊತ್ತಾಗಲಿಲ್ಲ....
ಉದ್ಯೋಗ ನೇಮಕಾತಿಗೂ AI ಸಂಕಷ್ಟ
ಇಂದಿನ ತಂತ್ರಜ್ಞಾನದ ಯುಗದಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಎಐ (AI) ಅಂದರೆ ಕೃತಕ ಬುದ್ಧಿಮತ್ತೆ ಕಂಟಕ ತರಬಹುದು ಎಂಬ ಆತಂಕದ ಜೊತೆಗೆ ಉದ್ಯೋಗಿಗಳ ಕೆಲಸವನ್ನೂ ಕಸಿದುಕೊಳ್ಳಬಹುದೆಂಬ ಭಯ ಈಗಾಗಲೇ ಸೃಷ್ಟಿಯಾಗಿದೆ. ಇದರ ಜೊತೆಗೆ ಎಐನಿಂದ ನೇಮಕಾತಿ ಪ್ರಕ್ರಿಯೆಯೂ ದಿನದಿಂದ ದಿನಕ್ಕೆ ಕಷ್ಟಕರವಾಗುತ್ತಿದೆ ಎಂಬ ಅಭಿಪ್ರಾಯಗಳು ಹರಿದಾಡಿದ್ದು, ಈ ಬಗ್ಗೆ ಬೆಂಗಳೂರು ಮೂಲದ ಟೇಕ್ ಯು ಫಾರ್ವರ್ಡ್ ಸಂಸ್ಥೆಯ ಸಂಸ್ಥಾಪಕ ರಾಜ್ ವಿಕ್ರಮಾದಿತ್ಯ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಯೂಸರ್ ಎಕ್ಸ್ಪೀರಿಯನ್ಸ್ ಹುದ್ದೆಗೆ ನಡೆದ ನೇಮಕಾತಿ ಪ್ರಕ್ರಿಯೆಯನ್ನು ಉದಾಹರಿಸಿ ಮಾತನಾಡಿದ ಅವರು, ಹೆಚ್ಚಿನ ಅಭ್ಯರ್ಥಿಗಳ ಅರ್ಜಿಗಳು AI ಮೂಲಕ ತಯಾರಿಸಲಾಗಿವೆ. ಅಲ್ಲದೆ ಅವುಗಳು ಕೇವಲ ತಾಂತ್ರಿಕತೆಯನ್ನು ಹೊಂದಿದ್ದು, ಅರ್ಜಿಯನ್ನು ಉತ್ತಮಗೊಳಿಸುವ ಕನಿಷ್ಠ ಪ್ರಯತ್ನವೂ ಕಂಡುಬಂದಿಲ್ಲವೆಂದು ಬರೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅರ್ಜಿಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ಗುಣಮಟ್ಟದ ಅಭ್ಯರ್ಥಿಗಳು ಕಡಿಮೆಯಾಗುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ೩೫ ಅಭ್ಯರ್ಥಿಗಳನ್ನು ಶಾರ್ಟ್ಲಿಸ್ಟ್ ಮಾಡಿದ ಬಳಿಕ ನಡೆದ ಮೊದಲ ಹಂತದ ಮೌಲ್ಯಮಾಪನದಲ್ಲಿ ಬಹುತೇಕರು ಕಾಪಿ-ಪೇಸ್ಟ್ ಅಥವಾ AI...
KGF ನಂತಹ ಅದ್ಭುತ ಸ್ಕ್ರಿಪ್ಟ್‌ಗಾಗಿ ಕಾಯುತ್ತಿದ್ದೇನೆ: ಕೊರಿಯನ್ ಸ್ಟಾರ್
ಇತ್ತೀಚೆಗೆ ಭಾರತೀಯ ಚಿತ್ರರಂಗವನ್ನು ಉದ್ದೇಶಿಸಿ ಮಾತನಾಡಿದ ಕೊರಿಯನ್ ಸ್ಟಾರ್ ನಟ ವೈ ಹಾ ಜೂನ್, ಯಶ್ ಮತ್ತು ಕೆಜಿಎಫ್ ಗುಣಗಾನ ಮಾಡಿದ್ದಾರೆ. ‘ಅಣ್ತಮ್ಮಾ, ಇಲ್ಲಿ ಯಾರೂ ಹೀರೋಗಳನ್ನು ಹುಟ್ಟಾಕಲ್ಲ, ನಮಗೆ ನಾವೇ ಹೀರೋ ಆಗಬೇಕು’ ಅಂತಾ ರಾಜಾಹುಲಿ ಸಿನಿಮಾದಲ್ಲಿ ಡೈಲಾಗ್ ಹೊಡೆದಿದ್ದ ಯಶ್ ಅವರೀಗ ಕೇವಲ ಸ್ಯಾಂಡಲ್‌ವುಡ್‌ನ ರಾಕಿಂಗ್ ಸ್ಟಾರ್ ಮಾತ್ರವಲ್ಲ, ಇಂಟರ್‌ನ್ಯಾಷನಲ್ ಸೂಪರ್ ಸ್ಟಾರ್. ಏಕೆಂದರೆ, ಯಶ್ ಮತ್ತು ಕೆಜಿಎಫ್ ಪ್ಯಾನ್ ವರ್ಲ್ಡ್ ಲೆವೆಲ್‌ನಲ್ಲಿ ಸದ್ದಾದ ಹೆಸರುಗಳು. ಪ್ರೇಕ್ಷಕರು ಮಾತ್ರವಲ್ಲದೇ ಈಗಾಗಲೇ ಭಾರತೀಯ ಸಿನಿಮಾ ದಿಗ್ಗಜರಿಂದಲೂ ಪ್ರಶಂಸೆ ಸ್ವೀಕರಿಸಿರುವ ಯಶ್ ಅವರನ್ನು ಇದೀಗ ಕೊರಿಯನ್ ಸೂಪರ್ ಸ್ಟಾರ್ ಹಾಡಿ ಹೊಗಳಿದ್ದಾರೆ. ಗ್ಲೋಬಲ್ ಲೆವೆಲ್‌ನಲ್ಲಿ ಸದ್ದು ಮಾಡಿರುವ ವೆಬ್ ಸೀರಿಸ್ ‘ಸ್ಕ್ವಿಡ್ ಗೇಮ್’ನಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ದಕ್ಷಿಣ ಕೊರಿಯಾದ ಜನಪ್ರಿಯ ನಟ ವೈ ಹಾ ಜೂನ್, ಯಶ್ ಅವರ ಬ್ಲಾಕ್‌ಬಸ್ಟರ್ ಚಿತ್ರ ಕೆಜಿಎಫ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಿತ್ರದ ಹೈ ಆ್ಯಕ್ಟೇನ್ ಆ್ಯಕ್ಷನ್ ಮತ್ತು ಸಿನಿಮೀಯ ಪ್ರಮಾಣವನ್ನು ಎತ್ತಿ ಹಿಡಿದಿದ್ದಾರೆ. ...
ಏ. ೨ರಂದು ಹನುಮ ಜನ್ಮೋತ್ಸವ
-ಗುರುರಾಜ ಮ. ದೇಶಕುಲಕರ್ಣಿ ಅಚಲ ಭಕ್ತಿ, ಶಕ್ತಿಗೆ ಹೆಸರು ಹನುಮಂತ ರಾಮನ ಮೇಲಿಟ್ಟ ಭಕ್ತಿ, ಲಂಕೆಗೆ ಏಕಾಂಗಿಯ ಹೋಗಿ ಲಂಕಾದಹನ ಮಾಡಿದ ಪರಾಕ್ರಮಿ, ಗಟ್ಟಿ ಮುಟ್ಟಾದ ದೇಹವನ್ನು ಹೊಂದಿರುವ ಆಂಜನೇಯನ ಜನ್ಮವನ್ನು ಸ್ಮರಿಸಲು ಆಚರಿಸಲಾಗುವ ಹಬ್ಬವೇ ಹನುಮ ಜನ್ಮೋತ್ಸವ. ಹನುಮಂತನ ಜನನ: ಒಂದು ದಿನ ಪಾರ್ವತಿ, ಪರಮೇಶ್ವರರು ಕೈಲಾಸ ಪರ್ವತದಲ್ಲಿದ್ದಾಗ ಒಂದು ವಾನರಯುಗ್ಮವನ್ನು ಕಂಡರು. ಪಾರ್ವತಿ ಶಿವನೊಂದಿಗೆ ಕಲೆತು ಗರ್ಭವನ್ನು ಧರಿಸಿ ಅದನ್ನು ತಾಳಲಾರದೇ ಶಿವನಲ್ಲಿ ಮನವಿ ಮಾಡಿದಾಗ ಶಿವ ಆ ಗರ್ಭವನ್ನು ಪಾರ್ವತಿಯ ನಾಭಿಯಿಂದ ಹೊರಬೀಳುವಂತೆ ಮಾಡಿದ. ಭೂದೇವಿ ಅದನ್ನು ಧರಿಸಲಾರದೇ ಕಂಗೆಟ್ಟಳು. ಅದೇ ಸಮಯದಲ್ಲಿ ಗೌತಮನ ಪುತ್ರಿ, ಕೇಸರಿಯ ಪತಿ ಆಂಜನೆ ಪುತ್ರಕಾಂಕ್ಷೆಯಿAದ ತೀವ್ರವಾದ ಜಪ, ತಪ ಕೈಗೊಂಡಿದ್ದಳು. ಆಗ ವಾಯುದೇವ ಆಕೆಯ ರೂಪಕ್ಕೆ ಮರುಳಾಗಿ, ಆ ಗರ್ಭವನ್ನು ತೆಗೆದುಕೊಂಡು ಆಕೆಯ ಅಂಗೈಯಲ್ಲಿಟ್ಟ. ಆಕೆ ಅದನ್ನು ನುಂಗಿದಳು. ನವಮಾಸಗಳು ತುಂಬಿದ ಬಳಿಕ ಒಬ್ಬ ವಟು ಜನಿಸಿದ. ಜನಿಸಿದ ವಟುವೇ ಆಂಜನೇಯ. ಈ ವಟು ಸೂರ್ಯನನ್ನು ನೋಡಿ ಸೂರ್ಯನನ್ನೇ ನುಂಗಲು...
ಜಗತ್ತಿನಾದ್ಯಂತ ಬಳಕೆಯಲ್ಲಿರುವ ವಿವಿಧ ಕ್ಯಾಲೆಂಡರ್‌ಗಳು
ಕ್ಯಾಲೆಂಡರ್‌ಗಳು ಕೇವಲ ದಿನಾಂಕ ಪಟ್ಟಿಗಳಲ್ಲ; ಅವು ಧರ್ಮ, ನಂಬಿಕೆಗಳು, ಹಬ್ಬಗಳು ಮತ್ತು ಸೂರ್ಯ-ಚಂದ್ರರ ಚಲನೆಯನ್ನು ಆಧರಿಸಿದ ವಿಜ್ಞಾನದ ಪ್ರತಿಬಿಂಬಗಳಾಗಿವೆ. ಜಗತ್ತಿನ ೪೦ಕ್ಕೂ ಹೆಚ್ಚು ಕ್ಯಾಲೆಂಡರ್‌ಗಳಲ್ಲಿ ೧೧ ಪ್ರಮುಖವಾಗಿವೆ. ಹಿಂದೂ ಪಂಚಾoಗ, ಗ್ರೆಗೋರಿಯನ್, ಹಿಜ್ರಿ, ಚೈನೀಸ್, ಹೀಬ್ರೂ ಮತ್ತು ಬೌದ್ಧ ಕ್ಯಾಲೆಂಡರ್‌ಗಳು ವಿಭಿನ್ನವಾಗಿ ಕಾಲವನ್ನು ಅಳೆಯುವ ವಿಧಾನಗಳನ್ನು ಹೊಂದಿದೆ. ಕ್ಯಾಲೆಂಡರ್‌ಗಳು ಕೇವಲ ದಿನ, ತಿಂಗಳು ಮತ್ತು ವರ್ಷವನ್ನು ತಿಳಿಸುವ ಸಾಧನಗಳಲ್ಲ; ಅವು ಆಯಾ ಧರ್ಮದ ನಂಬಿಕೆಗಳು, ಹಬ್ಬಗಳು, ಶುಭ-ಅಶುಭ ಮುಹೂರ್ತಗಳು ಮತ್ತು ಸೂರ್ಯ-ಚಂದ್ರರ ಚಲನೆಯನ್ನು ಆಧರಿಸಿದ ವಿಜ್ಞಾನದ ಪ್ರತಿಬಿಂಬಗಳಾಗಿವೆ. ಜಗತ್ತಿನಾದ್ಯಂತ ಸುಮಾರು ೪೦ಕ್ಕೂ ಹೆಚ್ಚು ವಿಭಿನ್ನ ಕ್ಯಾಲೆಂಡರ್‌ಗಳು ಬಳಕೆಯಲ್ಲಿದ್ದರೂ, ಅವುಗಳಲ್ಲಿ ೧೧ ಕ್ಯಾಲೆಂಡರ್‌ಗಳು ಹೆಚ್ಚು ಪ್ರಸಿದ್ಧವಾಗಿವೆ. ಹಿಂದೂ ಪಂಚಾಂಗ: ಭಾರತೀಯ ಸಂಸ್ಕೃತಿಯಲ್ಲಿ ‘ಹಿಂದೂ ಪಂಚಾAಗ’ಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಸೌರ ಮತ್ತು ಚಂದ್ರ ಚಕ್ರಗಳೆರಡನ್ನೂ ಆಧರಿಸಿದ ಈ ಪಂಚಾಂಗವು ಸಮಯವನ್ನು ಅಳೆಯುವ ಅದ್ಭುತ ಸಾಧನವಾಗಿದೆ. ಇದರಲ್ಲಿ ಒಂದು ತಿಂಗಳನ್ನು ಶುಕ್ಲ ಪಕ್ಷ ಮತ್ತು ಕೃಷ್ಣ ಪಕ್ಷ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು, ಒಟ್ಟು...
ಆರ್‌ಸಿಬಿ Team ಗೆ ವಿರಾಟ್ ವಾರ್ನಿಂಗ್
ಐಪಿಎಲ್ ೨೦೨೬ ಸೀಸನ್ ಆರಂಭಕ್ಕೂ ಮುನ್ನವೇ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (ತಂಡದ ಆಟಗಾರರಿಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ತಂಡದ ತರಬೇತಿ ಶಿಬಿರದಲ್ಲಿ ಮಾತನಾಡಿದ ಕೊಹ್ಲಿ, ಈ ಸೀಸನ್ ಇನ್ನಷ್ಟು ಕಠಿಣವಾಗಲಿದೆ ಎಂದು ತಿಳಿಸಿದ್ದಾರೆ. ಮಾರ್ಚ್ ೨೮ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ೨೦೨೬ ಆರಂಭವಾಗಲಿದ್ದು, ಆರ್‌ಸಿಬಿ ಮೊದಲ ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಆಡಲಿದೆ. ಈ ಹಿನ್ನೆಲೆ ಈಗಾಗಲೇ ತಂಡ ತಯಾರಿ ಆರಂಭಿಸಿದ್ದು, ಕೊಹ್ಲಿಯ ಭರ್ಜರಿ ಬ್ಯಾಟಿಂಗ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ತಂಡದ ಸಹ ಆಟಗಾರರೊಂದಿಗೆ ಮಾತನಾಡಿದ ಕೊಹ್ಲಿ, ಕಳೆದ ೨-೩ ಸೀಸನ್‌ಗಳಲ್ಲಿ ನಾವು ತುಂಬಾ ಕಷ್ಟಪಟ್ಟಿದ್ದೇವೆ. ಕಳೆದ ವರ್ಷ ಸಾಧನೆ ಮಾಡಿದ್ದೇವೆ. ಆದರೆ ಈಗ ಇನ್ನಷ್ಟು ಕಷ್ಟವಾಗಲಿದೆ. ಇತರ ತಂಡಗಳು ನಮ್ಮ ವಿರುದ್ಧ ಇನ್ನಷ್ಟು ಆಕ್ರಮಣಕಾರಿ ಆಟ ಆಡಲಿವೆ ಎಂದು ಹೇಳಿದ್ದಾರೆ. ಒಂದು ನಿಮಿಷವೂ ವ್ಯರ್ಥ ಮಾಡಬಾರದು. ಪ್ರತಿಯೊಂದು ಸೆಷನ್‌ಗೂ ೧೨೦ ಪರ್ಸೆಂಟ್ ಕೊಡುಗೆ ನೀಡಬೇಕು. ಈ ಎರಡೂವರೆ ತಿಂಗಳು ನಮ್ಮ ಪಾಲಿಗೆ ಬಹಳ...
ಮೀನುಗಾರಿಕೆಗೂ ತಟ್ಟಿದ ಮಧ್ಯಪ್ರಾಚ್ಯ ಯುದ್ಧದ ಬಿಸಿ;
ಇಂಧನ ಸಂಕಷ್ಟ, ಆಳ ಸಮುದ್ರ ಮೀನುಗಾರಿಕೆಗೆ ಆತಂಕ ಕರಾವಳಿ ಆರ್ಥಕತೆ ಜೀವಾಳವೇ ಮೀನುಗಾರಿಕೆ. ಮಧ್ಯಪ್ರಾಚ್ಯದ ಯುದ್ಧದ ಬಿಸಿ ಮೀನುಗಾರಿಕೆಗೂ (fishing) ತಟ್ಟಿದೆ. ಕರಾವಳಿಯಲ್ಲಿ ಮೀನುಗಾರಿಕೆಗೆ ದೊಡ್ಡ ಸಂಕಷ್ಟ ಎದುರಾಗಿದೆ. ಡೀಸೆಲ್ ಕೊರತೆಯಿಂದಾಗಿ ಆಳ ಸಮುದ್ರ ಮೀನುಗಾರಿಕೆ ತೀವ್ರ ಆತಂಕಕ್ಕೆ ಒಳಗಾಗಿದೆ. ಪ್ರತಿದಿನ ಲಕ್ಷಾಂತರ ಲೀಟರ್ ಡೀಸೆಲ್ ಅವಲಂಬಿಸಿರುವ ಮೀನುಗಾರರು ಈಗ ಸಂಕಷ್ಟದ ಅಂಚಿನಲ್ಲಿದ್ದಾರೆ. ಕರಾವಳಿಯ ಆಳ ಸಮುದ್ರ ಮೀನುಗಾರಿಕೆ ಸಂಪೂರ್ಣವಾಗಿ ಡೀಸೆಲ್ ಪೂರೈಕೆಯನ್ನು ಅವಲಂಬಿಸಿದೆ. ಉಡುಪಿ-ಮಂಗಳೂರು ಭಾಗದಲ್ಲಿ ಪ್ರತಿದಿನ ೧೦ ರಿಂದ ೧೨ ಲಕ್ಷ ಲೀಟರ್ ಡೀಸೆಲ್ ಬಳಕೆಯಾಗುತ್ತಿದೆ. ಪ್ರತಿ ಬೋಟಿಗೆ ಸುಮಾರು ಸಾವಿರ ಲೀಟರ್ ಡೀಸೆಲ್ ಅಗತ್ಯವಿದೆ. ಆದರೆ ಇತ್ತೀಚೆಗೆ ಉಂಟಾದ ಡೀಸೆಲ್ ಕೊರತೆಯ ಸಮಸ್ಯೆ ಮೀನುಗಾರರ ಬದುಕಿನ ಮೇಲೆ ಬಿಸಿ ತಟ್ಟಲು ಆರಂಭಿಸಿದೆ. ಒಂದುವರೆ ಸಾವಿರಕ್ಕೂ ಅಧಿಕ ಬೋಟುಗಳು ಈ ಡೀಸೆಲ್ ಪೂರೈಕೆಯ ಮೇಲೆ ಅವಲಂಬಿತವಾಗಿವೆ. ಡೀಸೆಲ್ ಇಲ್ಲದೆ ಸಮುದ್ರಕ್ಕೆ ಹೋಗೋದು ಅಸಾಧ್ಯ. ಸಬ್ಸಿಡಿ ಸಿಗದಿದ್ದರೂ ಪರವಾಗಿಲ್ಲ. ನಮಗೆ ಡೀಸೆಲ್ ಬೇಕು ಡಿಸೇಲ್ ಸಿಕ್ರೆ ಸಾಕು ಅನ್ನುವ ಅಭಿಪ್ರಾಯ...









