ಇರಾನ್ ಕ್ಷಿಪಣಿ ದಾಳಿಯಿಂದ ಹಾನಿಗೆ ಒಳಗಾಗಿರುವ ಕತಾರ್‌ನ ರಾಸ್ ಲಫಾನ್ ಘಟಕ ದುರಸ್ತಿಯಾಗಲು ೩ ರಿಂದ ೫ ವರ್ಷ ತಗಲುವ ಸಾಧ್ಯತೆಯಿದೆ. ಕತಾರ್‌ನ ಉತ್ತರ ದೋಹಾದಿಂದ ೮೦ ಕಿ.ಮೀ. ದೂರದ ರಾಸ್ ಲಫಾನ್ ಕೈಗಾರಿಕಾ ನಗರದಲ್ಲಿದ್ದ ಎಲ್‌ಎನ್‌ಜಿ ಘಟಕದ ಮೇಲೆ ಇರಾನ್ ಮಾರ್ಚ್ ೧೮, ೧೯ರಂದು ೨ ದಿನ ಬ್ಯಾಕ್ ಟು ಬ್ಯಾಕ್ ಮಿಸೈಲ್ ಅಟ್ಯಾಕ್ ಮಾಡಿದೆ. ಇದರಿಂದಾಗಿ ಆ ಪ್ರದೇಶದಲ್ಲಿ ಎಲ್‌ಎನ್‌ಜಿ (LNG) ಉತ್ಪಾದನೆ ಸ್ಥಗಿತವಾಗಿದ್ದು, ಜಾಗತಿಕ ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಆಗಿದೆ. ಎಲ್‌ಎನ್‌ಜಿ ರಫ್ತಿನಲ್ಲಿ ಶೇ.೧೭ರಷ್ಟು ಕುಸಿತವಾಗಿದೆ. ಇದು ಕತಾರ್‌ನಿಂದ ಎಲ್‌ಎನ್‌ಜಿ ಆಮದು ಮಾಡಿಕೊಳ್ಳುವ ಭಾರತದಂಥಹ ರಾಷ್ಟ್ರಗಳಿಗೆ ದೊಡ್ಡ ಹೊಡತವೇ ಆಗಿದ್ದು, ಆತಂಕ ಎದುರಾಗಿದೆ. ವಿಶ್ವಕ್ಕೆ ರಾಸ್ ಲಫಾನ್ ಆಘಾತ ಏನು: ದುರಸ್ತಿಗೆ ಬೇಕಿದೆ ಕನಿಷ್ಠ ೩ ರಿಂದ ೫ ವರ್ಷ ಆಗತ್ಯವಿದ್ದು ದೀರ್ಘಾವಧಿ ಎಲ್‌ಎನ್‌ಜಿ ಪೂರೈಕೆ, ಒಪ್ಪಂದದಲ್ಲಿ ಬಿಕ್ಕಟ್ಟು ಎದುರಾರಾಗಿದೆ. ವಾರ್ಷಿಕ ಆದಾಯದಲ್ಲಿ ೨೦ ಮಿಲಿಯನ್ ಡಾಲರ್ (೧.೮೭ ಲಕ್ಷ ಕೋಟಿ ರೂ.) ನಷ್ಟವಾಗಲಿದೆ ಎಂದು...
ಮಧ್ಯಪ್ರಾಚ್ಯ ಸಂಘರ್ಷ: ಭಾರತದ ಪ್ರವಾಸೋದ್ಯಮ, ವಿಮಾನಯಾನ ಕ್ಷೇತ್ರಕ್ಕೆ ಆತಂಕ
ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಉದ್ವಿಗ್ನತೆ ಜಾಗತಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಲವಾರು ದೇಶಗಳ ವಾಯುಪ್ರದೇಶಗಳಲ್ಲಿ ನಿರ್ಬಂಧಗಳು, ವಿಮಾನ ಮಾರ್ಗ ಬದಲಾವಣೆಗಳು ಹಾಗೂ ಅಚಾನಕ್ ವಿಮಾನ ರದ್ಧತಿಗಳು ಹೆಚ್ಚುತ್ತಿರುವುದರಿಂದ ಜಾಗತಿಕ ವಿಮಾನ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಇದರ ಪರಿಣಾಮವಾಗಿ ಯುರೋಪ್, ಏಷ್ಯಾ ಮತ್ತು ಆಫ್ರಿಕಾ ನಡುವಿನ ಹಲವಾರು ವಿಮಾನ ಮಾರ್ಗಗಳಲ್ಲಿ ಪ್ರಯಾಣದ ವೆಚ್ಚವೂ ಗಣನೀಯವಾಗಿ ಏರಿಕೆಯಾಗಿದೆ. ಭಾರತದ ದೃಷ್ಟಿಯಿಂದ ಈ ಪರಿಸ್ಥಿತಿ ವಿಶೇಷವಾಗಿ ಗಂಭೀರವಾಗಿದೆ. ಭಾರತದಿಂದ ವಿಶ್ವದ ಅನೇಕ ದೇಶಗಳಿಗೆ ಹೋಗುವ ವಿಮಾನ ಸಂಚಾರವು ಬಹುಪಾಲು ಮಧ್ಯಪ್ರಾಚ್ಯದ ಪ್ರಮುಖ ಹಬ್‌ಗಳಾದ ದುಬೈ, ದೋಹಾ ಮತ್ತು ಅಬುಧಾಬಿ ಮೂಲಕ ಸಾಗುತ್ತದೆ. ಈ ಮಾರ್ಗಗಳಲ್ಲಿ ಉಂಟಾಗಿರುವ ವ್ಯತ್ಯಯಗಳಿಂದ ವಿಮಾನ ಸೇವೆಗಳ ವೇಳಾಪಟ್ಟಿಯಲ್ಲಿ ಬದಲಾವಣೆಗಳು ಕಂಡುಬರುತ್ತಿದ್ದು, ಪ್ರಯಾಣ ವೆಚ್ಚ ಹೆಚ್ಚಳದಿಂದ ಅನೇಕರು ತಮ್ಮ ಪ್ರಯಾಣವನ್ನು ಮುಂದೂಡಲು ಅಥವಾ ರದ್ದುಗೊಳಿಸಲು ಮುಂದಾಗುತ್ತಿದ್ದಾರೆ. ಸಾಮಾನ್ಯವಾಗಿ ಅರಬ್ ರಾಷ್ಟ್ರಗಳು ಮತ್ತು ಮಧ್ಯಪ್ರಾಚ್ಯ ದೇಶಗಳಿಂದ ಪ್ರತಿದಿನವೂ ಸುಮಾರು ೨೫ ರಿಂದ ೩೦...
ಹಾರ್ಮುಜ್ ಜಲಸಂಧಿ ಏಕೆ ಮುಖ್ಯ?
ಇದರಿಂದಾಗಿ ಕೇವಲ ಹಾರ್ಮುಜ್ ಜಲಸಂಧಿಗಳು ಮಾತ್ರ ಮುಚ್ಚಿಲ್ಲ. ಈ ಪ್ರದೇಶದ ಪ್ರಮುಖ ರಸಗೊಬ್ಬರ ಉತ್ಪಾದನಾ ಘಟಕಗಳು ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ವಿಶೇಷವಾಗಿ ಉತ್ತರ ದೇಶಗಳಲ್ಲಿನ ರೈತರು ತಮ್ಮ ಬೆಳೆಗಳನ್ನು ಬಿತ್ತಲು ಸಿದ್ಧರಾಗುತ್ತಿರುವ ಸಮಯದಲ್ಲಿ ಈ ಅಡಚಣೆ ಉಂಟಾಗಿದೆ. ಕತಾರ್‌ನಲ್ಲಿ ’ಕತಾರ್ ಎನರ್ಜಿ’ ನಡೆಸುತ್ತಿರುವ ವಿಶ್ವದ ಅತಿದೊಡ್ಡ ಏಕತಾಣ ಯೂರಿಯಾ ಸ್ಥಾವರವು ನೈಸರ್ಗಿಕ ಅನಿಲದ ಕೊರತೆಯಿಂದಾಗಿ ಉತ್ಪಾದನೆ ಸ್ಥಗಿತಗೊಳಿಸಿದೆ. ಈ ಪ್ರದೇಶದಲ್ಲಿನ ಅನೇಕ ನೈಸರ್ಗಿಕ ಅನಿಲ ಅಥವಾ ಎಲ್‌ಎನ್‌ಜಿ ಸ್ಥಾವರಗಳು ಸಹ ಹಾನಿಗೊಂಡಿದ್ದು, ಇದು ತೈಲ ಮತ್ತು ಅನಿಲ ಆರ್ಥಿಕತೆಯ ಸಂಪೂರ್ಣ ಅಡ್ಡಿಗೆ ಕಾರಣವಾಗಿದೆ. ಸಾರಜನಕ ಗೊಬ್ಬರದ ಉತ್ಪಾದನಾ ವೆಚ್ಚ ಸುಮಾರು ಶೇ೬೦ರಿಂದ ೮೦ರಷ್ಟಿದೆ. ಇದಲ್ಲದೇ, ಮಧ್ಯಪ್ರಾಚ್ಯದ ಅನೇಕ ಭಾಗಗಳಲ್ಲಿ ಗಂಧಕದAತಹ ಪ್ರಮುಖ ನಿರ್ಣಾಯಕ ಖನಿಕ ಪೂರೈಕೆಗಳು ಕಡಿತಗೊಂಡಿವೆ. ಇದು ಜಾಗತಿಕ ಗಂಧಕದ ವ್ಯಾಪಾರದ ಸರಿಸುಮಾರು ಶೇ೪೫ರಷ್ಟು ಪರಿಣಾಮ ಬೀರುತ್ತದೆ. ಜಾಗತಿಕವಾಗಿ ಫಾಸ್ಫೇಟ್ ಉತ್ಪಾದನೆಗೂ ಸಹ ತೊಂದರೆಯಾಗಬಹುದು. ಇದರ ಉತ್ಪಾದನೆ ಹೊರತಾಗಿ, ಜಾಗತಿಕ ಹಡಗು ಮಾರ್ಗಗಳ ಮೇಲೆ ಪರಿಣಾಮ ಬೀರಿದೆ. ಅನೇಕ ಹಡಗುಗಳು ತಮ್ಮ...
ಭಾರತೀಯ ಷೇರು ಮಾರು ಕಟ್ಟೆಗಳಲ್ಲಿ ತಲ್ಲಣ
ಭಾರತೀಯ ಷೇರುಪೇಟೆಯಲ್ಲಿ ಇಂದು ತೀವ್ರ ಕುಸಿತ ಕಂಡುಬAದಿದೆ. ಸೆನ್ಸೆಕ್ಸ್ ೧,೭೦೦ ಪಾಯಿಂಟ್ ಹಾಗೂ ನಿಫ್ಟಿ ಫಿಫ್ಟಿ ೪೧೨ ಪಾಯಿಂಟ್‌ಗಳ ಕುಸಿತ ಅನುಭವಿಸಿವೆ. ಎರಡು ದಿನಗಳ ರಜೆ ನಂತರ ಸೋಮವಾರ ಮಾರುಕಟ್ಟೆ ಓಪನ್ ಆಯಿತು. ಮಾರುಕಟ್ಟೆ ತೆರೆಯಲು ಬ್ಲಡ್ ಬಾತ್ ಮುಂದುವರಿದಿದೆ. ಸೆನ್ಸೆಕ್ಸ್ ೧,೭೮೬.೮೭ ಪಾಯಿಂಟ್ ಅಥವಾ ೨.೪೭% ಕುಸಿದು ೭೨,೭೨೨.೭೩ಕ್ಕೆ ತಲುಪಿದೆ. ನಿಫ್ಟಿ ೫೮೦.೫೫ ಪಾಯಿಂಟ್‌ಗಳು ಅಥವಾ ೨.೫೧% ಕುಸಿದು ೨೨,೫೩೦.೫೫ ಕ್ಕೆ ತಲುಪಿದೆ. ಆರಂಭಿಕ ವಹಿವಾಟಿನಲ್ಲಿ ಯುಎಸ್‌ಡಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ೩೩ ಪೈಸೆ ಕುಸಿದು ೯೩.೮೬ ಕ್ಕೆ ತಲುಪಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಹೋಗಿದೆ. ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆ ಮಾರುಕಟ್ಟೆಯಿಂದ ವಿದೇಶಿ ಹೂಡಿಕೆದಾರರು ನಿರ್ಗಮಿಸುತ್ತಿದ್ದಾರೆ. ಇತ್ತ ಯುದ್ಧದ ಭೀತಿ, ಕಚ್ಚಾತೈಲ, ಗ್ಯಾಸ್ ಕೊರತೆ ಹಿನ್ನೆಲೆ ದೇಶಿಯ ಹೂಡಿಕೆದಾರರಿಗೂ ಆತಂಕ ಎದುರಾಗಿದೆ. ಪರಿಣಾಮ ಮಾರುಕಟ್ಟೆ ನಿರಂತರವಾಗಿ ಕುಸಿಯುತ್ತಿದೆ.
ತೈಲ, ಎಲ್‌ಪಿಜಿ ಆಯ್ತು.. ಭಾರತಕ್ಕೀಗ ರಸಗೊಬ್ಬರ ಪೂರೈಕೆ, ಆಹಾರ ಭದ್ರತೆ ಮೇಲೆ ಎಫೆಕ್ಟ್ ಭೀತಿ
ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರವಾದ ಭಾರತವನ್ನು ಮುನ್ನಡೆಸುವುದು ಆಗ ಸವಾಲಿನ ಸಂಗತಿಯಾಗಿತ್ತು. ಹೆಚ್ಚುತ್ತಿದ್ದ ಜನಸಂಖ್ಯೆಗೆ ಆಗ ಆಹಾರ ಭದ್ರತೆ ಒದಗಿಸುವುದು ಪ್ರಮುಖ ಉದ್ದೇಶವಾಗಿತ್ತು. ಬರಗಾಲ, ಕ್ಷಾಮ, ನಿಧಾನಗತಿಯ ನೈಸರ್ಗಿಕ ಕೃಷಿಯಿಂದ ದೇಶದಲ್ಲಿ ಆಹಾರ ಅಭದ್ರತೆ ಉಂಟಾಗಿತ್ತು. ಕೂಳಿಗಾಗಿ ಭಾರತೀಯರು ಪರಿತಪಿಸುವಂತಾಗಿತ್ತು. ದೇಶಕ್ಕೆ ಮೊದಲು ಆಹಾರ ಭದ್ರತೆ ಒದಗಿಸಬೇಕೆಂದು ‘ಹಸಿರು ಕ್ರಾಂತಿ’ ಜಾರಿಗೆ ಬಂತು. ದೇಶದ ಕೃಷಿಯಲ್ಲಿ ಸುಧಾರಣೆ ತರಲಾಯಿತು. ವೈಜ್ಞಾನಿಕ ಕೃಷಿ ಪದ್ಧತಿಯಲ್ಲಿ ರಸಗೊಬ್ಬರ ಬಳಕೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ರಸಗೊಬ್ಬರಗಳು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು (ಸಾರಜನಕ, ರಂಜಕ, ಪೊಟ್ಯಾಶ್ – ಓPಏ) ಮಣ್ಣಿಗೆ ಒದಗಿಸುವ ಕೃತಕ ಅಥವಾ ನೈಸರ್ಗಿಕ ವಸ್ತುಗಳಾಗಿವೆ. ಇವು ಬೆಳೆ ಇಳುವರಿಯನ್ನು ಹೆಚ್ಚಿಸಲು ಮತ್ತು ಮಣ್ಣಿನ ಫಲವತ್ತತೆಯನ್ನು ಸುಧಾರಿಸಲು ಸಹಾಯ ಮಾಡುತ್ತವೆ. ಯೂರಿಯಾ, ಡಿಎಪಿ, ಮತ್ತು ಎನ್‌ಪಿಕೆ ಸಂಕೀರ್ಣ ಗೊಬ್ಬರಗಳು ಕೃಷಿಯಲ್ಲಿ ಸಾಮಾನ್ಯ ಬಳಕೆಯಲ್ಲಿವೆ. ಕೃಷಿಯಲ್ಲಿ ರಸಗೊಬ್ಬರ ಬಳಕೆಯಿಂದ ಬೆಳೆ ಇಳುವರಿ ಹೆಚ್ಚಾಗಿ ಆಹಾರ ಭದ್ರತೆಯಲ್ಲಿ ಭಾರತ ಸ್ವಾವಲಂಬಿ ಸಾಧಿಸಿತು. ದೇಶದ ರೈತರು ಕೃಷಿಯಲ್ಲಿ ರಸಗೊಬ್ಬರಕ್ಕೆ ಹೆಚ್ಚು...
ಭಾರತ ಸ್ವತಂತ್ರ ಇಂಧನ ನೀತಿ ಬಗ್ಗೆ ಯೋಚಿಸಲು ಇದು ಸೂಕ್ತ ಸಮಯವೇ?
ಭಾರತವು ಪಳೆಯುಳಿಕೆ ಅನಿಲವಿಲ್ಲದ ಅಡುಗೆ ಇಂಧನ ವ್ಯವಸ್ಥೆಯನ್ನು ಮರುಕಲ್ಪಿಸಿಕೊಳ್ಳಬೇಕು ಮತ್ತು ಸಾಂಪ್ರದಾಯಿಕ ವಿಧಾನಗಳ ಮೇಲೆ ಹೆಚ್ಚು ಅವಲಂಬಿತವಾಗಬೇಕು ಎಂದು ಲೇಖಕ ಇಂದ್ರ ಶೇಖರ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಅಡುಗೆ ಅನಿಲ ಸಿಲಿಂಡರ್‌ಗಾಗಿ ಸಮಸ್ಯೆ ಎದುರಿಸಬೇಕಾದ ಅಗತ್ಯವಿಲ್ಲ ಎಂದು ಸರ್ಕಾರ ಭರವಸೆ ನೀಡಿದ್ದರೂ, ಜನರು ಮಾತ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆ ದೇಶದ ಎಲ್‌ಎನ್‌ಜಿ, ಎಲ್‌ಪಿಜಿ ಬಳಕೆದಾರರ ಮೇಲೆ ಗಂಭೀರ ಪರಿಣಾಮ ಬೀರಿದೆ. ಗ್ಯಾಸ್ ಬೆಲೆಗಳು ಗಗನಕ್ಕೇರುತ್ತಿವೆ, ದೇಶದ ವಿವಿಧೆಡೆ ಜನರು ಸಿಲಿಂಡರ್‌ಗಾಗಿ ಸರತಿ ಸಾಲುಗಳಲ್ಲಿ ನಿಲ್ಲುವಂತಾಗಿದೆ. ಕಳೆದ ಕೆಲವು ದಿನಗಳಿಂದ ಕಾಳಸಂತೆಯಲ್ಲಿ ಅಡುಗೆ ಅನಿಲ ಮಾರಾಟ ಮತ್ತು ಅಕ್ರಮ ಸಂಗ್ರಹಣೆ ಬಗ್ಗೆ ವರದಿಗಳು ಬರುತ್ತಿವೆ. ಇದೀಗ ದೇಶ ಈ ಪರಿಸ್ಥಿತಿಯನ್ನು ನಿಭಾಯಿಸಬಹುದೇ ಎಂಬ ಪ್ರಶ್ನೆ ಉದ್ಭವಿಸಿದೆ?. ಶೇ.೭೦ಕ್ಕೂ ಹೆಚ್ಚು ಭಾರತೀಯ ಕುಟುಂಬಗಳು ದ್ರವೀಕೃತ ಪೆಟ್ರೋಲಿಯಂ ಅನಿಲವನ್ನು (ಐPಉ) ತಮ್ಮ ಪ್ರಾಥಮಿಕ ಅಡುಗೆ ಇಂಧನವಾಗಿ ಬಳಸುತ್ತವೆ ಮತ್ತು ಶೇ.೮೦ರಷ್ಟು ಮನೆಗಳು ಎಲ್‌ಪಿಜಿಯನ್ನು ಅವಲಂಬಿಸಿವೆ. ೨೦೨೦-೨೧ರ ದತ್ತಾಂಶವು ಶೇ.೮೯% ನಗರ ಕುಟುಂಬಗಳು ಎಲ್‌ಪಿಜಿಯನ್ನು ತಮ್ಮ ಪ್ರಾಥಮಿಕ...
ಸಂಪಾದಕೀಯ
ಸಂಘರ್ಷದ ಎಫೆಕ್ಟ್; ರಸಗೊಬ್ಬರಗಳ ಬೆಲೆ ಗಗನಕ್ಕೆ ಏರುವ ಸಾಧ್ಯತೆ ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯಿಂದಾಗಿ ಯೂರಿಯಾ ರಫ್ತು ಬೆಲೆಗಳು ಕಳೆದ ಶುಕ್ರವಾರ ಮೆಟ್ರಿಕ್ ಟನ್‌ಗೆ ಸುಮಾರು 40% ರಷ್ಟು ಏರಿಕೆಯಾಗಿವೆ. ಪ್ರಸ್ತುತ ಬೆಲೆಯು 700 ಡಾಲರ್‌ಗಿಂತ (ಅಂದಾಜು 58,000 ದಿಂದ 65,000 ರೂಪಾಯಿ) ಹೆಚ್ಚಾಗಿದೆ. ಯುದ್ಧ ಆರಂಭವಾಗುವ ಮೊದಲು ಇದು 500 ಡಾಲರ್‌ಗಿಂತ ಕಡಿಮೆ ಇತ್ತು. ಇರಾನ್ ವಲಯದಲ್ಲಿ ಸಂಘರ್ಷ ಪ್ರಾರಂಭವಾದಾಗಿನಿಂದ ಒಟ್ಟಾರೆ ರಸಗೊಬ್ಬರಗಳ ಬೆಲೆ 32% ರಷ್ಟು ಹೆಚ್ಚಾಗಿದೆ. ಯುದ್ಧ ಮುಂದುವರಿದರೆ ಯೂರಿಯಾದಂತಹ ಸಾರಜನಕ ಆಧಾರಿತ ರಸಗೊಬ್ಬರಗಳ ಬೆಲೆಗಳು ದ್ವಿಗುಣಗೊಳ್ಳಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ. “ಮಧ್ಯಪ್ರಾಚ್ಯವು ಮಾರುಕಟ್ಟೆಯಲ್ಲಿ ಹೊಂದಿರುವ ಪ್ರಬಲ ಪಾಲನ್ನು ಗಮನಿಸಿದರೆ, ಅಲ್ಲಿನ ಪೂರೈಕೆಯಲ್ಲಿ ಉಂಟಾಗುವ ನಷ್ಟವನ್ನು ಯಾವುದೇ ಉತ್ಪಾದಕರು ತ್ವರಿತವಾಗಿ ಸರಿದೂಗಿಸಲು ಸಾಧ್ಯವಿಲ್ಲ” ಎಂದು ಆರ್ಥಿಕ ವಿಶ್ಲೇಷಕ ಕ್ರಿಸ್ ಲಾಸನ್ ಹೇಳಿದ್ದಾರೆ. ವಿಶ್ವದ ಅತಿದೊಡ್ಡ ರಸಗೊಬ್ಬರ ರಫ್ತುದಾರ ರಾಷ್ಟ್ರವಾದ ರಷ್ಯಾವು ಉಕ್ರೇನ್‌ನ ಡ್ರೋನ್ ದಾಳಿಯಿಂದಾಗಿ ಪೂರೈಕೆಯಲ್ಲಿ ಅಡಚಣೆಗಳನ್ನು ಎದುರಿಸುತ್ತಿದೆ. ಇನ್ನೊಂದೆಡೆ ಚೀನಾವು ಸಾಕಷ್ಟು ಉತ್ಪಾದನಾ ಸಾಮರ್ಥ್ಯ ಹೊಂದಿದ್ದರೂ ಸಹ ರಫ್ತುಗಳ...









